Advertisement
ಅರಮನೆ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಂಪತಿಯ ಪುತ್ರನಿಗೆ ಸೋಂಕು ಇರುವುದು ದೃಢಪಟ್ಟ ಹಿನ್ನಲೆಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಅರಮನೆ ಬಂದ್ ಆಗಲಿದೆ.
Related Articles
Advertisement
ಈಗ ಸಿದ್ದಯ್ಯ ಅವರ ಪುತ್ರನಿಗೆ ಸೋಂಕು ಇರುವುದ ದೃಢ ಪಟ್ಟ ಹಿನ್ನಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಅರಮನೆಯನ್ನು ಬಂದ್ ಗೊಳಿಸಲಾಗಿದ್ದು, ಸಿದ್ದಯ್ಯ ಅವರು ವಾಸವಿದ್ದ ಕ್ವಾಟ್ರಸ್, ಮಹಾರಾಣಿ ಖಾಸಗಿ ಅರಮನೆ ಸೇರಿದಂತೆ ಇಡೀ ಅರಮನೆ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಇಬ್ಬರು ಡಿವೈಎಸ್ಪಿಗಳಿಗೆ ಸೋಂಕು: ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಗೆ ಆಗಮಿಸಿದ್ದ ಇಬ್ಬರು ಡಿವೈಸ್ಪಿಗಳಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ.
ಕಳೆದ ಎರಡು ತಿಂಗಳ ಬಳಿಕ ಮತ್ತೆ ತರಬೇತಿ ಕಾರ್ಯವನ್ನು ಆರಂಭಿಸುವಂತೆ ಸರಕಾರದಿಂದ ಸೂಚನೆ ಬಂದ ಮೇಲೆ ಹೊಸದಾಗಿ ನೇಮಕಗೊಂಡ ಡಿವೈಎಸ್ಪಿಗಳಿಗೆ ತರಬೇತಿ ನೀಡುವ ಕಾರ್ಯಕ್ಕೆ ಚಾಲನೆ ದೊರೆತಿತ್ತು. 15 ಮಂದಿ ರಾಜ್ಯದ ನಾನಾ ಮೂಲೆಯಿಂದ ತರಬೇತಿಗೆ ಹಾಜರಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಿಲಾಗಿತು.ಪರೀಕ್ಷೆಯಲ್ಲಿ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟ ಹಿನ್ನಲೆಯಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಅವರು ಉಳಿದುಕೊಂಡಿದ್ದ ಸ್ಥಳವನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಕೆಪಿಎ ಉಪ ನಿರ್ದೇಶಕ ಸುಧೀರ್ ರೆಡ್ಡಿ ಹೇಳಿದ್ದಾರೆ. ಕೆ.ಆರ್. ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು: ಕೆ.ಆರ್.ಆಸ್ಪತ್ರೆ ಕ್ಯಾನ್ಸರ್ ವಿಭಾಗ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಗೂ ಕೋವಿಡ್ ಸೋಂಕು ಧೃಡ ಪಟ್ಟಿದ್ದು, ಮಹಿಳೆ ವಾಸವಿದ್ದ ಶಾರದಾದೇವಿನಗರದ ಎರನೇ ಹಂತದ ರಸ್ತೆಯನ್ನು ಸ್ಯಾನಿಟೈಸ್ ಮಾಡುವ ಮೂಲಕ ಸೀಲ್ ಡೌನ್ ಮಾಡಲಾಗಿದೆ. ಇನ್ನು ಆಸ್ಪತ್ರೆ ಆವರಣದಲ್ಲೂ ಸ್ಯಾನಿಟೈಸ್ ಮಾಡಲಾಗಿದ್ದು, ಸೋಂಕಿತ ಮಹಿಳೆಯ ನೇರ ಸಂಪರ್ಕದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.