Advertisement

ಮೈಸೂರು-ಬೆಂಗಳೂರು ರೈಲು ಸಂಚಾರ ಆರಂಭ

05:09 AM May 23, 2020 | Lakshmi GovindaRaj |

ಮೈಸೂರು: ಮೈಸೂರು-ಬೆಂಗಳೂರು ರೈಲು ಸಂಚಾರ ಶುಕ್ರವಾರ ಪುನಾರಂಭವಾಗಿದ್ದು, ಮೊದಲ ದಿನ 57 ಮಂದಿ ಬೆಂಗಳೂರಿನತ್ತ ತೆರಳಿದರು. ವಿಶೇಷ ಮೆಮು ರೈಲು ಭಾನುವಾರ ಹೊರತುಪಡಿಸಿ ನಿತ್ಯ ಸಂಚಾರ ಆರಂಭಿಸಿದೆ.  ಶುಕ್ರವಾರ ಬೆಂಗಳೂರಿನಿಂದ ಮಧ್ಯಾಹ್ನ 12.45ಕ್ಕೆ ಬರಬೇಕಿದ್ದ ರೈಲು 12.30ಕ್ಕೆ ಬಂದು ತಲುಪಿತು. ಮಧ್ಯಾಹ್ನ 1.45ಕ್ಕೆ ಮೈಸೂರಿನಿಂದ ಅದೇ ರೈಲು ಬೆಂಗಳೂರಿಗೆ ಹಿಂದಿರುಗಿತು.

Advertisement

ಬೆಂಗಳೂರಿನಿಂದ ಮೈಸೂರಿಗೆ 63 ಮಂದಿ  ಬಂದಿದ್ದಾರೆ.  ರೈಲು ನಿಲ್ದಾಣದ 1 ದ್ವಾರದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ರೈಲ್ವೆ ನಿಲ್ದಾಣದ ಹಿಂದಿನ ಪ್ರವೇಶದ್ವಾರ, ಸಬ್‌ ವೇ ಬಂದ್‌ ಮಾಡಲಾಗಿದ್ದು, ಪ್ರಯಾಣಿಕರ ಕೈಗೆ ಸ್ಯಾನಿಟೈಸರ್‌ ಹಾಕಿ, ಥರ್ಮಲ್‌ ಸ್ಕ್ರೀನಿಂಗ್‌ ಬಳಿಕ ರೈಲು  ನಿಲ್ದಾಣಕ್ಕೆ ಕಳುಹಿಸಲಾಯಿತು. ಆನ್‌ ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸಲು  ಸೂಚಿಸಲಾಗಿತ್ತು. ಮೈಸೂರು, ನಾಗನಹಳ್ಳಿ,ಪಾಂಡವಪುರ, ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ ಮತ್ತು ಬೆಂಗಳೂರಿನಲ್ಲಿ ರೈಲು ನಿಲುಗಡೆಗೆ ಅವಕಾಶ  ಕಲ್ಪಿಸಲಾಗಿದೆ.

ಜೂ.1ರಿಂದ ದೇಶದಾದ್ಯಂತ ಸುಮಾರು 100 ರೈಲು ಸೇವೆ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. ಮೈಸೂರು ವಿಭಾಗದಲ್ಲಿ ಮೈಸೂರು, ಹಾಸನ,  ಶಿವಮೊಗ್ಗದಿಂದ ರೈಲು ಟಿಕೆಟ್‌ ಬುಕ್ಕಿಂಗ್‌ ಸ್ವೀಕರಿಸಲಾಗುತ್ತದೆ.  ಈಗಾಗಲೇ ಆನ್‌ ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿದ್ದು, ಲಾಕ್‌ ಡೌನ್‌ ಸಂದರ್ಭದಲ್ಲಿ ರದ್ದುಪಡಿಸಿದ್ದರೆ, ಆ ಹಣವನ್ನು ಮೇ 25ರಿಂದ ಮರು ಪಾವತಿ ಮಾಡಲಾಗುವುದು.

ಬುಕ್ಕಿಂಗ್‌ ಕೌಂಟರ್‌ ಆರಂಭ: ನೈಋತ್ಯ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಕೌಂಟರ್‌ ಆರಂಭಿಸಿದೆ. ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣ, ದಾವಣಗೆರೆ, ಶಿವಮೊಗ್ಗ ಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಕೌಂಟರ್‌  ತೆರೆಯಲಾಗಿದೆ. ನಿತ್ಯ ಬೆಳಗ್ಗೆ 8ರಿಂದ ಬುಕಿಂಗ್‌ ಸ್ವೀಕರಿಸಲಾಗುತ್ತದೆ. ಬುಕ್ಕಿಂಗ್‌ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪ್ರತ್ಯೇಕ ಬಾಕ್ಸ್‌ ನಿರ್ಮಿಸಲಾಗಿದೆ. ಅಲ್ಲದೆ ಸ್ಯಾನಿಟೈಸರ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಮೈಸೂರು ವಿಭಾಗೀಯ ಕಚೇರಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next