ಮೈಸೂರು: ದ್ವಿಚಕ್ರ ವಾಹನ, ಎತ್ತಿನಗಾಡಿಯಲ್ಲಿ ರೈತರುಮತ್ತು ಸ್ಥಳೀಯರು ತಮ್ಮ ಅಗತ್ಯಕ್ಕೆ ಮರಳು ಸಾಗಿಸಿಕೊಂಡರೆಪ್ರಕರಣ ದಾಖಲಿಸುವಂತಿಲ್ಲ ಎಂದು ಸಚಿವ ಮುರಗೇಶ್‌ಆರ್.ನಿರಾಣಿ ತಿಳಿಸಿದರು.
ಭಾನುವಾರ ಜಿಲ್ಲಾಧಿಕಾರಿಗಳಕಚೇರಿಯಲ್ಲಿ ಜಿಲ್ಲಾಮಟ್ಟದಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಮರಳುಮಾಫಿಯಾ ತಡೆಯಲು 15 ದಿನಗಳಲ್ಲಿ ಕಠಿಣವಾದ ಮರಳುನೀತಿ ಜಾರಿಗೆ ತರುತ್ತೇವೆಂದು ತಿಳಿಸಿದರು.
ಅಧಿಕಾರಿಗಳಿಗೆ ಸೂಚನೆ: ಶೇ.30 ಹಣ ಕೋವಿಡ್ ನಿರ್ವಹಣೆಗೆ ಬಳಕೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ2017ರಿಂದ 2021ರವರೆಗೆ ಬಾಕಿ ಇರುವ 16 ಸಾವಿರ ಕೋಟಿರೂ. ಹಣದಲ್ಲಿ ಶೇ.30 ಭಾಗವನ್ನು ಕೋವಿಡ್ ನಿರ್ವಹಣೆಗೆಬಳಸಲಾಗುತ್ತದೆ. ಶೇ.30 ಹಣ ಬಳಸಿಕೊಳ್ಳಲು ಇಲಾಖೆಕಾಯಿದೆಗಳಲ್ಲಿ ಅವಕಾಶ ಇದೆ. ಅದಕ್ಕಿಂತಲೂ ಹೆಚ್ಚಿನ ಹಣಅಗತ್ಯವಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುಮತಿ ಪಡೆದುಕೊಳ್ಳುತ್ತೇವೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚಿಸಿರುವೆ ಎಂದು ವಿವರಿಸಿದರು.
ಜತೆಗೆ ಇಲಾಖೆ ವತಿಯಿಂದ ರಾಜ್ಯದ ಪ್ರತಿ ವಿಭಾಗದಲ್ಲಿ 2ಆಕ್ಸಿಜನ್ ಟ್ಯಾಂಕರ್, 1 ಸಾವಿರ ಆಕ್ಸಿಜನ್ ತುಂಬುವ 2 ಆಕ್ಸಿಜನ್‌ಜನರೇಟರ್,ಆಕ್ಸಿಜನ್‌ಕಾನ್ಸನ್‌ಟ್ರೇಟರ್ ಒದಗಿಸಲಾಗುವುದು. ಜಿಲ್ಲೆಗೊಂದು ಮೊಬೈಲ್ ಆಕ್ಸಿಜನ್ ಜನರೇಟರ್‌ನೀಡುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.
ಔಷಧ ಕೊರತೆಯಿಲ್ಲ: ಕೊರೊನಾ ಸವಾಲನ್ನು ಜಿÇÉಾಡಳಿತಮತ್ತು ಸರ್ಕಾರ ಸಮರ್ಥವಾಗಿ ಎದುರಿಸುತ್ತಿವೆ. ಹಾಸಿಗೆಗಳಿಗೆಕೊರತೆ ಇಲ್ಲ. ಆಕ್ಸಿಜನ್ ಬೇಡಿಕೆ ಕಡಿಮೆ ಆಗಿದೆ. ಬ್ಲಾಕ್‌ಫಂಗಸ್ ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ಸೋಂಕು ಅಲ್ಲ.ಆದರೂ, ಜಾಗರೂಕತೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಬ್ಲಾಕ್ ಫಂಗಸ್ ಔಷಧ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.ಕಾಲೇಜು ತೆರೆಯಲು ಮುಂದೆ ಬಂದರೆ ಅನುಮತಿ: ರಾಜ್ಯದಲ್ಲಿ ಹೊಸ ನರ್ಸಿಂಗ್ ಕಾಲೇಜು ಬೇಡ ಎಂಬ ತೀರ್ಮಾನಕ್ಕೆಬರಲಾಗಿತ್ತು. ಈಗ ನರ್ಸ್‌ಗಳ ಕೊರತೆ ಉಂಟಾಗಿದೆ.ನರ್ಸಿಂಗ್‌ಕಾಲೇಜು ತೆರೆಯಲು ಶೈಕ್ಷಣಿಕ ಸಂಸ್ಥೆಗಳು ಮುಂದೆ ಬಂದರೆ ಅನುಮತಿ ನೀಡಲಾಗುವುದು. ಕೋವಿಡ್-19ಸಾಂಕ್ರಾಮಿಕದ ವೇಳೆ ಕೆಲಸ ಮಾಡುವ ಅಂತಿಮ ವರ್ಷದಎಂಬಿಬಿಎಸ್, ಆಯುರ್ವೇದ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗುವುದು ಎಂದುಹೇಳಿದರು.