ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿ ದ್ದೇವೆ. ನನಗೆಯಾರ ಮೇಲೆ ರಾಗ ದ್ವೇಷ ಇಲ್ಲ. ಮೈಸೂರಿನಜನರಿಗೆ ಒಳ್ಳೆಯದಾಗಬೇಕು ಎಂಬು ದಷ್ಟೇ ನನ್ನಕಳಕಳಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು,ಅಧಿಕಾರಿ ಗಳು ಪರಿಸ್ಥಿತಿನಿಭಾಯಿಸುವುದು ಸಾಧ್ಯವಾಗದಿ ದ್ದಾಗಜನಪ್ರತಿನಿಧಿಗಳು ಕೆಲಸ ಮಾಡ ಬೇ ಕಾಗು ತ್ತದೆ. ಅದೇ ಪರಿಸ್ಥಿತಿ ಜಿಲ್ಲೆಯಲ್ಲಿಎದುರಾದಾಗ ಸಚಿವರು,ಜನಪ್ರತಿನಿಧಿಗಳನ್ನು ಟಾಸ್ಕ್ಪೋರ್ಸ್‌ಗೆಸೇರಿಸಿ ಜವಾಬ್ದಾರಿಗಳನ್ನು ನೀಡಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳು ಗ್ರಾಮಾಂತರ ಪ್ರದೇಶಕ್ಕೆಹೋಗಬೇಕು ಎಂದು ಸಲಹೆ ನೀಡಿದ್ದೇನೆ. ಅದುತಪ್ಪೇ? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದಪ್ರತಾಪ್ ಸಿಂಹ ಅವರು, ಶಿಖಾ, ಡಿ.ರಂದೀಪ್,ಅಭಿರಾಂ ಜಿ.ಶಂಕರ್ ಅವರಂತೆ ಕೆಲಸ ಮಾಡಬೇಕೆಂದು ನಾನು ಸೇರಿದಂತೆ ಜಿಲ್ಲೆಯ ಜನರಆಶಯ ಎಂದು ತಿಳಿಸಿದರು.ಟಾಸ್ಕ್ ಫೋರ್ಸ್‌ಗೆ ಮಾನ್ಯತೆ ಇಲ್ಲ ವಿಚಾರವಾಗಿಖಾರವಾಗಿ ಪ್ರತಿಕ್ರಿಯಿಸಿದ ಸಂಸದರು, ಇದು ಭತ್ಯೆ,ಗೂಟದ ಕಾರು, ಒಣ ಪ್ರತಿಷ್ಠೆಯ ಹುದ್ದೆ ಯಲ್ಲ.ಆಡಳಿತದಲ್ಲಿ ವೈಫಲ್ಯ ಕಂಡಾಗ ಜನಪ್ರತಿನಿ ಧಿಗಳುಮನೆಯಲ್ಲಿ ಸುಮ್ಮನೆ ಕೂರಬೇಡಿ ಬೀದಿ ಗಿಳಿದುಕೆಲಸ ಮಾಡುವಂತೆ ಜವಾಬ್ದಾರಿ ಕೊಟ್ಟಿ ದ್ದಾರೆ. ಇದುಕೀರಿಟ ಅಲ್ಲ ಎಂದು ಹೇಳಿದರು.
ಕೊರೊನಾ ಸೋಂಕಿ ತರನ್ನು ಪತ್ತೆಹಚ್ಚುವಸಲುವಾಗಿ ಆಶಾ, ಅಂಗನವಾಡಿಕಾರ್ಯಕರ್ತೆಯರು ಮನೆ ಮನೆಗೆಭೇಟಿ ನೀಡಿ ಮನೆಯ ಪ್ರತಿ ಸದಸ್ಯರಆರೋಗ್ಯದ ಸ್ಥಿತಿಗತಿ ಪರಿಶೀಲಿಸಿ, ಪಟ್ಟಿಮಾಡುತ್ತಿದ್ದು, ಈ ಸರ್ವೆ ಶೇ.60ರಷ್ಟುಪೂರ್ಣಗೊಂಡಿದ್ದು, ತಿಂಗಳಾಂತ್ಯಕ್ಕೆಶೇ.100ರಷ್ಟು ಪೂರ್ಣವಾಗಲಿದೆ ಎಂದರು.
ಔಷಧ ಬ್ಯಾಂಕ್: ಮುಂದಿನ 15 ದಿನಗಳಲ್ಲಿಗ್ರಾಮಾಂ ತರ ಪ್ರದೇಶಗಳಲ್ಲಿ ಸೋಂಕಿನ ತೀವ್ರತೆಯನ್ನು ನಿಯಂತ್ರಣ ತರಲಿದ್ದೇವೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಔಷಧ ಬ್ಯಾಂಕ್ ಸ್ಥಾಪಿಸಲಾಗುವುದು. ಮೂರು ದಿನಗಳ ಹಿಂದೆ ಔಷಧಕ್ಕೆಕೊರತೆ ಯಿತ್ತು. ಉಸ್ತುವಾರಿ ಸಚಿವರ ಕಳಕಳಿಯಿಂದಔಷಧ ಸಮಸ್ಯೆ ಬಗೆಹರಿದಿದೆ. ಪ್ರತಿ ಆಸ್ಪತ್ರೆಯಲ್ಲಿ 20ಟೆಸ್ಟಿಂಗ್ ಕಿಟ್ ಇದೆ ಎಂದು ಹೇಳಿದರು.