ಮೈಸೂರು : ಕೋವಿಡ್ ವೇಳೆ ಕ್ರೈಂ ರೇಟ್ ಕಡಿಮೆ ಯಾಗಿತ್ತು. ಲಾಕ್ ಡೌನ್ ತೆರವು ಬಳಿಕ ಕ್ರೈಂ ರೇಟ್ ಜಾಸ್ತಿಯಾಗುತ್ತಿದೆ. ಸರಗಳ್ಳತನ, ದರೋಡೆಯಂತ ಪ್ರಕರಣಗಳು ಲಾಕ್ ಡೌನ್ ಮುಗಿದ ಬಳಿಕ ಕಂಡುಬರುತ್ತಿದೆ. ಮೈಸೂರು ನಗರದಲ್ಲಿ ಸರಗಳ್ಳತ ಇತ್ತು, ಆದರೆ ಈಗ ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಸರಗಳ್ಳತನ ಆಗುತ್ತಿದೆ ಎಂದು ಗೃಹ ಸಚಿವ ಬಸರಾಜು ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಚಾಲೆಂಜ್ ನಮಗಿದೆ. 50ಕೋಟಿ ಅಷ್ಟು ಡ್ರಗ್ ನಾಶ ಮಾಡಿದ್ದೇವೆ. 5 ವರ್ಷದಷ್ಟು ಡ್ರಗ್ ಕೇವಲ ಒಂದೇ ವರ್ಷದಲ್ಲಿ ಸಂಗ್ರಹವಾಗಿದೆ. ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಕೆಲಸವಾಗುತ್ತಿದೆ. ಡ್ರಗ್ಸ್ ವಿದೇಶದಿಂದ ಡಾರ್ಕ್ ವೆಬ್ ನಲ್ಲಿ ಬರುತ್ತಿವೆ. ಬಹಳ ಸೆಕ್ಯುರಿಟಿಯಲ್ಲಿ ಬರುತ್ತಿದೆ, ಇದನ್ನ ಕರ್ನಾಟಕ ಪೊಲೀಸರು ಯಶಸ್ವಿಯಾಗಿ ಹಿಮ್ಮೆಟ್ಟಿದ್ದಾರೆ.
ಬಹಳಷ್ಟು ಸಾರಿ ಸಾಮಾನ್ಯ ಪೋಸ್ಟ್ ನಲ್ಲಿ ಡ್ರಗ್ಸ್ ಸರಬರಾಜಗುತ್ತದೆ. ಡ್ರಗ್ ಕೇಸ್ ಸಂಬಂದಿಸಿದಂತೆ ವಿದೇಶಿಗರ ಬಂಧನ ವಾಗಿದೆ. ಕಳೆದ ವರ್ಷದಲ್ಲಿ 15 ರಿಂದ 20 ಮಂದಿ ವಿದೇಶಿಗರ ಬಂಧನವಾಗಿದೆ. ಈ ಪೈಕಿ ಆಫ್ರಿಕನ್ಸ್ ನವರೆ ಹೆಚ್ಚಿದ್ದಾರೆ ಎಂದರು.
ಇದೇ ವೇಳೆ ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡಿದ ಬೊಮ್ಮಾಯಿ, ಕೋವಿಡ್ ವೇಳೆಯಲ್ಲಿ ಇಲಾಖೆಯ ಪೊಲೀಸರು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪೈಕಿ 3 ರಿಂದ 4 ಸಾವಿರ ಮಂದಿ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಪೈಕಿ ಎಲ್ಲರ ಆರೋಗ್ಯದ ಕಡೆಗೂ ಗಮನವಹಿಸಲಾಗುತ್ತಿದೆ. ಡೆತ್ ಅದವರ ಸಂಖ್ಯೆ ಕಡಿಮೆ ಇದೆ.
ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲಾಗುತ್ತಿದೆ. ಪೊಲೀಸರ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ವಹಿಸಲಾಗುತ್ತಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಕ್ಕೆ ಲಂಚ ಪಡೆಯುವ ವಿಚಾರವಾಗಿ ಮಾತನಾಡಿದ ಅವರು, ಇಂತಹ ಕೆಲಸಕ್ಕೆಲ್ಲ ಇದೀಗ ಕಡಿವಾಣ ಹಾಕಲಾಗುತ್ತಿದೆ. ಇದು ಹಳೆಯ ಪದ್ದತಿ, ಆದರೆ ಇದಕ್ಕೆ ನಮ್ಮ ಸರ್ಕಾರ ಕಡಿವಾಣ ಹಾಕಿದೆ. ಪೊಲೀಸ್ ಬೋರ್ಡ್ ಬಂದಮೇಲೆ ಹಳೆಯ ಮಾದರಿಯ ವರ್ಗಾವಣೆಯಲ್ಲಿ ವ್ಯವಹಾರ ನಡೆಯೋದಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಬಸವರಾಜು ಬೊಮ್ಮಾಯಿ ಹೇಳಿಕೆ ನೀಡಿದರು.