Advertisement

ನಾಡಹಬ್ಬ ಮೈಸೂರು ದಸರೆಗೆ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ಸಂಜೆ ಕಣ್ಮನ ತಣಿಸುವ ಜಂಬೂಸವಾರಿ ಮೆರವಣಿಗೆ ಆರಂಭ ವಾಗಲಿದ್ದು, ಕೋವಿಡ್‌ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಷ್ಟೇ ಉತ್ಸವ ಕಣ್ತುಂಬಿಕೊಳ್ಳಬಹುದು.

Advertisement

ಸಂಜೆ 4.36ರಿಂದ 4.46 ಮೀನ ಲಗ್ನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಮೂಲಕ ಮೆರವಣಿಗೆಗೆ ಚಾಲನೆ

ಸಂಜೆ 5ರಿಂದ 5.30
ಚಿನ್ನದ ಅಂಬಾರಿಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ

ಮೆರವಣಿಗೆ ವಿಶೇಷತೆ
6 ಸ್ತಬ್ಧ ಚಿತ್ರಗಳು, ಪೊಲೀಸ್‌ ಬ್ಯಾಂಡ್‌, ಅಶ್ವಾರೋಹಿ ದಳ, 14 ಕಲಾತಂಡ ಭಾಗಿ. ಈ ಬಾರಿಯ ವಿಶೇಷ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ತಬ್ಧ ಚಿತ್ರ.

ಉಪಸ್ಥಿತಿ
ಪುಷ್ಪಾರ್ಚನೆ ವೇಳೆ ಆರು ಗಣ್ಯರಿಗೆ ಅವಕಾಶ – ಸಿಎಂ ಬಸವರಾಜ ಬೊಮ್ಮಾಯಿ, ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಡೀಸಿ, ನಗರ ಪೊಲೀಸ್‌ ಆಯುಕ್ತ, ಮೇಯರ್‌.

Advertisement

500 ಮಂದಿಗಷ್ಟೇ ಅವಕಾಶ
ಈ ಬಾರಿಯ ದಸರಾ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು 500 ಮಂದಿಗಷ್ಟೇ ಅವಕಾಶ. ಗಣ್ಯಾತಿಗಣ್ಯರಷ್ಟೇ ಭಾಗಿ.

 

Advertisement

Udayavani is now on Telegram. Click here to join our channel and stay updated with the latest news.

Next