Advertisement

ಮೈಸೂರು: ಯುವಕನ ಮೇಲೆ ಚಿರತೆ ದಾಳಿ; ಪ್ರಾಣಾಪಾಯದಿಂದ ಪಾರು

08:42 AM Dec 19, 2022 | Team Udayavani |

ಮೈಸೂರು: ತಿ. ನರಸೀಪುರ ತಾಲೂಕು ಬನ್ನೂರಿನಲ್ಲಿ ಮತ್ತೆ ಚಿರತೆ ಅಟ್ಟಹಾಸ ಮೆರೆದಿದ್ದು, ಯುವಕನೋರ್ವನ ಮೇಲೆ ಎರಗಿ ಗಾಯಗೊಳಿಸಿರುವ ಘಟನೆ ಬನ್ನೂರಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಸತೀಶ್ ಎಂಬಾತ ಭಾನುವಾರ ಸಂಜೆ ಜಮೀನಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ. ಚಿರತೆ ಏಕಾಏಕಿ ದಾಳಿ ನಡೆಸಿದ್ದರಿಂದ ತನ್ನ ಬಳಿ ಇದ್ದ ಮೊಬೈಲ್ ಮೂಲಕ ಚಿರತೆಗೆ ಹೊಡೆದು ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಚಿರತೆ ಸ್ಥಳದಿಂದ ಪೇರಿ ಕಿತ್ತಿದೆ. ಗಾಯಗೊಂಡ ಸತೀಶ್ ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬನ್ನೂರು ವ್ಯಾಪ್ತಿಯಲ್ಲಿ ಅಕ್ಟೋಬರ್ 30 ರಂದು ಕಾಲೇಜು ವಿದ್ಯಾರ್ಥಿ ಹಾಗೂ ಡಿಸೆಂಬರ್ 1ರಂದು ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಚಿರತೆ ಬಲಿ ಪಡೆದಿತ್ತು.

ಘಟನೆ ಬಳಿಕ ಅರಣ್ಯ ಇಲಾಖೆ ಕಳೆದ ಹದಿನೆಂಟು ದಿನಗಳಿಂದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದರೂ ಈವರೆಗೂ ಚಿರತೆ ಸೆರೆ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next