Advertisement

ನಿರಂತರ ಕಿರುಕುಳ, ಟೀಕೆ, ಅಪಮಾನ, ನೋಟಿಸ್‌

04:45 PM Jun 04, 2021 | Team Udayavani |

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಅವರ ನಿರಂತರ ‌ ಕಿರುಕುಳ, ಟೀಕೆ, ಅಪಮಾನ,ನೋಟಿಸ್‌ ಮತ್ತು ದುರಹಂಕಾರದ ವರ್ತನೆಯಿಂದಬೇಸೆತ್ತು ಪ್ರತಿಭಟನಾತ್ಮಕವಾಗಿ ಐಎಎಸ್‌ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ 2014ನೇಸಾಲಿನ ಐಎಎಸ್‌ ಅಧಿಕಾರಿ, ಮಹಾನಗರ ‌ ಪಾಲಿಕೆಆಯುಕ್ತೆ ಶಿಲ್ಪಾ ನಾಗ್‌ ಅತ್ಯಂತ ದುಃಖದಿಂದಪ್ರಕಟಿಸಿದರು.

Advertisement

ಗುರುವಾರ ಸಂಜೆ ತುರ್ತು ಸುದ್ದಿಗೋಷ್ಠಿನಡೆಸಿದ ಅವರು, ಒಂದು ಹಂತದ ‌ದವರೆಗೆ ಕಿರುಕುಳ ಸಹಿಸಬಹುದು. ಈಗ ನನ್ನಲ್ಲಿ ಕಾಯುÊ ‌ ಸಹನೆಇಲ್ಲ. ಒಂದು ವಾರದಿಂದ ನಿದ್ದೆ ಮಾಡಿಲ್ಲ.ಮಗನೊಂದಿಗೆ ಸರಿಯಾಗಿ ಮಾತಾಡಿಲ್ಲ.ಮಾನಸಿಕ ‌ವಾಗಿ ತುಂಬಾ ನೊಂದಿರುವೆ. ಸೋಲು ಒಪ್ಪಿಕೊಂಡು ಈ ನಿರ್ಧಾರ ಮಾಡುತ್ತಿಲ್ಲ. ಮೈಸೂರಿನ ಜನತೆ ಹಿತಕ್ಕಾಗಿ ಈ ನಿರ್ಧಾರ ಎಂದುಕಣ್ಣೀರು ಹಾಕುವ‌ ಮೂಲಕ ‌ ಡೀಸಿ ನಡೆಯನ್ನು ಖಂಡಿಸಿದರು.

ರೋಹಿಣಿ ಅವರಿಗೆ ಇಷ್ಟೊಂದು ಹಠ, ದುರಹಂಕಾರ ಏಕೆ? ಉಸಿರುಗಟ್ಟಿಸುವ ವಾತಾವರಣದಲ್ಲಿಕೆಲಸ ಮಾಡಲು ಸಾಧ್ಯವೇ? ಪಾಲಿಕೆಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಮೇಲಿನ ಅಧಿಕಾರಿಗಳಿಗೆ, ನಗರಾಭಿವೃದ್ಧಿ ಸಚಿವರಿಗೆ ನನ್ನ ವಿರುದ್ಧ ನಿರಂತರ ದೂರು ನೀಡಿದ್ದಾರೆ. ಸ್ವಾಭಿಮಾನಬಿಟ್ಟು ಕೆಲÓ ‌ ಮಾಡಲು ನನ್ನಿಂದ ಆಗದು. ಪಾಲಿಸಿಕೊಂಡು ‌ ಬಂದ ಮೌಲ್ಯಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿಈ ಕಠಿಣ ನಿರ್ಧಾರ ಅನಿವಾರ್ಯವಾಗಿಗೆ ಎಂದು ಅವರು ತಿಳಿಸಿದರು.

ಪಾಲಿಕೆ ಕೋವಿಡ್‌ ನಿರ್ವಹಣೆಗೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರಸಹಭಾಗಿತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸುಮಾರು 1500ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಕಲ್ಪಿಸಿದೆ. ಮುಡಾ, ಪಾಲಿಕೆಜಂಟಿಯಾಗಿ 31 ವೈದ್ಯರನ್ನು ನೇಮಿಸಿಕೊಂಡಿದೆ ªàವೆ.ಒಂದೇ ಒಂದು ಮಾತ್ರೆ ಕೊಡದ ಜಿಲ್ಲಾಡಳಿತವಿನಾಕಾರಣ ಕಿರುಕುಳ ಸ‌ಹಿಸದೇ ಅಧಿಕಾರಿಯಾಗಿ ಕೆಲಸ ಮಾಡುವ ಆಸಕ್ತಿ ಹೋಗಿದೆ ಎಂದು ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next