Advertisement
ಬೆಳಗ್ಗೆ ಮೈಸೂರು ಮನೆಯಲ್ಲಿ ಪೂಜ್ಯರಿಂದ ಆಶೀರ್ವಾದ ಪಡೆದುಕೊಂಡ ಶಾಸಕರು ಬಿಳಿಕೆರೆಯ ಕೋಡಿ ಗಣಪತಿ ದೇವಾಲಯ, ಹುಣಸೂರಿನ ಸಾಯಿಬಾಬ ಮಂದಿರ, ಕನ್ಯಕಾಪರಮೇಶ್ವರಿ, ಮುತ್ತುಮಾರಮ್ಮ ದೇವಾಲಯಗಳಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.
Related Articles
Advertisement
ವಾರಿಯರ್ಸ್ ಗೆ ವಿಮೆ ಸೌಲಭ್ಯ:
ಕೋವಿಡ್ ಸೋಂಕಿತರ ಶವ ಸಂಸ್ಕಾರ ನಡೆಸುವ 35 ಮಂದಿ ವಾರಿಯರ್ಸ್ ಗಳಿಗೆ 2 ಲಕ್ಷರೂಪಾಯಿಯ ವಿಮೆ ಬಾಂಡ್ ಹಾಗೂ ಪಿಪಿಇ ಕಿಟ್ ವಿತರಿಸಲಾಯಿತು. ರೈತರಿಗೆ ತೆಂಗಿನ ಸಸಿ ವಿತರಿಸಿದರು. ನಗರಸಭಾ ಸದಸ್ಯೆ ಪ್ರಿಯಾಂಕಾ ಥಾಮಸ್ ವೆನ್ನಿಯವರು ನರಸಿಂಹಸ್ವಾಮಿ ತಿಟ್ಟು ಬಡಾವಣೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸಿದ್ದರು.
ಬೈ ಪ್ಯಾಕ್, ಆಕ್ಸಿಜನ್ ಮಾಸ್ಕ್ ವಿತರಣೆ :
ನಗರದ ಡಿ. ದೇವರಾಜ ಅರಸು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಸೋಂಕಿತರಿಗಾಗಿ ಬೈಪ್ಯಾಕ್, ಆಕ್ಸಿಜನ್ ಮಾಸ್ಕ್ ನನ್ನು ಟಿಎಚ್‌ಓ ಡಾ.ಕೀರ್ತಿಕುಮಾರ್ ರಿಗೆ ಹಸ್ತಾಂತರಿಸಿದರು. ಕಾಂಗ್ರೆಸ್ ಯುವ ಮುಖಂಡ ರಾಜು ಶಿವರಾಜೇ ಗೌಡರು ಪತ್ರಕರ್ತರಿಗೆ ಕೊಡಮಾಡಿದ ಫೇಸ್ ಶೀಲ್ಡ್ ವಿತರಿಸಿದರು. ತಾಲೂಕಿನ ಐದು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಆರೈಕೆಯಲ್ಲಿರುವವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸ್ನೇಹಜೀವಿ ಬಳಗ, ಶಾಸಕರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ನ ವಿವಿಧ ಘಟಕಗಳವರು ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸೌಲಭ್ಯ ವಿತರಿಸಿ ಮಾತನಾಡಿದ ಶಾಸಕರು ತಮ್ಮ ಹುಟ್ಟುಹಬ್ಬವನ್ನು ಈ ಕೋವಿಡ್ ಸಂದರ್ಭದಲ್ಲೂ ಸ್ನೇಹಜೀವಿಯ ಸ್ನೇಹಿತರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿ ಸರಳ ಹಾಗೂ ಅರ್ಥಪೂರ್ಣ, ಜನಹಿತ ಕಾರ್ಯಗಳನ್ನು ಆಯೋಜಿಸಿದ್ದಕ್ಕೆ ಅಭಿನಂದಿಸಿ, ಈ ಕಾರ್ಯಕ್ಕೆ ಅನೇಕ ದಾನಿಗಳು ನೆರವು ನೀಡಿದ್ದಾರೆಂದು ಕೃತಜ್ಞತೆ ಸಲ್ಲಿಸಿದರು.
ತಾಲೂಕಿನ ಕೋವಿಡ್ ನಿಯಂತ್ರಣದಲ್ಲಿ ತಹಸೀಲ್ದಾರ್ ಬಸವರಾಜು, ಇಓ. ಗಿರೀಶ್, ಪಿಡಿಓಗಳು ಸೇರಿದಂತೆ ವೈದ್ಯರು, ಆರೋಗ್ಯ,ಆಶಾ-ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಕ್ರೀಯವಾಗಿ ತೊಡಗಿಸಿಕೊಂಡಿರುವ ತೊಡಗಿಸಿಕೊಂಡಿದ್ದೀರಾ ನಿಮ್ಮ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲವೆಂದು ಅಭಿನಂದಿಸಿ, ಇನ್ನು 15 ದಿನದಲ್ಲಿ ಎಲ್ಲರೂ ಸೇರಿ ಕೋವಿಡ್ ನಿಯಂತ್ರಿಸುವಲ್ಲಿ ಶ್ರಮವಹಿಸೋಣವೆಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಗೌರಮ್ಮಸೋಮಶೇಖರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ್‌ನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯಕುಮಾರ್, ಜಿಲ್ಲಾ ಯುವ ಅಧ್ಯಕ್ಷ ಡೊನಾಲ್ಡ್, ಮಹಿಳಾ ಘಟಕದ ಕವಿತಾಕಾಳೆ, ಕಾಂಗ್ರೆಸ್ ಮುಖಂಡ ಹರೀಶ್‌ಗೌಡ, ಯುವ ಮುಖಂಡ ರಾಜುಶಿವರಾಜೇಗೌಡ, ಉದ್ಯಮಿನಂಜುಂಡಸ್ವಾಮಿ, ಬೆಂಕಿಪುರಕುಮಾರಸ್ವಾಮಿ, ತಿಪ್ಪೂರುಮಹದೇವ್, ದಿಲೀಪ್, ಸ್ನೇಹಜೀವಿ ಬಳಗದ ಆನಂದ್, ಹರ್ಷವರ್ಧನ್‌ರಮೇಶ್, ಡಾ,ವೃಷಬೇಂದ್ರಪ್ಪ, ಗಣಪತಿಇಂಡೋಲ್ಕರ್, ಲೋಕೇಶರಾವ್ ಕದಂ, ದೇವರಾಜ್ ಸೇರಿದಂತೆ ಅನೇಕ ಮುಖಂಡರಿದ್ದರು.
ಹನಗೋಡು ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ:
ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಅವರ ಸಹೋದರ ಉದ್ಯಮಿ ಎಚ್.ಪಿ.ಅಮರ್‌ನಾಥ್-ಡಾ.ಪುಷ್ಪಅಮರ್‌ನಾಥ್ ಕೊಡುಗೆಯಾಗಿ ನೀಡಿದ ಆಂಬುಲೆನ್ಸ್‌ನ್ನು ಹನಗೋಡು ಆಸ್ಪತ್ರೆಗೆ ನೀಡಿದ್ದು, ಡಾ.ಜೋಗೇಂದ್ರನಾಥರಿಗೆ ಕೀ ಹಸ್ತಾಂತರಿಸಿ, ಆಸ್ಪತ್ರೆಯ ರಕ್ಷಾಸಮಿತಿವತಿಯಿಂದ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು. ಡಾ.ಪುಷ್ಪಅಮರ್‌ನಾಥ್, ತಹಸೀಲ್ದಾರ್ ಬಸವರಾಜು, ಇಓ ಗಿರೀಶ್, ಟಿಎಚ್ ಓ ಡಾ.ಕೀರ್ತಿಕುಮಾರ್,ಡಾ.ವೃಷಭೇಂದ್ರಸ್ವಾಮಿ ಇದ್ದರು.
ಇದನ್ನೂ ಓದಿ : ಸಾಗರೋತ್ತರ ವ್ಯವಹಾರಗಳ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತ ಸಾಧ್ಯತೆ : ರಾಜನಾಥ್ ಸಿಂಗ್