Advertisement
ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಬೆಂಗಳೂರು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಮೈಸೂರು ಅಸೋಸಿಯೇಶನ್ ಮುಂಬಯಿ ಇವರ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಂಡ ಕನಕದಾಸರ ಸಾಂಸ್ಕೃತಿಕ ಅನುಸಂಧಾನ-ರಾಷ್ಟ್ರೀಯ ವಿಚಾರ ಸಂಕಿರಣವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ನಮ್ಮ ಕೆಲಸ ಯಾವಾಗ ಮುಗಿಯುವುದೋ ಎಂದು ಹೊರಗಡೆ ಕಾಯುವುದಿರು ತ್ತದೆ. ಆದರೆ ಇಂದು ತಾವೆಲ್ಲರೂ ನನ್ನನ್ನು ಆಮಂತ್ರಿಸಿ ವೇದಿಕೆಯಲ್ಲಿ ಕೂರಿಸಿ ಗೌರವಿಸಿದ್ದೀರಿ. ತಾನು ಕಾರ್ಕಳದಲ್ಲಿ ತಾಯಿಯ ಹೆಸರಿನ ಪ್ರೌಢಶಾಲೆಯನ್ನು ಕಟ್ಟಿಸಿ ಸರಕಾರಕ್ಕೆ ಒಪ್ಪಿಸಿರುವುದರ ಹಿಂದೆ ಕರ್ತವ್ಯಪ್ರಜ್ಞೆ ಇತ್ತು. ಪ್ರತಿ ಶಾಲೆಯ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಅವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕು ಎನ್ನುವುದು ನನ್ನ ಆಶಯ. ಕನಕದಾಸರ ಸಮಾನ ಸಮಾಜದ ಆಶಯವಾಗಿದೆ ಎಂದು ನುಡಿದು. ಇದಕ್ಕೆ ತಮ್ಮದೇ ಪೊಲೀಸ್ ಇಲಾಖೆ ಒಂದು ನಿದರ್ಶನವಾಗಿದೆ. ಮುಂಬಯಿಯಂತಹ ನಗರದಲ್ಲಿ ಒಂದೇ ಕಟ್ಟಡದ ಒಂದೇ ಫ್ಲೊÉàರ್‌ನಲ್ಲಿರುವ ನಾಲ್ಕು ಪ್ಲಾಟ್‌ಗಳಲ್ಲಿ ನಾಲ್ಕು ರಾಜ್ಯದವರು ನಾಲ್ಕು ಜಾತಿಯವರು ಇರಬಹುದು. ಆದರೆ ಅವರೆಲ್ಲರ ರಕ್ಷಣೆ ಪೊಲೀಸರು ಮಾಡುತ್ತಾರೆ. ಇದರಲ್ಲಿ ಕನಕದಾಸರ ಸಮಾನ ಸಮಾಜದ ಆಶಯ ಕಾಣಿಸುತ್ತದೆ ಎಂದು ನುಡಿದು ತಾನು ಬಾಲ್ಯದಿಂದಲೂ ಕಾಡುತ್ತಿದ್ದ ಕನಕನ ಕಿಂಡಿಯನ್ನು ನೆನಪಿಸಿಕೊಂಡರು.
Related Articles
Advertisement
ಮೈಸೂರು ಅಸೋಸಿಯೇಶನ್ನಿನ ಅಧ್ಯಕ್ಷರಾದ ಕೆ. ಕಮಲಾ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಡಾ| ಬಿ.ಆರ್. ಮಂಜುನಾಥ್, ಕೆ. ಮಂಜು ನಾಥಯ್ಯ, ನಾರಾಯಣ ನವಿಲೇಕರ್, ಡಾ| ಜೀವಿ ಕುಲಕರ್ಣಿ, ಡಾ| ಮೇಧಾ ಕುಲಕರ್ಣಿ, ಡಾ| ಪೂರ್ಣಿಮಾ ಎಸ್. ಶೆಟ್ಟಿ, ಶ್ರೀನಿವಾಸ ಜೋಕಟ್ಟೆ, ಅಶೋಕ ಸುವರ್ಣ, ರತ್ನಾಕರ ಶೆಟ್ಟಿ, ವಸಂತ ಕಲಕೋಟಿ, ಸುಶೀಲಾ ದೇವಾಡಿಗ, ನೀಲಕಂಠ ಮೇದಾರ್, ರಮಾ ವಸಂತ್, ಪ್ರಭಾಕರ ಬೆಳವಾಯಿ, ಬಾಲಚಂದ್ರ ರಾವ್, ಡಾ| ಜ್ಯೋತಿ ಸತೀಶ್, ಸುಗಂಥಾ ಸತ್ಯಮೂರ್ತಿ, ಸಾ. ದಯಾ, ಡಾ| ರಘುನಾಥ್ ಮೊದಲಾದವರು ಭಾಗವಹಿಸಿದ್ದರು. ವಿದುಷಿ ವೀಣಾ ಶಾಸ್ತ್ರಿ, ಡಾ| ಶ್ಯಾಮಲಾ ಪ್ರಕಾಶ್, ವಿದುಷಿ ಶ್ಯಾಮಲಾ ರಾಧೇಶ್ ಅವರಿಂದ ಕನಕ ಸಂಗೀತ ಗಾಯನ ಕಾರ್ಯಕ್ರಮ ನಡೆಯಿತು.
ಕುಮಾರಿ ಜೀವಿಕಾ ಶೆಟ್ಟಿ ಪೇತ್ರಿ ಕನಕದಾಸರ ರಚನೆಯ ಕಾವ್ಯ ವಾಚನ ಮಾಡಿದರು. ಕು| ನಿಕಿತಾ ಸದಾನಂದ ಅಮೀನ್ ಹಾಗೂ ರಾಗಿಣಿ ರೆಡ್ಡಿ ಅವರಿಂದ ನೃತ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ನಿರೂಪಿಸಿ ವಂದಿಸಿದರು.