Advertisement

ಮೈಸೂರು ಪಾಲಿಕೆ ಚುನಾವಣಾ ವೇಳಾಪಟ್ಟಿ ಪ್ರಕಟ

12:32 PM Aug 10, 2018 | |

ಮೈಸೂರು: ವಾರ್ಡ್‌ವಾರು ಮೀಸಲಾತಿ ನಿಗದಿ ಹಾಗೂ ವಾರ್ಡ್‌ಗಳ ಪುನರ್‌ ವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ, ಮೈಸೂರು ಮಹಾ ನಗರಪಾಲಿಕೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಆ.13ಕ್ಕೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸುವುದರೊಂದಿಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ.

Advertisement

ನಾಮಪತ್ರ ಸಲ್ಲಿಸಲು ಆ.20 ಕೊನೆಯ ದಿನ, 21ರಂದು ನಾಮಪತ್ರಗಳ ಪರಿಶೀಲನೆ,ಆ.23 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ. ಆ.31ರಂದು ಬೆಳಗ್ಗೆ 7 ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯವಿದ್ದಲ್ಲಿ ಸೆ.2ರಂದು ನಡೆಸಲಿದ್ದು, ಸೆ.3ರಂದು ಬೆಳಗ್ಗೆ 8ಗಂಟೆಯಿಂದ ಮತಗಳ ಎಣಿಕೆ ನಡೆಯಲಿದೆ. 

 ಮೈಸೂರು ಮಹಾ ನಗರ ಪಾಲಿಕೆಯ 65 ವಾರ್ಡ್‌ಗಳಲ್ಲಿ 725 ಮತಗಟ್ಟೆ ಸ್ಥಾಪಿಸಲಿದ್ದು, 4,01,730 ಪುರುಷ, 3,97,594 ಮಹಿಳಾ ಹಾಗೂ 98 ಇತರೆ ವರ್ಗದ ಮತದಾರರು ಸೇರಿದಂತೆ 7,99,422 ಮತದಾರರು ಮತಚಲಾಯಿಸುವ ಹಕ್ಕು ಹೊಂದಿದ್ದಾರೆ. ಚುನಾವಣೆಯ ವಿಶೇಷ ವೀಕ್ಷಕರಾಗಿ ಓರ್ವ ಐಎಎಸ್‌ ಅಧಿಕಾರಿ, ಸಾಮಾನ್ಯ ವೀಕ್ಷಕರಾಗಿ ಕೆಎಎಸ್‌ ಅಧಿಕಾರಿ,

ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರು ಮತ್ತು ಉಪ ನಿಯಂತ್ರಕರನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಕಾತಿ ಮಾಡಲಾಗಿದೆ. ಚುನಾವಣೆಗೆ ಮತಯಂತ್ರ (ಇವಿಎಂ) ಬಳಸಲಿದ್ದು, ಪ್ರತಿ ಅಭ್ಯರ್ಥಿಗೆ 3 ಲಕ್ಷ ರೂ. ಚುನಾವಣಾ ವೆಚ್ಚ ಮಿತಿ ನಿಗದಿಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಎಸ್‌.ಅರ್ಚನಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next