ಎಚ್.ಡಿ.ಕೋಟೆ: ಮದ್ಯದ ಅಮಲಿಗೆ ಬಿದ್ದವರು ಹೇಗಾದರೂ ಮಾಡಿ ಅದನ್ನು ಧಕ್ಕಿಸಿಕೊಂಡು ನಶೆ ಏರಿಸಿಕೊಳ್ಳುತ್ತಾರೆ. ಈ ನಡಯವೆ, ಕಾಲ್ನಡಿಗೆಯಲ್ಲಿನದಿಯನ್ನೇ ದಾಟಿಕೊಂಡು ಮದ್ಯ ಖರೀದಿಗೆ ಜನರು ದುಂಬಾಲು ಬೀಳುತ್ತಿದ್ದಾರೆ. ಈ ದೃಶ್ಯಗಳು ಕೇರಳಗಡಿಗೆ ಹೊಂದಿಕೊಂಡಿರುವ ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಕಂಡು ಬರುತ್ತಿವೆ.
ಕೇರಳದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸಲಾಗಿದೆ. 2 ರಾಜ್ಯಗಳನ್ನು ಬೇರ್ಪಡಿಸುವಂತೆ ಕಪಿಲಾ ನದಿ ಹರಿಯುತ್ತಿದೆ. ಕೇರಳ ಗಡಿಯಲ್ಲಿರುವ ಗ್ರಾಮಗಳಜನರು ಕಪಿಲಾ ನದಿಯನ್ನು ದಾಟಿದರೆ ಕರ್ನಾಟಕದನೆಲ ಸಿಗುತ್ತದೆ. ಹೀಗಾಗಿ ಅಲ್ಲಿನ ಜನರು ಕಾಲ್ನಡಿಗೆಯಲ್ಲಿ ನದಿ ದಾಟಿ ಡಿ.ಕೆ.ಕುಪ್ಪೆಗೆ ಬಂದು ಮದ್ಯ ಖರೀದಿಸಿ ನದಿಮೂಲಕವೇ ಹಿಂದಿರುಗುತ್ತಿದ್ದಾರೆ.ಇದೀಗ ಕಪಿಲಾ ನದಿ ಹರಿವು ಕ್ಷೀಣಿಸಿದ್ದು, ಮೊಣಕಾಲು ಮಟ್ಟದಲ್ಲಿ ಹರಿಯುತ್ತಿರುವ ನದಿಯನ್ನುಕಾಲ್ನಡಿಗೆಯಲ್ಲಿ ಸುಲಭವಾಗಿ ದಾಟಬಹುದಾಗಿದೆ.ಪ್ರತಿದಿನ ಕೇರಳಿಗರು ಸುಮಾರು ಕಾಲು ಕಿ.ಮೀ.(ಮೂರು ಪರ್ಲಾಂಗ್) ಕಾಲ್ನಡಿಗೆಯಲ್ಲಿ ನದಿಯನ್ನುದಾಟಿ ಡಿ.ಕೆ.ಕುಪ್ಪೆಗೆ ಬಂದು ಮದ್ಯ ಖರೀದಿಸುತ್ತಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಹಾಗೂಕೇರಳದ ಪುಲ್ಪಳ್ಳಿ ಪೆರಿಯಕಲ್ಲೂರು ಸೇರಿದಂತೆ ಇನ್ನಿತಗ್ರಾಮಗಳ ನಡುವೆ ಕಪಿಲ ನದಿ ಹರಿಯುತ್ತಿದೆ. ಕಪಿಲನದಿಯ ಈ ದಡ ಕರ್ನಾಟಕ ರಾಜ್ಯದಡಿ.ಬಿ.ಕುಪ್ಪೆಯಾದರೆ ನದಿ ದಾಟಿ ಆ ಕಡೆ ದಡ ಸೇರಿದರೆಕೇರಳ ರಾಜ್ಯವಾಗಿದೆ. ಡಿ.ಬಿ.ಕುಪ್ಪೆಯಿಂದ ಕಪಿಲಾನದಿ ದಾಟಲು ಮಾನವ ಕೈ ಚಾಲಿತ ದೋಣಿಗಳನ್ನುಬಳಸಲಾಗುತ್ತಿತ್ತು. ಇದೀಗ ಕೊರೊನಾ, ಲಾಕ್‌ಡೌನ್‌ಹಿನ್ನೆಲೆಯಲ್ಲಿ 2 ತಿಂಗಳಿನಿಂದ ದೋಣಿ ಸಂಚಾರ ನಿಷೇಧಿಸಲಾಗಿದೆ.
ಹೀಗಾಗಿ ಕೇರಳ ಗಡಿ ಗ್ರಾಮಗಳಜನರು ಕಾಲ್ನಡಿಗೆಯಲ್ಲೇ ನದಿಯನ್ನು ದಾಟಿ ಕರ್ನಾಟಕಪ್ರವೇಶಿಸಿ, ಮದ್ಯದಂಗಡಿಗಳಿಗೆ ಆಗಮಿಸಿ ತಮಗೆಬೇಕಾದ ಬ್ರ್ಯಾಂಡ್‌ಗಳ ಮದ್ಯವನ್ನು ಸಾಕಾಗುವಷ್ಟು ಖರೀಸುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ7ರಿಂದ 10 ಗಂಟೆ ತನಕ ಮಾತ್ರ ಮದ್ಯ ಮಾರಾಟಕ್ಕೆಅವಕಾಶ ನೀಡಲಾ ಗಿದೆ. ಆದರೆ ರಾತ್ರಿಯ ತನಕವೂ ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಕೇರಳ ವ್ಯಾಪ್ತಿಗೆ ಸೇರುವ ಪುಲ್ಪಳ್ಳಿ, ಪೆರಿಯ ಕಲ್ಲೂರುಸೇರಿದಂತೆ ಹತ್ತಾರು ಹಳ್ಳಿಗಳ ಮದ್ಯವ್ಯಸನಿಗಳುಬೆಳಗ್ಗೆಯಿಂದ ಸಂಜೆಯವರೆಗೂ ಕಪಿಲಾ ನದಿಯನ್ನುದಾಟಿ ಕರ್ನಾಟಕ ಪ್ರವೇಶಿಸಿ ಅಗತ್ಯವಿರುಷ್ಟು ಮದ್ಯ ಖರೀದಿಸಿ ತಮ್ಮ ಕೇರಳ ರಾಜ್ಯಕ್ಕೆ ಹಿಂತಿರುಗುತ್ತಿದ್ದಾರೆ. ಪ್ರಸ್ತುತ ಕಪಿಲಾ ನದಿಯ ನೀರಿನ ಹರಿವಿನ ಪ್ರಮಾಣ ಕ್ಷೀಣಿಸಿದೆ.
ಮಳೆಗಾಲ ಕೂಡ ಆರಂಭಗೊಂಡಿದ್ದು,ಒಳಹರಿವಿನಲ್ಲಿ ಯಾವಾಗ ಏರಿಕೆಯಾಗುತ್ತದೆ ಎಂಬುದು ತಿಳಿಯುವುದಿಲ್ಲ.ನದಿ ದಾಟುವಾಗ ನೀರಿನ ಪ್ರಮಾಣ ಏರಿಕೆಯಾದರೆ,ಅಥವಾ ಕಲ್ಲು ಬಂಡೆಗಳಿಗೆ ಸಿಲುಕಿದರೆ ಜನರು ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ತಾಲೂಕುಆಡಳಿತ ಕೂಡಲೇ ಕ್ರಮ ವಹಿಸಿ, ಅಕ್ರಮ ಮದ್ಯಮಾರಾಟ ಹಾಗೂ ಕಾಲ್ನಡಿಗೆ ಸಂಚಾರವನ್ನು ನಿಲ್ಲಿಸಬೇಕಿದೆ.
ಎಚ್.ಬಿ.ಬಸವರಾಜು