Advertisement

ಡೀಸಿ ನಿವಾಸದಲ್ಲಿ ಈಜುಕೊಳ:ಕಾನೂನು ಬಾಹಿರ

06:33 PM Jun 23, 2021 | Team Udayavani |

ಮೈಸೂರು: ಜಿಲ್ಲಾಧಿಕಾರಿ ಅಧಿಕೃತ ಸರ್ಕಾರಿನಿವಾಸದಲ್ಲಿ ಈಜುಕೊಳ ನಿರ್ಮಾಣ ಬಗ್ಗೆಮೈಸೂರು ಪ್ರಾದೇಶಿಕ ಆಯುಕ್ತರಿಂದಸರ್ಕಾರಕ್ಕೆ 6 ಅಂಶಗಳ ನ್ಯೂನತಾತನಿಖಾ ವರದಿ ಸಲ್ಲಿಕೆಯಾಗಿದೆ.

Advertisement

ನ್ಯೂನತೆಗಳೇನು: ಮೈಸೂರು ಜಿಲ್ಲಾಧಿಕಾರಿಗಳಅಧಿಕೃತನಿವಾಸದಆವರಣದಲ್ಲಿ ಈಜುಕೊಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 32 ಲಕ್ಷ ರೂ. ಗಳಿಗೆ ಅಂದಾಜುಪಟ್ಟಿಯನ್ನು ತಯಾರಿಸಿದ್ದು,ಅಂದಾಜು ಪಟ್ಟಿಗೆ ತಾಂತ್ರಿಕ ವರ್ಗದವರಿಂದಅಥವಾ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಪಡೆದಿಲ್ಲ.ಈಜುಕೊಳ ನಿರ್ಮಾಣ ‌ ಬಗ್ಗೆ ಯಾವುದೇ ಪೂರ್ವಭಾವಿ ಆಡಳಿತಾತ್ಮಕಮಂಜೂರಾತಿ ± ‌ಡೆದಿಲ್ಲ. ಈಜುಕೊಳದನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಾದೇÍ ‌ ಇಲ್ಲ. ಕಾಮಗಾರಿನಿರ್ವಹಿಸಿದವರ ಒಪ್ಪಂದ ‌ ಪತ್ರಗಳು ಇಲ್ಲ.

ಪಾರಂಪರಿಕ ‌ ರಕ್ಷಣಾ ಸಮಿತಿಯಅನುಮೋದನೆ ಪಡೆದಿಲ್ಲ.ಜಿಲ್ಲಾಧಿಕಾರಿಗಳ ಅಧಿಕೃತನಿವಾರ್ಯ ‌ ಆವರಣದಲ್ಲಿ ಈಜುಕೊಳ ನಿರ್ಮಾಣ ಮಾಡಿರುವುದು ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿರುವುದಿಲ್ಲ. ಜಿಲ್ಲಾಧಿಕಾರಿಗಳ ಅಧಿಕೃತನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣವು ಯಾವುದೇ ಸಾರ್ವಜನಿಕಹಿತಾಸಕ್ತಿ ಹೊಂದಿರುವುದಿಲ್ಲ ಎಂದುವರದಿಯಲ್ಲಿ ತಿಳಿಸಲಾಗಿದೆ.

ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತನಿವಾಸ ಪಾರಂಪರಿಕ ಕಟ್ಟಡವಾಗಿದ್ದು,ನಿಯಮ ಬಾಹಿರವಾಗಿ ತಮ್ಮ ಅಧಿಕಾರದುರುಪಯೋಗ ಪಡಿಸಿಕೊಂಡು ನಿರ್ಗಮಿತಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ 32 ಲಕ್ಷರೂ. ವೆಚ್ಚದಲ್ಲಿ ಈಜು ಕೊಳ ನಿರ್ಮಾಣಮಾಡಿದ್ದು, ಈ ಬಗ್ಗೆ ಕ್ರಮತೆಗೆದುಕೊಳ್ಳುವಂತೆಶಾಸಕ ಸಾ.ರಾ. ಮಹೇಶ್‌ ಮುಖ್ಯಮಂತ್ರಿಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆಪತ್ರ ಬರೆದಿದ್ದರು. ಬಳಿಕ ಸರ್ಕಾರ ಈಜುಕೊಳನಿರ್ಮಾಣ ಸಂಬಂಧ ತನಿಖೆ ನಡೆಸಿವಾರದೊಳಗೆ ವರದಿ ನೀಡುವಂತೆ ಪ್ರಾದೇಶಿಕಆಯುಕ್ತರಿಗೆ ಆದೇಶ ನೀಡಿತ್ತು.

ಸದ್ಯಕ್ಕೆ ವರದಿಯಲ್ಲಿ ನಿರ್ಗಮಿತಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರುಪ್ರಕರಣಸಂಬಂಧಅಧಿಕಾರ ದುರುಪಯೋಗಮತ್ತು ನಿಯಮ ಮೀರಿರುವುದು ಕಂಡುಬಂದಿದ್ದು, ಈ ಬಗ್ಗೆ ಪ್ರಾದೇಶಿಕ ಆಯುಕ್ತರುಸರ್ಕಾರಕ್ಕೆ ವರದಿ ನೀಡಿದ್ದು, ಸರ್ಕಾರ ಏನುರೋಹಿಣಿ ಸಿಂಧೂರಿ ಮೇಲೆ ಯಾವ ಕ್ರಮಕೈಗೊಳ್ಳಲಿದೆ ಎಂಬುದನ್ನುಕಾದು ನೋಡಬೇಕಿದೆ. ಈ ನಡುವೆಪಾರಂಪರಿಕ ಕಟ್ಟಡವಾದ ಡೀಸಿಗಳ ಅಧಿಕೃತನಿವಾಸವನ್ನು ನವೀಕರಣ ಮಾಡಿರುವಸಂಬಂಧವೂ ತನಿಖೆ ನಡೆಯುತ್ತಿದ್ದು,ರೋಹಿಣಿ ಸಿಂಧೂರಿ ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next