ಮೈಸೂರು: ನಗರದ ಎನ್‌ಟಿಎಂ ಶಾಲೆ ಉಳಿವಿಗಾಗಿಪ್ರತಿಭಟನೆ ಮುಂದುವರಿದಿದ್ದು, ಗುರುವಾರ ಕರ್ನಾಟಕಕಾವಲು ಪಡೆ ನೇತೃತ್ವದಲ್ಲಿ ಶಾಲೆಯ ಮುಂಭಾಗಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ಮುಖಂಡರು, ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು, ಶಾಲೆ ಉಳಿಸಿ ಹೋರಾಟ ಸಮಿತಿಯವರುಎನ್‌ಟಿಎಂ ಶಾಲೆ ಕಟ್ಟಡ ಕೆಡವದಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಡಾ. ಎಚ್.ಸಿ. ಮಹದೇವಪ್ಪ,ಶಾಲೆಯ ಜಾಗವೇಕೆ ಬೇಕು ಎನ್ನುವುದನ್ನು ನೋಡಿದರೆ,ಬಾಬ್ರಿ ಮಸೀದಿ-ರಾಮಮಂದಿರದಂತಹ ದೊಡ್ಡವಿವಾದಾತ್ಮಕ ವಿಷಯದಲ್ಲಿ ತೀರ್ಪು ನೀಡಿರುವನ್ಯಾಯಾಲಯಕ್ಕೆ ಶಾಲೆಯ ವಿಷಯ ದೊಡ್ಡದೇನಲ್ಲ.ನ್ಯಾಯಾಲವು 2013ರ ಸರ್ಕಾರದ ಆದೇಶವನ್ನುಪರಿಶೀಲಿಸಿ ಎಂದು ಹೇಳಿದೆ ಅಷ್ಟೆ. ಸರ್ಕಾರ ಮತ್ತುಸಚಿವ ಸಂಪುಟಕ್ಕೆ ಶಾಲೆಯನ್ನು ಉಳಿಸುವ ಶಕ್ತಿಇದೆ ಎಂದರು.
ಸ್ಮಾರಕವಾಗಲು ನಮ್ಮ ತಕರಾರು ಇಲ್ಲ. ಬಡಹೆಣ್ಣು ಮಕ್ಕಳ ಸರ್ಕಾರಿ ಶಾಲೆ ಉಳಿಬೇಕೆಂಬುದುನಮ್ಮ ಕಾಳಜಿ. ಜಿಲ್ಲಾ ಉಸ್ತುವಾರಿ ಸಚಿವರ ಜೊತೆಶಾಲೆ ವಿಚಾರವಾಗಿ ಕರೆ ಮೂಲಕ ಮಾತನಾಡಿದ್ದೇನೆ ಎಂದರು.
ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡಮಾತನಾಡಿ, ಮುಖ್ಯಮಂತ್ರಿಯವರು 2019ರಲ್ಲಿ ಶಾಲೆ ಉಳಿಸುವ ನಿಟ್ಟಿನಲ್ಲಿ ಹೊರಡಿಸಿದ ಆದೇಶವನ್ನು ಜಾರಿಮಾಡಬೇಕು. ಇಲ್ಲವಾದರೇ ಯಡಿಯೂರಪ್ಪನವರು ವಚನ ಭ್ರಷ್ಟರಾಗುತ್ತಾರೆ ಎಂದರು.