ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿಸನ್ನಿಧಿ ಚಾಮುಂಡಿಬೆಟ್ಟದಲ್ಲಿ ಇಂದಿನಿಂದ ಆಷಾಢಮಾಸದ ವಿಶೇಷ ಪೂಜೆ ಆರಂಭವಾಗಲಿದ್ದು,ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈಬಾರಿ ಕೂಡ ಭಕ್ತರ ಅನುಪಸ್ಥಿತಿಯಲ್ಲಿ ಆಷಾಢಮಾಸದ ಮೊದಲಶುಕ್ರವಾರದ ಪೂಜೆ ನೆರವೇರಲಿದೆ.
ಪ್ರತಿವರ್ಷ ಆಷಾಢ ಶುಕ್ರವಾರಗಳಂದು ಜಿಲ್ಲೆಮಾತ್ರವಲ್ಲದೆ, ರಾಜ್ಯ, ಹೊರ ರಾಜ್ಯದ ಲಕ್ಷಾಂತರಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ಶಕ್ತಿದೇವತೆಯದರ್ಶನ ಪಡೆಯುತ್ತಿದ್ದರು. ಚಳಿಯನ್ನೂ ಲೆಕ್ಕಿಸದೆಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ವರವ ಕೊಡುವಚಾಮುಂಡೇಶ್ವರಿಯ ದರ್ಶನ ಪಡೆದುಪುನೀತರಾಗುತ್ತಿ¨ರು. ª ತಮ್ಮ ಹರಕೆ ಸಮರ್ಪಿಸಿಭಕ್ತಿಭಾವ ಮೆರೆಯುತ್ತಿದ್ದರು. ಸಾವಿರಾರು ಭಕ್ತರಆಗಮನದಿಂದ ಬೆಟ್ಟದಲ್ಲಿ ಜಾತ್ರೆಯ ವಾತಾವರಣನಿರ್ಮಾಣವಾಗುತ್ತಿತ್ತು.
ಆದರೆ, ಕೊರೊನಾ 2ಹಾಗೂ 3ನೇ ಭೀತಿ ಹಿ®ಲೆ ೆ° ಬೆಟ್ಟಕ್ಕೆ ಸಾರ್ವಜನಿಕರಪ್ರವೇಶ ನಿಷೇಧಿಸಲಾಗಿದೆ. ಸೋಂಕು ಹರಡುವಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆಷಾಢಶುಕ್ರವಾರ ಅದರ ಮುಂದಿನ ಶನಿವಾರ, ಭಾನುವಾರಹಾಗೂ ವರ್ಧಂತಿಯಂದು ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಿದೆ.
ಹೀಗಾಗಿ ಕಳೆದವರ್ಷದಂತೆ ಈ ಬಾರಿಯೂ ಸಾರ್ವಜನಿಕರಿಲ್ಲದೆಪುರದೇವತೆಗೆ ಆಷಾಢ ಪೂಜೆ ನೆರವೇರಲಿದೆ.ವಿಧಿವಿಧಾನದಂತೆ ಪೂಜೆ: ಆಷಾಢಶುಕ್ರವಾರದಂದು ಈ ಹಿಂದಿನಂತೆ ಅದ್ಧೂರಿತನ ಇಲ್ಲದಿದ್ದರೂ ದೇವಸ್ಥಾನದ ವಿಧಿ ವಿಧಾನಗಳಂತೆಪೂಜೆ ಕೈಂಕರ್ಯಗಳು ನೆರವೇರಲಿವೆ. ಇಂದುಮೊದಲ ಶುಕ್ರವಾರ ಆಗಿರುವುದರಿಂದ ತಾಯಿಗೆವಿಶೇಷ ಅಲಂಕಾರ ಮಾಡಿ ಪೂಜೆನೆರವೇರಿಸಲಾಗುತ್ತದೆ.
ಬೆಳಗ್ಗೆ 5.30ರಿಂದ ಪೂಜಾವಿಧಿವಿಧಾನಗಳು ನೆರವೇರಲಿದ್ದು, ಮೊದಲಿಗೆಮಹಾನ್ಯಾಸ ಪೂರ್ವಕ ರುದ್ರಾಭಿಷೇಕ,ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ,ಮಹಾಮಂಗಳಾರತಿ ನಡೆಯಲಿದೆ. ದೇವಸ್ಥಾನದಆವರಣದಲ್ಲೇ ಅಮ್ಮನ ಪ್ರಾಕಾರ ಉತ್ಸವನಡೆಯಲಿದೆ. ಬಳಿಕ 7.30ಕ್ಕೆ ಮಹಾಮಂಗಳಾರತಿನೆರವೇರಲಿದೆ. ಪ್ರತಿ ಶುಕ್ರವಾರದಂದೂ ವಿಶೇಷಅಲಂಕಾರ ಮಾಡಿ ಪೂಜೆ ಸಲ್ಲಿಸುವ ರೂಢಿಯಿದ್ದು,ಮೊದಲ ಶುಕ್ರವಾರ ತಾಯಿಗೆ ಲಕ್ಷ್ಮೀ ಅಲಂಕಾರಮಾಡಲಾಗುತ್ತದೆ.
ಆಷಾಢ ಶುಕ್ರವಾರದ ದಿನಗಳಾದ ಜು.16,ಜು.23, ಆ.6 ಹಾಗೂ ಜು.30ರ ಚಾಮುಂಡಿವರ್ಧಂತಿ ದಿನದಂದು ವಿಶೇಷ ಪೂಜೆ ನಡೆಯಲಿದೆ.ಈ ಎಲ್ಲಾ ದಿನಗಳು ಬೆಟ್ಟದ ನಿವಾಸಿಗಳನ್ನುಹೊರತುಪಡಿಸಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಹೇರಲಾಗಿದೆ. ಜತೆಗೆ ಪ್ರಸಾದ ವಿತರಣೆಗೆನಿರ್ಬಂಧಿಸಲಾಗಿದೆ.