Advertisement

ಮನೆಯಲ್ಲೇ ಹಸಿ, ಒಣ ಕಸ ಬೇರ್ಪಡಿಸಿ

07:02 PM Jul 26, 2021 | Team Udayavani |

ಹುಣಸೂರು: ಪ್ರತಿ ಮನೆಗಳಲ್ಲೂ ತ್ಯಾಜ್ಯನಿರ್ವಹಣೆ ಸಮರ್ಪಕವಾಗಿರಬೇಕು.ಪರಿಸರ ವಿರೋಧಿ ಪ್ಲಾಸ್ಟಿಕ್‌ ಬಳಸಬಾರದು. ಮನೆಗಳ ಸುತ್ತಮುತ್ತ ಸೊಳ್ಳೆಗಳತಾಣವಾಗದಂತೆ ಸ್ವತ್ಛತೆ ಕಾಪಾಡಿಕೊಳ್ಳಬೇಕುಎಂದು ಚಿಗುರು ಸಂಪನ್ಮೂಲ ಕೇಂದ್ರದನಿರ್ದೇಶಕ ಶಂಕರ್‌ ಮನವಿ ಮಾಡಿದರು.

Advertisement

ತಾಲೂಕಿನ ಬಿಳಿಕೆರೆಯಲ್ಲಿ ಮೈಸೂರಿನಜೆಎಸ್‌ಎಸ್‌ ಜನ ಶಿಕ್ಷಣ ಸಂಸ್ಥೆಯಿಂದಆಯೋಜಿಸಿದ್ದ ತ್ಯಾಜ್ಯ ನಿರ್ವಹಣೆ ಕುರಿತಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು,ಸ್ವತ್ಛತೆ ಇಲ್ಲದ ಕಾರಣ ಸೊಳ್ಳೆಗಳ ಮೂಲಕಹಲವು ರೋಗಗಳಿಗೆ ತುತ್ತಾಗುತ್ತಿದ್ದೇವೆ.ಕೇರಳದಲ್ಲಿ ಸೊಳ್ಳೆಯಿಂದ ಝೀಕಾ ವೈರಸ್‌ಹರಡುತ್ತಿರುವುದು ಕಂಡು ಬಂದಿದ್ದು,ಸೊಳ್ಳೆ ನಿಯಂತ್ರಿಸಲು ತ್ಯಾಜ್ಯ ನಿರ್ವಹಣೆ ಅತಿ ಪ್ರಮುಖವಾಗಿದೆ ಎಂದರು.

ಮಾದರಿ ಬಿಳಿಕೆರೆ ಗ್ರಾಮಪಂಚಾಯ್ತಿಯಿಂದ ಘನ ತ್ಯಾಜ್ಯಾನಿರ್ವಹಣೆ ಘಟಕ ಸ್ಥಾಪಿಸಲಾಗಿದ್ದು,ಮನೆಯಿಂದಲೇ ಹಸಿ ಕಸ-ಒಣಕಸಬೇರ್ಪಡಿಸಿ ನೀಡಬೇಕು. ಹಸಿಕಸವನ್ನುಗಿಡಗಳಿಗೆ ಹಾಗೂ ಜಮೀನಿಗೆ ಬಳಸಿದಲ್ಲಿಫಲವತ್ತತೆ ಹೆಚ್ಚಲಿದೆ ಎಂದರು.ಪ್ಲಾಸ್ಟಿಕ್‌ ವಸ್ತುಗಳನ್ನು ಮಣ್ಣಿನಲ್ಲಿಹೂತರೂ ಕರಗುವುದಿಲ್ಲ. ಪ್ಲಾಸ್ಟಿಕ್‌ಯುಕ್ತ ಒಣಕಸವನ್ನು ಸುಟ್ಟಾಗ ಬರುವಹೊಗೆಯಲ್ಲಿ ಕ್ಲೊರೊಫಾಂ ಎಂಬರಾಸಾಯನಿಕ ಅಂಶವು ಗಾಳಿಯಲ್ಲಿ ಸೇರಿಮಹಿಳೆಯರಿಗೆ ಗರ್ಭಕೋಶದ ಸಮಸ್ಯೆಉಂಟಾಗಿರುವುದು ಕಂಡುಬಂದಿದೆ.

ಹೀಗಾಗಿ ಮರು ಬಳಕೆ ಮಾಡಬಹುದಾದವಸ್ತುಗಳನ್ನು ಮಾತ್ರ ಬಳಸುವ ಮೂಲಕಪರಿಸರಕ್ಕೆ ತಮ್ಮದೇ ಆದ ಕೊಡುಗೆನೀಡಬೇಕು ಎಂದರು.ಸಭೆಯಲ್ಲಿ ಜನ ಶಿಕ್ಷಣ ಸಂಸ್ಥೆಯಕಾರ್ಯಕ್ರಮ ಸಹಾಯಕಿ ಸಿ.ಎಸ್‌.ಸುಮಾ,ವೃತ್ತಿ ಬೋಧಕರು ಹಾಗೂ ಕಲಿಕಾರ್ಥಿಗಳುಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next