Advertisement

ಲಿಮ್ಕಾ ದಾಖಲೆ ಬರೆದ ಮೈಸೂರಿನ ಖುಷಿ

01:22 PM Jun 12, 2017 | |

ಮೈಸೂರು: ನಗರದ ಬಾಲಕಿಯೊಬ್ಬಳು ಯೋಗ ಪ್ರದರ್ಶನದಲ್ಲಿ ವಿಶ್ವ ದಾಖಲೆ ಬರೆದು, ಜಗತ್ತಿನ ಗಮನ ಸೆಳೆದಿದ್ದಾಳೆ. ನಗರದ ಆರ್‌ಬಿಐ ನೋಟು ಮುದ್ರಣ ಘಟಕದ ಅಧಿಕಾರಿ ಹೇಮಚಂದ್ರ ಹಾಗೂ ಕುಮುದಾ ದಂಪತಿಯ ಪುತ್ರಿ 13 ವರ್ಷದ ಖುಷಿ ಈ ಸಾಧನೆ ಮಾಡಿರುವ ಬಾಲಕಿ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಉತ್ತಮ ಯೋಗ ಕಲೆ ಮೈಗೂಡಿಸಿರುವ ಬಾಲಕಿ ಒಂದು ನಿಮಿಷದಲ್ಲಿ ನಿರಾಲಂಭ ಪೂರ್ಣ ಚಕ್ರಾಸನ ಯೋಗಾಸನವನ್ನು 15 ಬಾರಿ ಪ್ರದರ್ಶಿಸುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದಾರೆ.

Advertisement

ನಗರದ ಮೇಟಗಳ್ಳಿಯ ಆರ್‌ಬಿಐ ನಗರದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖುಷಿ ಈ ಸಾಧನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಹಾಜರಿದ್ದ ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ ಪ್ರತಿನಿಧಿ ಸಂತೋಷ್‌ ಅಗರ್‌ವಾಲ್‌, ಖುಷಿಗೆ ಲಿಮ್ಕಾ ಪ್ರಶಸ್ತಿ ಪತ್ರ ವಿತರಿಸಿದರು.

ಚಕ್ರಾಸನ ಯೋಗ: ಖುಷಿ ಪ್ರದರ್ಶನ ನೀಡಿರುವ ಚಕ್ರಾಸನದಲ್ಲಿ ಯೋಗಪಟು ತನ್ನ ಎರಡೂ ಕೈಗಳನ್ನು ಮುಂದಕ್ಕೆ ಕಟ್ಟಿಕೊಂಡು ಯಾವುದೇ ವಸ್ತುವಿನ ಸಹಾಯವಿಲ್ಲದೆ ಚಕ್ರಾಸನದ ಮಾದರಿಯಲ್ಲಿ ಕಾಲಿನ ಮೇಲೆ ನಿಯಂತ್ರಣ ಸಾಧಿಸಿಕೊಂಡು ಹಿಂಭಾಗಕ್ಕೆ ಬಾಗಿ ನೆಲಕ್ಕೆ ಮೊದಲು ತಲೆ ಮುಟ್ಟಿಸಿ,

-ಬಳಿಕ ನಿಧಾನವಾಗಿ ಜಾರಿಕೊಂಡು ನೇರವಾಗಿ ಮಲಗುವುದಾಗಿದೆ. ನಂತರ ಅದೇ ರೀತಿ ಕಾಲಿನ ಸಹಾಯದಿಂದಲೆ ಮೇಲಕ್ಕೇಳುವ ಈ ಆಸನ ಅತ್ಯಂಕ ಕ್ಲಿಷ‌rಕರವಾಗಿದೆ. ಆದರೆ ಖುಷಿ ಈ ಆಸನವನ್ನು ಅತಿ ಸುಲಭವಾಗಿ ಪ್ರದರ್ಶಿಸುವ ಮೂಲಕ ನೋಡುಗರಲ್ಲಿ ಅಚ್ಚರಿ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next