ನಂಜನಗೂಡು: ಲಾಕ್‌ಡೌನ್ ಸಡಿಲಗೊಳಿಸಿ, ಬಸ್‌ಗಳಲ್ಲಿ ಶೇ.100ರಷ್ಟು ಪ್ರಯಾಣಿಕರು ಸಂಚರಿಸಲುಅವಕಾಶ ನೀಡಲಾಗಿದೆ. ಕಡಿಮೆ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರು ಮಾತ್ರಬರುತ್ತಿಲ್ಲ. ಇದರಿಂದ ಡೀಸೆಲ್ ಕಾಸು ಕೂಡ ಸಿಗುತ್ತಿಲ್ಲ. ಜೊತೆಗೆ ಶೇ. 50ರಷ್ಟು ಸಾರಿಗೆ ಸಿಬ್ಬಂದಿಗೂಕೆಲಸವಿಲ್ಲದಂತಾಗಿದೆ.
ಇದು ನಂಜನಗೂಡು ಡಿಪೋಪರಿಸ್ಥಿತಿಯಾಗಿದೆ.ಕೊರೊನಾಗಿಂತ ಮುಂಚೆ ಆದಾಯದಲ್ಲಿ ನಂಬರ್-1 ಸ್ಥಾನದಲ್ಲಿ ಈ ಡಿಪೋದಲ್ಲಿ ಇದೀಗ ಆದಾಯಖೋತಾದಿಂದ ಡೀಸೆಲ್‌ಗೂ ಹಣ ಭರಿಸಲುಆಗದಂತೆ ದುಸ್ಥಿತಿ ನಿರ್ಮಾಣವಾಗಿದೆ.ಶೇ.50 ಸಿಬ ºಂದಿಗೆ ಕೆಲಸವಿಲ್ಲ: ® ಂಜನಗೂಡುಸಾರಿಗೆ ಡಿಪೋದಲಿ É ಚಾಲಕರು ಹಾಗೂನಿರ್ವಾಹಕರು ಸೇರಿದಂತೆ 500ಕ್ಕೂ ಹೆಚ್ಚುಸಿಬ್ಬಂದಿಗಳಿದ್ದಾರೆ. ಬಸ್ ರಸೆ ¤ಗಿಳಿದಿದ್ದರೂ ಅರ್ಧದಷ್ಟು ಸಿಬ್ಬಂದಿಗೆ ಮಾತ್ರ ದೈನಂದಿನ ಕೆಲÓ ನೀv ಲುಸಾಧ್ಯವಾಗುತ್ತಿದೆ. ಇನ್ನುಳಿದ ಅರ್ಧದಷ್ಟು ಸಿಬ್ಬಂದಿಗೆಕೆಲಸವಿಲ್ಲವಾಗಿದೆ.
ಈಡಿಪೋದಲ್ಲಿ120ಬಸ್‌ಗಳಿದ್ದು,ಕೊರೊನಾಗಿಂತಮೊದಲುಈ ಎಲ್ಲಬಸ್‌ಗಳುಪ್ರಯಾಣಿಕರಿಂದ ತುಂಬಿಸಂಚರಿಸುತ್ತಿದ್ದವು. ಈಗಕೇವಲ 80 ಬಸ್‌ಗಳು ಮಾತ್ರರಸ್ತೆಗಿಳಿದು ಪ್ರಯಾಣಿಕರ ಸೇವೆಗಾಗಿ ಓಡಾಡುತ್ತಿವೆ.ಆದರೆ, ಜನರು ಬಸ್‌ನತ್ತ ಮುಖ ಮಾಡುತ್ತಿಲ್ಲ.ಈ ಹಿಂದೆ 120 ಬಸ್‌ಗಳ ಸಂಚಾರದಿಂದ ನಂಜನಗೂಡು ಡಿಪೋದ ದೈನಂದಿನ ಆದಾಯ 9 ಲಕ್ಷ ರೂ.ದಾಟುತ್ತಿತ್ತು. ಹೀಗಾಗಿ ಚಾಮರಾಜನಗರದ ಸಾರಿಗೆವಿಭಾಗದಲ್ಲಿ ನಂಜನಗೂಡು ಡಿಪೋ (ಹಳೇ ಬಸ್‌ಗಳನ್ನೇ ಹೊಂದಿದ್ದರೂ) ಆದಾಯದಲ್ಲಿ ಮಾತ್ರಪ್ರಥಮ ಸ್ಥಾನದಲ್ಲಿತ್ತು.
ಆದರೆ, ಇದೀಗ80 ಬಸ್‌ಗಳುರಸ್ತೆಗಿಳಿಸಿದಿದ್ದು, ದೈನಂದಿನ ಆದಾಯ 3 ಲಕ್ಷ ರೂ.ದಾಟುತ್ತಿಲ್ಲ. ವಿಭಾಗದಲ್ಲಿ ಮೊದಲನೆ ಸ್ಥಾನದಲ್ಲಿದ್ದನಂಜನಗೂಡಿನಲ್ಲಿ ಈಗ ಬರುತ್ತಿರುವ ಆದಾಯ 3ಲಕ್ಷ ದಾಟುತ್ತಿಲ್ಲ. ಹೀಗಾಗಿ ರಸ್ತೆಗಿಳಿದ ಬಸ್‌ಗಳಇಂಧನಕ್ಕೂ ಸಾಕಾಗುತ್ತಿಲ್ಲ ಎಂದು ಡಿಪೋ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.ಲಾಕ್‌ಡೌನ್ ತೆರವುಗೊಳಿಸಿದ್ದರಿಂದ ಸಿಬ್ಬಂದಿಗಳೆಲ್ಲರೂ ಕೆಲಸಕ್ಕೆ ಹಾಜರಾದರೂ ಅವರಿಗೆ ಉದ್ಯೋಗನೀಡಲು ಪರದಾಡುವ ಸ್ಥಿತಿ ನಿಗಮದ್ದಾಗಿದೆ. 40ಕ್ಕೂಹೆಚ್ಚು ಬಸ್‌ಗಳು ರಸ್ತೆಗಿಳಿಯಲಾಗದೆ ಡಿಪೋದಲ್ಲೇಸ್ಥಗಿತವಾಗಿವೆ.
ಹೀಗಾಗಿ ಕೆಲಸಕ್ಕಾಗಿ ಬಂದ ನಿಗಮದಕಾಯಂ ನೌಕರರು ಬಂದ ದಾರಿಗೆ ಸುಂಕವಿಲ್ಲದಂತೆಬರಿಗೈಲಿ ವಾಪಸ್ ಮನೆಗೆ ತೆರಳುವಂತಾಗಿದೆ.ಬಹಳಷ್ಟು ಗ್ರಾಮಗಳಿಗೆ ತೆರಳಲು ನಾಮಫಲಕದೊಂದಿಗೆ ಬಸ್‌ನಿಲ್ದಾಣಕ್ಕೆ ಬಂದು ಗಂಟೆ ಗಟ್ಟಲೆಕಾದೂ ಓರ್ವ ಪ್ರಯಾಣಿಕನೂ ಬಾರದೆ ಡಿಪೋದತ್ತಬಸ್‌ಗಳು ವಾಪಸ್ ಹೋಗುವಂತಹ ಪರಿಸ್ಥಿತಿ ಉದ್ಬವವಾಗಿದೆ. ಈ ಹಿಂದೆ ಜನರು ಕೈ ಮಾಡಿದರೂ ನಿಲ್ಲದ ಬಸ್‌ಗಳು ಇದೀಗ ಜನರ ತಲೆ ಕಂಡರೆ ಸಾಕು ಬನ್ನಿಬನ್ನಿ ಎಂದು ಗೋಗರೆದ ಕರೆಯುವ ದುಸ್ಥಿತಿಗೆನಿಗಮದ ಸಿಬ್ಬಂದಿಗಳನ್ನು ತಂದು ನಿಲ್ಲಿಸಿರುವುದು ಕೊರೊನಾ ಮಹಿಮೆಯೇ ಸರಿ.
ಶ್ರೀಧರ್ ಆರ್.ಭಟ್