Advertisement
ಈ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ನಡುವೆ ನೇರಾನೇರ ಹಣಾಹಣಿ ನಡೆದಿರುವುದರಿಂದ, ಇವರಿಬ್ಬರಲ್ಲಿ ವಿಜಯಮಾಲೆ ಯಾರ ಕೊರಳಿಗೆ ಬೀಳಬಹುದೆನ್ನುವ ವಿಶ್ಲೇಷಣೆಗಳು ನಡೆಯುತ್ತಿದೆ.
Related Articles
Advertisement
ಬಿಜೆಪಿಯ ಭದ್ರಕೋಟೆಯನ್ನು ಜೆಡಿಎಸ್‌ನೊಂದಿಗಿನ ಮೈತ್ರಿಯ ಮೂಲಕ ಒಡೆದು ವಿಜಯ ಪತಾಕೆ ಹಾರಿಸುವ ಪ್ರಯತ್ನ ಕಾಂಗ್ರೆಸ್‌ನಿಂದಲು ನಡೆದಿದೆ. ಇದಕ್ಕೆ ಆರಂಭಿಕ ಹಂತದಲ್ಲಿ ಜೆಡಿಎಸ್‌ನೊಳಗಿನ ಆಂತರಿಕ ಭಿನ್ನಮತ ತೊಡಕಾಗಿ ಕಂಡು ಬಂದಿತಾದರು, ಆ ನಂತರದ ದಿನಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆದಿದೆ ಎಂದು ಮುಖಂಡರೂ ಹೇಳಿಕೊಳ್ಳುತ್ತಿದ್ದು, ಇದು ಎಷ್ಟರ ಮಟ್ಟಿಗೆ ಮತವಾಗಿ ಪರಿವರ್ತನೆಯಾಗಿದೆ ಎನ್ನು ವುದರ ಮೇಲೆ ವಿಜಯಶಂಕರ್ ಭವಿಷ್ಯ ನಿರ್ಧಾರವಾಗಲಿದೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಸದ ಪ್ರತಾಪಸಿಂಹ ಅವರ ನಡೆಯ ಬಗ್ಗೆ ಸ್ಥಳೀಯ ಶಾಸಕರಿಂದ ಆಕ್ಷೇಪವೂ ವ್ಯಕ್ತವಾಗಿತ್ತು. ತಮ್ಮ ಪಕ್ಷದ ಕೆಲವು ಮುಖಂಡ ರೊಂದಿಗೂ ಮನಸ್ತಾಪ ಮಾಡಿಕೊಂಡಿದ್ದರು ಸಿಂಹ. ಈ ಎಲ್ಲÉ ಕಾರ್ಮೋಡಗಳು ಒಮ್ಮೆಗೆ ಕರಗಿ ಬಿಜೆಪಿಯ ನಾಗಾಲೋಟ ಮುಂದುವರಿಯುತ್ತದೆಯೆ ಅಥವಾ ವಿಜಯದ ಹಾದಿಯಲ್ಲಿ ಎಡವಿದೆಯೇ ಎಂಬುವುದನ್ನು ಕಾದು ನೋಡಬೇಕಾಗಿದೆ.
ಈ ಎಲ್ಲ ರಾಜಕೀಯ ಬೆಳವಣಿಗೆಗಳ ನಡುವೆ ಪ್ರಸ್ತಾಪಿಸಲ್ಪಟ್ಟಿರುವ ಮೋದಿ ಅಲೆ ತಳಮಟ್ಟದಲ್ಲಿ ನಿಜಕ್ಕೂ ಕೆಲಸ ಮಾಡಿದೆಯೇ ಅಥವಾ ಇದೊಂದು ಕೇವಲ ಭ್ರಮೆಯೇ ಎನ್ನುವುದು ಕೂಡ ಮೇ 23 ರಂದು ಸ್ಪಷ್ಟವಾಗಲಿದೆ.
ಕಾದು ನೋಡಬೇಕುಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇà ಇದ್ದು, ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೊಟೆ ಎನ್ನುವ ಹಣೆಪಟ್ಟಿಯನ್ನು ಹೊತ್ತಿದೆ. ಅದಕ್ಕೆ ತಕ್ಕಂತೆ ಬಿಜೆಪಿ ಪ್ರಮುಖರು ಈ ಬಾರಿ ಲೋಕಸಭೆಯಲ್ಲಿ ಬಿಜೆಪಿಯೇ ಗೆಲುವು ಸಾಧಿಸುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಅಭ್ಯರ್ಥಿಯ ಹೆಸರನ್ನು ಅಷ್ಟಾಗಿ ಪ್ರಸ್ತಾವಿಸದೆ ಮೋದಿ, ತಾವರೆ, ದೇಶದ ಭದ್ರತೆಯ ಹೆಸರಿನಲ್ಲಿ ಪ್ರತಾಪ್‌ಸಿಂಹ ಪರ ಮತಯಾಚಿಸಿರುವ ಬಿಜೆಪಿ ತಂತ್ರಗಾರಿಕೆ ಫಲ ನೀಡುವುದೇ ಅಥವಾ ಮೈತ್ರಿ ಮಂತ್ರ ಫಲ ನೀಡುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.