Advertisement

ಮನೆ ಮೇಲ್ಚಾವಣಿಯ ಪುಟ್ಟ ಜಾಗದಲ್ಲೇ ಸುಂದರ ಸಸ್ಯಕಾಶಿ

05:32 PM Jun 19, 2021 | Team Udayavani |

ಎಚ್‌.ಡಿ.ಕೋಟೆ: ಮನೆಯಂಗಳ, ಮೇಲ್ಛಾವಣಿಯ ಪಟ್ಟು ಜಾಗದಲ್ಲಿ ಸಸ್ಯ ಕಾಶಿಯೇ ಮೇಳೈಸಿದಂತೆ ಕಾಣುತ್ತದೆ. ತರಹೇವಾರಿ ಹಣ್ಣು-ಹೂವಿನಗಿಡಗಳನ್ನು ಬೆಳೆಯಲಾಗಿದೆ.

Advertisement

ಈ ಅಚ್ಚ ಹಸಿರಿನ ಸಸ್ಯಪರಿಸರವು ನೋಡುಗರಕಣ್ಮನವನ್ನು ತಣಿಸುತ್ತದೆ.ಇದು ಪಟ್ಟಣದ ರಾನು-ಮನೂ ದಂಪತಿನಿವಾಸದಲ್ಲಿ ಕಂಡು ಬರುವ ದೃಶ್ಯ. ಮನೆಯಂಗಳ, ಟೆರೇಸ್‌ನಲ್ಲಿ ಹೆಚ್ಚೆಂದರೆ 100-200 ಸಸಿಬೆಳೆಸಬಹುದು. ಆದರೆ, ಇಲ್ಲಿ ಸುಮಾರು 500ವೈವಿಧ್ಯಮಯ ಗಿಡಮರಗಳನ್ನು ಬೆಳೆದು ಪೋಷಿಸಲಾಗುತ್ತಿದೆ. ಜೊತೆಗೆ ಪಕ್ಷಿಗಳಿಗೆ ನೀರು, ಆಹಾರನೀಡಿ ಅವುಗಳ ಆರೈಕೆ ಕೂಡ ನಡೆಯುತ್ತಿದೆ. ರಾಜಸ್ಥಾನದ ಉದಯಪುರ ಮೂಲದವರಾದರಾನೂ-ಮನು ದಂಪತಿ ತಮ್ಮ ಮನೆಯನ್ನುವನಸಿರಿಯಂತೆ ಕಂಗೊಳಿಸಿದ್ದಾರೆ.

ಸುಮಾರು25 ವರ್ಷಗಳಿಂದ ನೆಲೆಸಿರುವ ರಾನೂಅವರು ಬಿಡುವಿನವೇಳೆ ಗಿಡಬೆಳೆಸುವ ಮತ್ತು ಪ್ರಾಣಿಪಕ್ಷಿಗಳನ್ನು ಪೋಷಿಸುವ ಕಾಯಕದಲ್ಲಿ ತೊಡಗಿದ್ದಾರೆ.ಗಿಡಗಳನ್ನು ಬೆಳೆಸಲು ಜಾಗವಿಲ್ಲದಿದ್ದರೂ ಆರ್‌ಸಿಸಿಮನೆಯ ಮೇಲ್ಛಾವಣಿ ಮೇಲೆ ಹೂವು ಹಣ್ಣು,ತರಕಾರಿ, ಸಪೋಟ, ರಾಮಪಾಲ, ನಿಂಬೆ,ಮೋಸಂಬಿ,ನೇರಳೆಗಿಡ, ಔಷಧ ಸಸಿಗಳು ಸೇರಿದಂತೆಬರೋಬ್ಬರಿ 450ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟುಪೋಷಿಸಿದ್ದಾರೆ. ಮನೆಗೆ ಬೇಕಾದ ತರಕಾರಿ, ಸೊಪ್ಪು,ಹಣ್ಣುಗಳು ಇವರ ಟೆರೇಸ್‌ನಲ್ಲಿಯೇ ಸಿಗುತ್ತದೆ.

ನೆರೆ ರಾಜ್ಯಗಳಿಂದ ಸಸಿ ಆಮದು: ಸ್ಥಳೀಯಗಿಡಗಳಾದ ಅರಳಿ, ಹಾಲಿನ ಮರ, ಗುಲ್‌ಮೂರ್‌, ಹೆಡಿನಿವನ್‌, ಸಕ್ಯೂಲೆಂಡ್ಸ್‌, ಆರ್ಕೇಡ್ಸ್‌,ಆರ್ಕೇಡ್‌ ಗ್ರೊ ಮೊದಲಾದ ಗಿಡಗಳನ್ನು ಬೆಳೆಸಿಪೋಷಿಸಲಾಗುತ್ತಿದೆ. ಬಹುತೇಕ ಗಿಡಗಳನ್ನು ವೆಸ್ಟ್‌ಲ್ಯಾಂಡ್‌, ಗುಜರಾತ್‌, ಕೇರಳ, ದೆಹಲಿ, ತಮಿಳುನಾಡು, ಉತ್ತರಾಖಂಡ ರಾಜ್ಯಗಳಿಂದ ಆನ್‌ಲೈನ್‌ಮೂಲಕ ತರಿಸಿಕೊಳ್ಳಲಾಗಿದೆ. ಬೋನ್ಸಾಯ್‌, ಆಮ್ಲಜನಕ ಹೆಚ್ಚು ಹೊರಸೂಸುವ ಸಸಿಗಳು ಇಲ್ಲಿಕಂಡು ಬರುತ್ತಿವೆ.ಕೃಷಿ ಪಂಡಿತ ಪ್ರಶಸ್ತಿ ಪರಸ್ಕೃತ, ಮಲಾರಪುಟ್ಟಯ್ಯ ಮತ್ತು ತಾಲೂಕು ಕೃಷಿ ಅಧಿಕಾರಿಡಾ.ವೆಂಕಟೇಶ್‌ ರಾನೂ ನಿವಾಸಕ್ಕೆ ಭೇಟಿ ನೀಡಿಸಸ್ಯಕಾಶಿಯನ್ನಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಿ.ಎಚ್‌ಡಿ ಪದವೀಧರೆ: ಪಿ.ಎಚ್‌ಡಿ ಪದವೀಧರೆಯಾಗಿರುವ ರಾನೂ ಖಾಸಗಿ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದು, ಬಿಡುವಿನ ವೇಳೆ ಸಸಿ ನೆಡುವುದು,ಪೋಷಿಸುವುದೇ ಇವರ ಕಾಯಕವಾಗಿದೆ. ಇವರ ಪತಿಮನೋಜ್‌ ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕರಾಗಿದ್ದು, ಪತಿಯ ಸಸ್ಯಕಾಶಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.ಪುತ್ರ ಖುನ್ನಾಲ್‌ ಘನ್ನ ಕೂಡ ಸಾಥ್‌ ನೀಡುತ್ತಿದ್ದಾರೆ.ನಮಗೆ ಗಿಡಗಳೇ ಸ್ನೇಹಿತರು, ಬಂಧುಗಳಿದ್ದಂತೆ. ಕಡಿಮೆ ಜಾಗದಲ್ಲಿ ಇಷ್ಟು ಪ್ರಮಾಣದ ವೈವಿಧ್ಯಮಸಸಿಗಳನ್ನು ಬೆಳೆಸುವುದು ಸುಲಭದ ಕಾರ್ಯವಲ್ಲ. ಪ್ರತಿಗಿಡಗಳ ಮೇಲೆ ನಿಗಾವಹಿಸಿ ಅವುಗಳಿಗೆ ಬೇಕಾದ ಆರೈಕೆಯಲ್ಲಿ ತೊಡಗಬೇಕು. ಇಷ್ಟು ಪ್ರಮಾಣದಲ್ಲಿ ಸಸಿಗಳನ್ನು ಬೆಳೆಸಿರುವುದರಿಂದ ಯಥೇತ್ಛವಾಗಿ ಆಮ್ಲಜನಕ ಸಿಗುತ್ತದೆ, ಮನೆಗೆ ಬೇಕಾದ ತರಕಾರಿ, ಹೂ-ಹಣ್ಣುಲಭಿಸುತ್ತದೆ. ಮನೆಯನ್ನೇ ಸುಂದರ ಉದ್ಯಾನವನ್ನಾಗಿಸುವ ಮೂಲಕ ಅಹ್ಲಾದಕರ ಪರಿಸರನಿರ್ಮಿಸಿರುವುದು ನಮಗೆ ನೆಮ್ಮದಿ ಮದ ಸಿಗಲಿದೆಎಂದು ಈ ದಂಪತಿ ತಮ್ಮ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next