Advertisement

ದರೋಡೆಗೆ ಹೊಂಚು ಹಾಕುತ್ತಿದ್ದ 8 ಮಂದಿ ಬಂಧನ! ಬಂಧಿತರಿಂದ ಸೊತ್ತುಗಳ ವಶ

02:59 PM Sep 17, 2020 | sudhir |

ಮೈಸೂರು: ದರೋಡೆ ಮಾಡಲು ಹೊಂಚು ಹಾಕಿದ್ದ ಎಂಟು ಮಂದಿ ದರೋಡೆಕೋರರನ್ನು ಸರಸ್ವತಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸರಸ್ವತಿಪುರಂ ಪೊಲೀಸ್‌ ಠಾಣೆ ಪಿಎಸ್‌ಐ ಭವ್ಯಾ ಅವರು ಸೆ.9ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ‌ ಬೋಗಾದಿ ರಿಂಗ್‌ ರಸ್ತೆಯಲ್ಲಿರುವ ಭೋಗಲಿಂಗೇಶ್ವರ ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ಕಾರೊಂದರ ಬಳಿ ಎಂಟು ವ್ಯಕ್ತಿಗಳು ನಿಂತಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಆರೋಪಿಗಳು ಬೋಗಾದಿ ರಿಂಗ್‌ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಮತ್ತು ವಾಹನ ಸವಾರರನ್ನು ಹೆದರಿಸಿ ಅವರಿಂದ ಹಣ ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿರುವುದು ಆರೋಪಿಗಳ ವಿಚಾರಣೆ ವೇಳೆ ಖಚಿತವಾಗಿದೆ ಎಂದು ಡಿಸಿಪಿ ಪ್ರಕಾಶ್‌ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶರತ್‌, ಸುಮಂತ್‌, ಧರ್ಮೇಶ್‌, ದಿನೇಶ್‌, ಸುನಿಲ್‌ಕುಮಾರ್‌, ಶಶಾಂಕ್‌, ಕಾರ್ತಿಕ್‌ ಬಂಧಿತರಾಗಿದ್ದು, ಆರೋಪಿಗಳಿಂದ 6 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಕಾರು, 4 ಬೈಕ್‌, 11 ಮೊಬೈಲ್‌ ಫೋನ್‌, ಒಂದು ಹಾಕಿ ಸ್ಟಿಕ್‌, ಎರಡು ಚಾಕು, ಐದು ಮಂಕಿ ಕ್ಯಾಪ್‌, ಖಾರದ ಪುಡಿ ಪ್ಯಾಕೇಟ್‌, ಒಂದು ರಾಡ್‌, ಮೂರು ವಿಕೆಟ್‌ಗಳು, ಒಂದು ಲಾಂಗ್‌ ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣ ಪತ್ತೆಯಿಂದ ಸರಸ್ವತಿಪುರಂ, ವಿದ್ಯಾರಣ್ಯಪುರಂ, ಲಕ್ಷ್ಮೀ ಪುರಂ, ವಿಜಯನಗರ ದರೋಡೆ ಪ್ರಕರಣ ಹಾಗೂ ಕೆ.ಆರ್‌.ಪೊಲೀಸ್‌ ಠಾಣೆ ವ್ಯಾಪ್ತಿಯ ಕೊಲೆಯತ್ನ ಪ್ರಕರಣ ಪತ್ತೆಯಾಗಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next