Advertisement

ಅದ್ಧೂರಿ ಜಂಬೂ ಸವಾರಿ ಮೆರವಣಿಗೆ; ಮೈಸೂರಿನಲ್ಲಿ ಕಳೆಗಟ್ಟಿದ ಸಂಭ್ರಮ

04:58 PM Oct 19, 2018 | |

 ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ಜಂಬೂ ಸವಾರಿ ಅರಮನೆ ನಗರಿಯಲ್ಲಿ ಶುಕ್ರವಾರ ವೈಭವೋಪೇತವಾಗಿ ನಡೆಯಿತು. 

Advertisement

ಶುಕ್ರವಾರ ಮಧ್ಯಾಹ್ನ  ಅರಮನೆ ಬಲರಾಮದ್ವಾರದಲ್ಲಿ ಶುಭ ಕುಂಭ ಲಗ್ನದಲ್ಲಿ  ನಂದೀಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು  ವಿಜಯದಶಮಿ ಮೆರವಣಿಗೆ ಉದ್ಘಾಟಿಸಿದರು.

ದಸರಾ ಗಜಪಡೆಯ ಕ್ಯಾಪ್ಟನ್‌ ಅರ್ಜುನ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಯನ್ನು ಹೊತ್ತು ಗಾಂಭೀರ್ಯದಲ್ಲಿ  ಇತರ ಸಾಲಂಕೃತ ಆನೆಗಳೊಂದಿಗೆ ಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದ. ಮುಖ್ಯಮಂತ್ರಿ  ಎಚ್‌ಡಿಕೆ ಅವರು ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. 

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ನಗರ ಪೊಲೀಸ್‌ ಆಯುಕ್ತ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್‌ ಹಾಜರಿದ್ದರು.  

 ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಪ್ರಾಕೃತಿಕ ಶ್ರೀಮಂತಿಕೆಗಳನ್ನು ಬಿಂಬಿಸುವ ನಾಡಿನ ಮೂಲೆ ಮೂಲೆಯಿಂದ ಆಗಮಿಸುವ 100ಕ್ಕೂ ಹೆಚ್ಚು ಕಲಾ ತಂಡಗಳು, ರಾಜ್ಯದ ಎಲ್ಲಾ ಜಿಪಂ ಹಾಗೂ ವಿವಿಧ ಇಲಾಖೆ, ನಿಗಮಗಳ ಒಟ್ಟು 42 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ  ಗಮನ ಸೆಳೆದವು.

Advertisement

ದೇಶವಿದೇಶ ಗಳಿಂದ ಆಗಮಿಸಿದ  ಲಕ್ಷಾಂತರ ಪ್ರವಾಸಿಗರು ಅದ್ಧೂರಿ ಜಂಬೂ ಸವಾರಿ ಮೆರವಣಿಗೆಯನ್ನು ಕಣ್‌ತುಂಬಿಕೊಂಡರು. 

ಅರ್ಜುನ ಸೇರಿದಂತೆ ದಸರಾ ಗಜಪಡೆಯ 12 ಆನೆ, ಅಶ್ವಾರೋಹಿ ಪಡೆ, ಎನ್‌ಸಿಸಿ ಕೆಡೆಟ್ಸ್‌ ಅರಮನೆ ಆವರಣ ದಿಂದ 5 ಕಿ.ಮೀ ದೂರದ ಬನ್ನಿಮಂಟಪ ಮೈದಾನದವರೆಗೆ ಜಂಬೂಸವಾರಿ ಮೆರವಣಿಗೆ ಸಾಗಿತು. 

ರಾಜಮಾತೆ ಪ್ರಮೋದಾ ದೇವಿ ಅವರಿಗೆ ಮಾತೃ ವಿಯೋಗವಾದ ಹಿನ್ನಲೆಯಲ್ಲಿ ಯುವರಾಜ ಯದುವೀರ್‌ ಒಡೆಯರ್‌ ಸೇರಿದಂತೆ ರಾಜಮನೆತನದವರು ಜಂಬೂ ಸವಾರಿ ಮೆರವಣಿಗೆ ಮತ್ತು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲ್ಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next