Advertisement

ಮದ್ದೂರು ಪೇಟೆಬೀದಿಯಲ್ಲಿ ಖರೀದಿ ಭರಾಟೆ ಜೋರು

08:06 PM Apr 02, 2022 | Team Udayavani |

ಚಾಮರಾಜನಗರ: ತ್ರಿವಿಧ ದಾಸೋಹಿ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ115ನೇ ಜಯಂತ್ಯುತ್ಸವವನ್ನು ನಗರದ ವಿವಿಧೆಡೆಭಕ್ತಿ ಭಾವದಿಂದ ಆಚರಿಸಲಾಯಿತು.ವಿವಿಧೆಡೆ ಡಾ.ಶಿವಕುಮಾರಸ್ವಾಮೀಜಿ ಅವರಭಾವಚಿತ್ರವನ್ನಿಟ್ಟು ಪುಷ್ಪ ನಮನ ಸಲ್ಲಿಸಿ, ವಿಶೇಷಪೂಜೆ ಮೂಲಕ ಜಯಂತ್ಯುತ್ಸವ ಆಚರಿಸಲಾಯಿತು.

Advertisement

ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಸಿಹಿಹಂಚಲಾಯಿತು.ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮಿಗಳ115ನೇ ಜಯಂತಿ ಮಹೋತ್ಸವ ವಿಶ್ವಕ್ಕೆ ದಾಸೋಹದಮಹತ್ವವನ್ನು ಸಾರುತ್ತಿದೆ ಎಂದು ಕೇಂದ್ರ ಪರಿಹಾರಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಗುಣಗಾನಮಾಡಿದರು. ನಗರದ ರಾಮಸಮುದ್ರದ ಅರಳೀಕಟ್ಟೆಮುಖ್ಯರಸ್ತೆಯಲ್ಲಿ ಅಯೋಜನೆ ಮಾಡಿದ್ದಸಿದ್ಧಗಂಗಾ ಶ್ರೀಗಳ 115 ನೇ ಜಯಂತ್ಯುತ್ಸವಕಾರ್ಯಕ್ರಮವನ್ನು ಉದ್ಘಾಟಿಸಿ ಮಜ್ಜಿಗೆ, ಪಾನಕವಿತರಿಸಿ ಮಾತನಾಡಿದರು.

ಡಾ.ಶಿವಕುಮಾರಸ್ವಾಮೀಜಿಯವರು ನಡೆದಾಡುವ ದೇವರೆಂದೇಪ್ರಸಿದ್ಧಿಯಾಗಿದ್ದು, 21ನೇ ಶತಮಾನದ ಅಭಿನವಬಸವೇಶ್ವರಾಗಿ ವಿಶ್ವಕ್ಕೆ ಶಿಕ್ಷಣ, ಅನ್ನದಾನ, ಆರೋಗ್ಯಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದರು. ಜಾತಿ ಭೇದಮಾಡದೇ ಎಲ್ಲ ವರ್ಗದವರಿಗೂ ಮಠದಲ್ಲಿ ಶಿಕ್ಷಣನೀಡಿ ಭವಿಷ್ಯ ರೂಪಿಸಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next