Advertisement

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ : ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ದೇಹ

09:54 PM Mar 12, 2022 | Team Udayavani |

ಮೈಸೂರು : ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹತ್ತಿಕೊಂಡು ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಹೊರಬರಲಾಗದೆ ಸಾವನ್ನಪಿದ್ದ ಘಟನೆ ಟಿ.ನರಸೀಪುರ ತಾಲ್ಲೂಕಿನ ಸೀಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಸೀಹಳ್ಳಿ ಗ್ರಾಮದ ಸೋಮಶೇಖರಪ್ಪ 53 ಮೃತ ದುರ್ದೈವಿ,

ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಯನ್ನು ಆವರಿಸಿಕೊಂಡಿದೆ ಈ ವೇಳೆ ಮನೆಯೊಳಗಿದ್ದ ಸೋಮಶೇಖರಪ್ಪ ಮನೆಯಿಂದ ಹೊರಬರಲಾಗದೆ ಸಾವನ್ನಪ್ಪಿದ್ದಾರೆ.

ಬೆಂಕಿ‌ ತೀರ್ವತೆ ಹೆಚ್ಚಾಗಿ ಪಕ್ಕದ ಎರಡು ಮನೆಗಳೂ ಸುಟ್ಟು ಭಸ್ಮವಾಗಿದೆ, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಘಟನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಒಡವೆ, ಹಣ ಸಂಪೂರ್ಣ ನಾಶವಾಗಿದೆ.

ಇದನ್ನೂ ಓದಿ : ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು : ಮಹತ್ವ ಪಡೆಯಲಿದೆ ನಾಳಿನ ಕಾರ್ಯಕಾರಿ ಸಮಿತಿ ಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next