Advertisement
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರದಂದು ಕಾರ್ಮಿಕ ಇಲಾಖೆವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ಪದಾರ್ಥಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿ ತಾಲೂಕಿನಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ನೊಂದಾಯಿಸಿಕೊಂಡಿದ್ದಾರೆ, ಈ ಪೈಕಿ 5 ಸಾವಿರ ಮಂದಿಗೆ ಮಾತ್ರ ಪಡಿತರ ಕಿಟ್ ನೀಡಲಾಗುತ್ತಿದೆ. ಗುಣಮಟ್ಟ ಕಾಪಾಡಲು ತಾಲೂಕು ಆಡಳಿತಕ್ಕೆ ಜವಾಬ್ದಾರಿವಹಿಸಿ ತಪಾಸಣೆ ನಡೆಸಿದ ನಂತರವಷ್ಟೆ ವಿಕಿಟ್ ಸಿದ್ದಪಡಿಸಲಾಗಿದೆ.
Related Articles
Advertisement
ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್ ಅಲೆಯಲ್ಲಿ ಕಟ್ಟಡ ಕಾರ್ಮಿಕರ ಖಾತೆಗೆ ನೇರವಾಗಿ ತಲಾ 5 ಸಾವಿರ ರೂನಂತೆ 4 ಸಾವಿರ ಮಂದಿ ಖಾತೆಗೆ ನೇರಹಣ ವರ್ಗಾವಣೆ ಮಾಡಲಾಗಿದೆ, ಎರಡನೇ ಅಲೆಯಲ್ಲೂ ಸಹ ತಲಾ ೩ ಸಾವಿರದಂತೆ 4500ಮಂದಿ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದು ಮಾಹಿತಿ ನೀಡಿದರು. 756 ಮಂದಿಗೆ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸವರಾಜು, ನಗರಸಭೆ ಅಧ್ಯಕ್ಷೆ ಅನುಷಾ, ಉಪಾಧ್ಯಕ್ಷ ದೇವನಾಯ್ಕ, ಇನ್ಸ್‌ಪೆಕ್ಟರ್ ರವಿ, ಎಸ್.ಐ.ಪಂಚಾಕ್ಷರಿ ಕಾರ್ಮಿಕ ಇಲಾಖೆ ನಿರೀಕ್ಷಕ ಲಕ್ಷ್ಮೀಶ್, ಕಾರ್ಮಿಕ ಇಲಾಖೆ ಸಿಬ್ಬಂದಿಗಳು, ಕಲಟ್ಟಡ ಮತ್ತು ಇತರೆ ಕಾರ್ಮಿಕರ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿಶ್ರೀನಿವಾಸ್, ಕಾರ್ಮಿಕ ಬಂಧು ಪ್ರಸಾದ್,ಮಂಜುನಾಥ್, ಶಿವರಾಮು ಸೇರಿದಂತೆ ಅನೇಕರು ಇದ್ದರು.
ಎಲ್ರಪ್ಪಾ ಹೋಂಗಾಡ್ಸ್ ಎಂದ ಶಾಸಕ:
ಪಡಿತರಕಿಟ್ ವಿತರಣೆ ಮಾಡುವ ಬಗ್ಗೆ ಮಾಹಿತಿ ಪಡೆದ ಕಾರ್ಮಿಕರು ಬೆಳಗ್ಗೆಯಿಂದಲೇ ಅಂಬೇಡ್ಕರ್ ಭವನದ ಬಳಿಯಲ್ಲಿ ಜಮಾಯಿಸಿದ್ದರಿಂದ ಜನಜಂಗುಳಿ ಉಂಟಾಗಿತ್ತು, ಕಾರ್ಯಕ್ರಮಕ್ಕಾಗಮಿಸಿದ ಶಾಸಕರು ಜನರನ್ನು ಕಂಡು ಹೌಹಾರಿ ಎಲ್ರಪ್ಪಾ ಹೋಂಗಾಡ್ಸ್‌ಗಳು ನಿನ್ನೆವರೆಗೆ ಲ್ಲೇ ಇದ್ರಲ್ಲ ಎಲ್ಲಿಗೆ ಹೋದರು ಎಂದಿದ್ದಕ್ಕೆ ಜು.5ರವರೆಗೆ ಡ್ಯೂಟಿ ಮಾಡಿ ಜಿಲ್ಲಾಡಳಿತದ ಸೂಚನೆಯಂತೆ ವಾಪಾಸ್ಸಾಗಿದ್ದಾರೆಂಬ ಅಧಿಕಾರಿಗಳ ಮಾಹಿತಿಗೆ ತಾವೇ ಮುಂದೆ ನಿಂತು ಎಲ್ಲರನ್ನು ಮೈದಾನದತ್ತ ಕಳುಹಿಸಿ,ಎಲ್ಲರಿಗೂ ಕಿಟ್ ವಿತರಿಸಲಾಗುವುದು. ಸಾಮಾಜಿಕ ಅಂತರ ಕಾಪಾಡುವಂತೆ ಮೈಕ್ ಮೂಲಕ ಮನವಿ ಮಾಡಿದರು. ಇನ್ಸ್‌ಪೆಕ್ಟರ್ ರವಿ, ಎಸ್.ಐ.ಪಂಚಾಕ್ಷರಿ ಹಾಗೂ ಸಿಬ್ಬಂದಿಗಳು ಭವನದ ಸುತ್ತ ಬ್ಯಾರಿಕೇಡ್ ಹಾಕಿ ಜನರನ್ನು ನಿಯಂತ್ರಿಸಿದರು.
ಇತರೆ ನಿಗಮಕ್ಕೂ ವಿಸ್ತರಣೆಯಾಗಲಿ:
ಸರಕಾರ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳ ಆರ್ಥಕ ಸಬಲೀಕರಣಕ್ಕಾಗಿ ಅಂಬೇಡ್ಕರ್ ಮತ್ತು ವಾಲ್ಮಿಕಿ ನಿಗಮಗಳ ಮೂಲಕ ಎಸ್.ಸಿ ಮತ್ತು ಎಸ್.ಟಿ.ಸಮುದಾಯಕ್ಕೆ ಒಂದು ಲಕ್ಷ ಸಹಾಯಧನದೊಂದಿಗೆ 5 ಲಕ್ಷದವರೆಗೆ ವೈಯಕ್ತಿ ಸಾಲ ನೀಡುವ ಯೋಜನೆ ಜಾರಿಗೊಳಿಸಿದ್ದು, ಇದೇ ಮಾದರಿಯಲ್ಲಿ ಇತರೆ ಹಿಂದುಳಿದ ನಿಗಮಗಳವತಿಯಿಂದಲೂ ವಿತರಣೆಗೆ ಸರಕಾರ ಮುಂದಾಗಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಒತ್ತಾಯಿಸಿದರು.