Advertisement

ತಿರಸ್ಕರಿಸಿದ ಹಾಲನ್ನು ಏನ್‌ ಮಾಡಲಿ?

03:25 PM Oct 19, 2021 | Team Udayavani |

ಕೆ. ಆರ್‌.ನಗರ: ಕೊರೊನಾ ಸಂಕಷ್ಟದಲ್ಲಿಹೈನೋದ್ಯಮ ಗ್ರಾಮೀಣ ಜನರು ಕೈಹಿಡಿದೆ.ಜೊತೆಗೆ ಸರ್ಕಾರದ 5 ರೂ. ಪ್ರೋತ್ಸಾಹ ಧನಸೇರಿದಂತೆ ಮತ್ತಿತರರ ಹಲವು ಯೋಜನೆರೂಪಿಸಿದೆ. ಆದರೆ, ಹಲವು ಡೇರಿಗಳಲ್ಲಿನಿಗದಿತ ಪ್ರಮಾಣದ ಕೊಬ್ಬಿನಾಂಶ (ಗುಣಮಟ್ಟ) ಕೊರತೆಯಿಂದ ಹಾಲನ್ನು ವಾಪಸ್‌ ಕಳುಹಿಸಲಾಗುತ್ತಿದೆ.

Advertisement

ಹೀಗೆ ಉಳಿದ ಹಾಲನ್ನುಏನು ಮಾಡಬೇಕು, ಇದೇ ಪರಿಸ್ಥಿತಿಮುಂದುವರಿದರೆ ರಾಸುಗಳನ್ನು ಸಾಕುವುದೇಕಷ್ಟಕರವಾಗಿದೆ. ನಿರ್ವಹಣೆ ಖರ್ಚು ವೆಚ್ಚ ಮೈಮೇಲೆ ಬರುತ್ತಿದೆ ಎಂದು ಹಾಲು ಉತ್ಪಾದಕರುಅಳಲು ತೋಡಿಕೊಂಡಿದ್ದಾರೆ.ಸಾಲಿಗ್ರಾಮ ಹಾಗೂ ಕೆ.ಆರ್‌.ನಗರತಾಲೂಕುಗಳಲ್ಲಿ 60 ಹಾಲು ಉತ್ಪಾದಕರಮಹಿಳಾ ಸಹಕಾರ ಸಂಘ ಮತ್ತು 88 ಸಾಮಾನ್ಯಸಹಕಾರ ಸಂಘಗಳಿದ್ದು, ಇವುಗಳಿಗೆ ಅವಶ್ಯಕತೆಇರುವ ಕಟ್ಟಡ ಮತ್ತು ಬಿಎಂಸಿ ಕೇಂದ್ರಆರಂಭಿಸಿ ಮೈಮುಲ್‌ನ ವತಿಯಿಂದಅನುಕೂಲ ಕಲ್ಪಿಸಲಾಗುತ್ತಿದೆ.

13 ಸದಸ್ಯರು: ಎರಡೂ ತಾಲೂಕಿನಿಂದ 13ಸಾವಿರ ಮಂದಿ ರೈತ ಸದಸ್ಯರು ನಿತ್ಯ ಹಾಲುಸರಬರಾಜು ಮಾಡುತ್ತಿದ್ದು, ದಿನಕ್ಕೆ ಒಂದು ಲಕ್ಷಲೀಟರ್‌ ಸಂಗ್ರಹಣೆ ಮಾಡುತ್ತಿದ್ದು, ಹಾಲಿನಲ್ಲಿಕೊಬ್ಬಿನಾಂಶವಿಲ್ಲ ಎಂದು ಸಂಘಗಳಕಾರ್ಯದರ್ಶಿಗಳು ಸದಸ್ಯರಿಂದ ಖರೀದಿಸದೆಹಾಲನ್ನು ವಾಪಸ್‌ ಕಳುಹಿಸುತ್ತಿದ್ದಾರೆ.ಇದರಿಂದ ರೈತರು ಮೈಮುಲ್‌ಗೆ ಹಾಲುಸರಬರಾಜು ಮಾಡಿ ಗಳಿಸುವುದಕ್ಕಿಂತ ಹೆಚ್ಚಾಗಿನಷ್ಟಕ್ಕೆ ಒಳಗಾಗುತ್ತಿದ್ದಾರೆ.

ಲಕ್ಷ ಲೀ. ಹಾಲು ಸಂಗ್ರಹ: ಮೈಮುಲ್‌ನನಿರ್ದೇಶನದಂತೆ ಸಂಘಗಳು ಹಾಲಿನಡಿಗ್ರಿ(ಗುಣಮಟ್ಟ) ಪರಿಶೀಲಿಸಿ ಲೀಟರ್‌ಗೆ 26ರಿಂದ 28ರವರೆಗೆ ಹಣ ನೀಡುತ್ತಿರುವುದರಜತೆಗೆ ಹಾಲು ಸರಬರಾಜು ಮಾಡಿದ ಸದಸ್ಯರಬ್ಯಾಂಕಿನ ಖಾತೆಗೆ ಲೀಟರ್‌ಗೆ 5 ರೂ.ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಾ ಬಂದಿದೆ.
ಒಟ್ಟು 33 ರೂ. ಒಂದು ಲೀಟರ್‌ಗೆದೊರೆಯುವುದರಿಂದ ಹೈನುಗಾರಿಕೆ ಮಾಡುವವರು ಡೇರಿಗಳಿಗೆ ಹಾಲು ಸರಬರಾಜುಮಾಡುತ್ತಿರುವುದರಿಂದ ದಿನಕ್ಕೆ ಒಂದು ಲಕ್ಷಲೀಟರ್‌ ಸಂಗ್ರಹವಾಗಲು ಸಾಧ್ಯವಾಗಿದೆ.ಡೇರಿಗಳಲ್ಲಿ ಹಾಲು ಪರೀಕ್ಷಕರುಪರಿಶೀಲಿಸಿದ ನಂತರ ಒಂದು ಲೀಟರ್‌ನಿಂದ 5ಲೀಟರ್‌ವರೆಗೂ ತರುವ ಸದಸ್ಯರನ್ನು ಹಾಲಿನಲ್ಲಿಕೊಬ್ಬಿನಾಂಶ ಇಲ್ಲ ಎಂಬ ನೆಪ ಹೇಳಿ ದಿನಕ್ಕೆ ಒಂದು ಸಂಘದಲ್ಲಿ 50 ರಿಂದ 60 ಲೀಟರ್‌ಹಾಲನ್ನು ವಾಪಸ್‌ ಕಳುಹಿಸುತ್ತಿದ್ದಾರೆ.ಹಾಲು ಉತ್ಪಾದಕರ ಸಮಸ್ಯೆ ಕುರಿತುಮೈಮುಲ್‌ನ ವಿಸ್ತರಣಾಧಿಕಾರಿಗಳಿಗೆ ದೂರು ನೀಡಿದರೆ ಸಮರ್ಪಕ ಉತ್ತರ ಸಿಗುವುದಿಲ್ಲ.

“ಹಸುಗಳಿಗೆ ನಿಗದಿತ ಪ್ರಮಾಣದ ಪೌಷ್ಟಿಕಆಹಾರ ನೀಡುತ್ತಿಲ್ಲ. ಆದ್ದರಿಂದ ಈ ಸಮಸ್ಯೆಎದುರಾಗಿದೆ’ ಎಂದು ಉಡಾಫೆ ಉತ್ತರ ನೀಡುತ್ತಾರೆ. ಅಲ್ಲದೆ ಉತ್ತಮ ವೈದ್ಯರಿಂದ ಸಲಹೆಪಡೆಯಿರಿ ಎಂದು ಹೇಳುವ ಮೂಲಕ ತಮ್ಮಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಇದರಿಂದ ಹಾಲು ಸರಬರಾಜುದಾರರು ಸಂಕಷ್ಟಕ್ಕೆಒಳಗಾಗಿದ್ದಾರೆ ಎಂದು ರೈತರು ದೂರಿದ್ದಾರೆ.

Advertisement

ಗೇರದಡ ನಾಗಣ್ಣ

Advertisement

Udayavani is now on Telegram. Click here to join our channel and stay updated with the latest news.

Next