Advertisement
ಕಾರ್ಯಕ್ರಮದಲ್ಲಿ ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ “ಓದು ಮುಗಿಸಿದ ಮೇಲೆ’, ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರ “ಸಮಾರಾಧನೆ’ ಹಾಗೂ ಲೇಖಕಿ, ಕವಿ ಡಾ| ದಾಕ್ಷಾಯಿಣಿ ಯಡಹಳ್ಳಿ ಇವರ “ವರ್ತುಲ’ ಮತ್ತು “ಅವ್ವಂದಿರ ಹಾಡುಗಳು’ ಕೃತಿಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಗುವುದು.
ಮಂಬಯಿಯ ಹಿರಿಯ ಸಾಹಿತಿಯಾಗಿ ಜನ ಮನ್ನಣೆಯನ್ನು ಪಡೆದ ಪಡೆದ ಡಾ| ಸುನೀತಾ ಎಂ. ಶೆಟ್ಟಿ ಅವರು ಶಿಕ್ಷಕಿಯಾಗಿ, ಪ್ರಾಧ್ಯಾಪಕಿ ಆಗಿ ಒಳ್ಳೆಯ ವಾಗ್ಮಿಯಾಗಿ ಹೆಸರು ಮಾಡಿದ್ದಾರೆ. ತುಳು -ಕನ್ನಡ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಅವರು, ಮಹಿಳೆಗೊಂದು ಸ್ವತಂತ್ರ ವ್ಯಕ್ತಿತ್ವ ಇರಬೇಕು. ಅದನ್ನು ಅವಳು ಬದುಕಿನಲ್ಲಿ ಉಳಿಸಿಕೊಳ್ಳಬೇಕು ಎಂಬುವುದನ್ನು ನಂಬಿ, ನೆಚ್ಚಿ, ಹಾಗೆ ನಡೆದು ಉನ್ನತ ವ್ಯಕ್ತಿತ್ವವನ್ನು ಗಳಿಸಿಕೊಂಡವರು. ಹೊಸ ವಿಚಾರ, ಹೊಸ ಚಿಂತನೆಗೆ ಸದಾ ತೆರೆದುಕೊಂಡು ಓಡಾಡುವ ಅವರು ಮುಂಬಯಿ ಕನ್ನಡಿಗರ ಅಕ್ಕರೆಯ ಅಕ್ಕನಾಗಿ, ಅಭಿಮಾನದ ಅಮ್ಮನಾಗಿ ಅಪಾರ ಮೆಚ್ಚುಗೆಯನ್ನು ಪಡೆದಿದ್ದಾರೆ.
Related Articles
Advertisement
ಡಾ| ದಾಕ್ಷಾಯಿಣಿ ಯಡಹಳ್ಳಿ ಮೂಲತಃ ಹುನಗುಂದಾದ ಚಿನ್ನಾಪೂರ ದವರಾದ ಇವರು ಬಿಎಸ್‌ಸಿ, ಎಂಎ, ಬಿಎಡ್ ಪದವಿ ಪಡೆ ದಿದ್ದು ಮುಲುಂಡ್ ವಿಪಿಎಂ ಶಿಕ್ಷಣ ಸಂಸ್ಥೆ ಯಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ, ಉಪ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದಾರೆ. ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಎಂಎ, ಎಂಫಿಲ್, ಪಿಎಚ್‌ಡಿ ಪದವಿಯನ್ನು ಪಡೆದಿರುವ ಇವರದ್ದು ಬಹುಮುಖ ಪ್ರತಿಭೆ. ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ. ಇವರ ಕತೆ, ಕವನ, ಲೇಖನಗಳು ನಾಡಿನ ಹಾಗೂ ನಗರದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದಲ್ಲದೆ, ಕತೆ, ಕವನಗಳಿಗೆ ಬಹುಮಾನಗಳು ಲಭಿಸಿವೆ. ಇವರ ಬ್ರಹ್ಮಕಮಲ, ದಂತ ಪಂಕ್ತಿಯ ನಡುವೆ ಇನ್ನಿತರ ಹಲವಾರು ಕೃತಿಗಳು ಪ್ರಕಟವಾಗಿವೆ.