ಬೆಂಗಳೂರು: ಮೈಸೂರು ಅರಸರು ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡಿದ್ದರು ಎಂದು ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಆಯೋಜಿಸಿದ್ದ ಮಾರತ್ ಹಳ್ಳಿಯ ರೈನ್ ಬೋ ಆಸ್ಪತ್ರೆಯ ಬರ್ತ್ ರೈಟ್ ಮಹಡಿಯನ್ನು ಅವರು ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ಅತ್ಯುತ್ತಮ ಆರೋಗ್ಯ ಸೌಲಭ್ಯ ನೀಡುವಲ್ಲಿ ರೈನ್ ಬೋ ಆಸ್ಪತ್ರೆಯು ಸದಾ ಮುಂದಿದೆ. ಸಮುದಾಯಕ್ಕೆ ನೆರವಾಗುವ ರೈನ್ ಬೋ ಆಸ್ಪತ್ರೆಯ ಪ್ರಯತ್ನ ಶ್ಲಾಘನೀಯವೆಂದರು.ಇದೇ ವೇಳೆ ಮೈಸೂರಿನ ಪ್ರತಿ ಅರಸರು ಸಹ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ನೀಡಲು ಹೆಚ್ಚಿನ ಪರಿಶ್ರಮಪಟ್ಟಿದ್ದರೆಂದು ಸ್ಮರಿಸಿದರು. ಇದಲ್ಲದೆ ಮೈಸೂರು ಸಾಮ್ರಾಜ್ಯದ ಸಂರಕ್ಷಕರಾಗಿ ಮಹತ್ತರ ಪಾತ್ರವಹಿಸಿದ ರಾಣಿ ಲಕ್ಷ್ಮಿ ಅಮ್ಮಣಿ ಅವರನ್ನು ಸಹ ಈ ಕ್ಷಣ ನೆನೆಯಬೇಕಿದೆ ಎಂದರು.
ಗರ್ಭಾವಸ್ಥೆಯಲ್ಲಿ ಹೆಚ್ಚಿನ ಆರೈಕೆ ಅಗತ್ಯ. ರೈನ್ ಬೋ ಆಸ್ಪತ್ರೆಯು ಗರ್ಭಿಣಿ ಸ್ತ್ರೀಯರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತದೆ. ರೈನ್ ಬೋ ಆಸ್ಪತ್ರೆಯ ತಜ್ಞರು ಸುರಕ್ಷಿತವಾಗಿ ಪ್ರಸೂತಿ ಮಾಡಿಸುವಲ್ಲಿ ಪರಿಗಣಿತರಾಗಿದ್ದಾರೆ. ಪ್ರತಿ ಪೋಷಕರಿಗೂ ಮಕ್ಕಳ ಆರೋಗ್ಯವೇ ಅತ್ಯಗತ್ಯ. ರೈನ್ ಬೋ ಆಸ್ಪತ್ರೆಯ ತಜ್ಞರು ಮಕ್ಕಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಲ್ಲಿ ಪರಿಣಿತಿ ಹೊಂದಿರುವುದು ಸಂತೋಷಕರ. ಚಿಕಿತ್ಸೆಗಿಂತ ಮುಂಜಾಗ್ರತೆಯು ಉತ್ತಮ ಎಂಬುದನ್ನು ಪುನರುಚ್ಛರಿಸುತ್ತೇನೆ. ನಾವು ಮಕ್ಕಳಿಗೆ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಿಸಬೇಕು ಎಂದರು.
ಬರ್ತ್ ರೈಟ್ ಮಹಡಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರದ ಕಾರ್ಯ ವಿಧಾನ ನಡೆಯಲಿವೆ. ಈ ಮಹಡಿ ವಾರ್ಡ್ ಗಳೊಂದಿಗೆ ಆಧುನಿಕ ಓಟಿ ಮತ್ತು ಎಲ್ ಡಿಆರ್ ಸಂಕೀರ್ಣಗಳನ್ನು ಹೊಂದಿದೆ. ವಾರ್ಡ್ ಗಳು ಸ್ಯೂಟ್ ಕೊಠಡಿ, ಡಿಲಕ್ಸ್ ಕೊಠಡಿ, ಖಾಸಗಿ ಕೊಠಡಿಗಳನ್ನು ಒಳಗೊಂಡಿವೆ. ಇದರ ಜೊತೆಗೆ ಈ ಮಹಡಿಯಲ್ಲಿ ನವಜಾತ ಶಿಶುವಿನ ಸ್ನಾನದ ಜಾಗ ಮತ್ತು ರೋಗಿಗಳ ವೇಟಿಂಗ್ ಲಾಂಗ್ ಸೌಲಭ್ಯತೆಗಳಿವೆ.