Advertisement

712 ಕೋಟಿ ಬಜೆಟ್‌ಗೆ ಮೈಸೂರು ಪಾಲಿಕೆ ಅನುಮೋದನೆ

12:28 PM Feb 28, 2018 | Team Udayavani |

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 2018-19ನೇ ಸಾಲಿನ 712.54 ಕೋಟಿ ರೂ. ಮೊತ್ತದ ಆಯವ್ಯಯಕ್ಕೆ ಪಾಲಿಕೆ ಕೌನ್ಸಿಲ್‌ ಸಭೆ ಅನುಮೋದನೆ ನೀಡಿತು. ಮೇಯರ್‌ ಬಿ.ಭಾಗ್ಯವತಿ ಅಧ್ಯಕ್ಷತೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಬಜೆಟ್‌ ಸಭೆಯಲ್ಲಿ ತೆರಿಗೆ ನಿರ್ಧರಣಾ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಪಿ.ಅಶ್ವಿ‌ನಿ, ಪಾಲಿಕೆ ಆಯವ್ಯಯ ಮಂಡಿಸಿದರು.

Advertisement

ಕಳೆದ ಆರ್ಥಿಕ ವರ್ಷದಲ್ಲಿ 147.48 ಕೋಟಿ ರೂ. ಉಳಿಕೆಯಾಗಿದ್ದು, ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ 565.05 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಒಟ್ಟು 705.47 ಕೋಟಿ ರೂ.ಖರ್ಚು ಅಂದಾಜಿಸಲಾಗಿದ್ದು, ಆ ಮೂಲಕ ಈ ಬಾರಿ 7 ಕೋಟಿ ರೂ. ಉಳಿತಾಯ ಬಜೆಟ್‌ ಅಂಗೀಕರಿಸಲಾಯಿತು.

ಆದಾಯ ನಿರೀಕ್ಷೆ: ನಗರ ಪಾಲಿಕೆಗೆ 2018-19ನೇ ಸಾಲಿನಲ್ಲಿ ಆಸ್ತಿ ತೆರಿಗೆ, ಖಾತಾ ವರ್ಗಾವಣೆ ಹಾಗೂ ಖಾತಾ ಪ್ರತಿಗಳ ಶುಲ್ಕದಿಂದ 175.12 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ. 2017ರ ಡಿಸೆಂಬರ್‌ ಅಂತ್ಯಕ್ಕೆ 90.67 ಕೋಟಿ ರೂ. ವಸೂಲಿ ಮಾಡಲಾಗಿದ್ದು, ವರ್ಷಾಂತ್ಯಕ್ಕೆ ನಿರೀಕ್ಷಿತ ಗುರಿ ಮುಟ್ಟಲು ಕ್ರಮವಹಿಸಲಾಗಿದೆ. ಪ್ರಸಕ್ತ ಸಾಲಿಗೆ ಈ ಬಾಬಿ¤ನಲ್ಲಿ 127.00 ಕೋಟಿ ರೂ. ಆದಾಯ ನಿರೀಕ್ಷಿಸಲಾಗುತ್ತಿದೆ.

ಇನ್ನೂ ನೀರಿನ ತೆರಿಗೆ 85 ಕೋಟಿ ರೂ., ಒಳಚರಂಡಿ ತೆರಿಗೆಯಿಂದ 15.00 ಕೋಟಿ ರೂ., ಜತೆಗೆ ಕಟ್ಟಡ ಪರವಾನಿಗೆ ಶುಲ್ಕ, ನೆಲಬಾಡಿಗೆ ಶುಲ್ಕ, ರಸ್ತೆ ಅಗೆತ ಶುಲ್ಕ, ಉತ್ತಮತೆ ಶುಲ್ಕ, ಅಭಿವೃದ್ಧಿ ಶುಲ್ಕ, ಪರಿಶೀಲನಾ ಶುಲ್ಕ, ನೀರಿನ ಸಂಪರ್ಕ ಶುಲ್ಕ, ಕಟ್ಟಡ ಪೂರ್ಣಗೊಂಡ ವರದಿ,

ದಂಡ ಮತ್ತು ಜುಲ್ಮಾನೆ, ಒಳಚರಂಡಿ ಶುಲ್ಕಗಳು ಹಾಗೂ ಯೋಜನೆಗೆ ಸಂಬಂಧಿಸಿದ ಇತರೆ ಆದಾಯದಿಂದ ಒಟ್ಟು 9.82 ಕೋಟಿ ರೂ. ಆದಾಯವನ್ನು ನಿರೀಕ್ಷೆ ಮಾಡಲಾಗಿದೆ. ಇದಲ್ಲದೆ ಉದ್ದಿಮೆ ಪರವಾನಗಿ ಶುಲ್ಕದಿಂದ 6 ಕೋಟಿ ರೂ. ಹಾಗೂ ನಗರ ಪಾಲಿಕೆ ಆಸ್ತಿಗಳಿಂದ ಬರುವ ಬಾಡಿಗೆ 3.71 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ.

Advertisement

ಸರ್ಕಾರಗಳ ಅನುದಾನ: ನಗರ ಪಾಲಿಕೆಯ ವಿವಿಧ ಮೂಲಗಳ ಜತೆಗೆ ರಾಜ್ಯ ಹಣಕಾಸು ಆಯೋಗದ ಮುಕ್ತ ನಿಧಿಯಿಂದ 2017-18ನೇ ಸಾಲಿಗೆ 50 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿತ್ತು. ಡಿಸೆಂಬರ್‌ ಅಂತ್ಯಕ್ಕೆ 24.96 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ವರ್ಷದ ಮಾರ್ಚ್‌ ಅಂತ್ಯಕ್ಕೆ 36.17 ಕೋಟಿ ರೂ. ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಉಳಿದಂತೆ ರಾಜ್ಯ ಸರ್ಕಾರದಿಂದ ಬೀದಿದೀಪ ಹಾಗೂ ನೀರು ಸರಬರಾಜು ಸ್ಥಾವರಗಳ ವಿದ್ಯುತ್ಛಕ್ತಿ ಬಿಲ್‌ಗ‌ಳ ಪಾವತಿಗೆ 80 ಕೋಟಿ ರೂ. ಅನುದಾನ ನಿರೀಕ್ಷಿಸಿದ್ದು, ಡಿಸೆಂಬರ್‌ ಅಂತ್ಯಕ್ಕೆ 46.06 ಕೋಟಿ ರೂ. ಬಿಡುಗಡೆಯಾಗಿದೆ. ಮಾರ್ಚ್‌ ಅಂತ್ಯಕ್ಕೆ 52.25 ಕೋಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್ನೂ ರಾಜ್ಯ ಹಣಕಾಸು ಆಯೋಗದಿಂದ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ ವೇತನಕ್ಕೆ 67.64 ಕೋಟಿ ರೂ.ನಿರೀಕ್ಷಿಸಲಾಗಿದೆ.

ಅಲ್ಲದೆ 14ನೇ ಹಣಕಾಸು ಆಯೋಗದಿಂದ 42.10 ಕೋಟಿ ರೂ., ನಗರದ ಅಭಿವೃದ್ಧಿಗಾಗಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 21  ಕೋಟಿ ರೂ., ಮುಖ್ಯಮಂತ್ರಿಗಳ ನಗರೋತ್ಥಾನ 2 ಮತ್ತು 3ನೇ ಹಂತದ ಅನುದಾನದಿಂದ 50 ಕೋಟಿ ರೂ., ಮೂಲ ಸೌಕರ್ಯಗಳ ಅಬಿವೃದ್ಧಿಗಾಗಿ ವಿಶೇಷ ಅನುದಾನದಿಂದ 5 ಕೋಟಿ ರೂ.,

ಪಾರಂಪರಿಕ ಕಟ್ಟಡಗಳ ಹಾಗೂ ರಸ್ತೆಗಳ ಮರು ನಿರ್ಮಾಣಕ್ಕೆ 11 ಕೋಟಿ ರೂ., ಸ್ಲಂ ಮುಕ್ತ ನಗರವನ್ನಾಗಿಸಲು 3 ಕೋಟಿ ರೂ., ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ 1 ಕೋಟಿ ರೂ., ದಸರಾ ವಿಶೇಷ ಅನುದಾನ 10 ಕೋಟಿ, ಸ್ವತ್ಛ ಬಾರತ್‌ ಮಿಷನ್‌ಗಾಗಿ 1 ಕೋಟಿ ರೂ., ಅಮೃತ್‌ ಯೋಜನೆಯಲ್ಲಿ 1 ಕೋಟಿ ರೂ. ಹಾಗೂ ನಲ್ಮ್ ಯೋಜನೆಯಲ್ಲಿ 2 ಕೋಟಿ ರೂ.ಗಳ ಆದಾಯ ಬರುವ ನಿರೀಕ್ಷೆ ಹೊಂದಲಾಗಿದೆ.

ಆದಾಯ ಸಂಗ್ರಹಕ್ಕೆ ಕ್ರಮ: ನಗರ ಪಾಲಿಕೆಗೆ ತೆರಿಗೆ ಸಂಗ್ರಹ ಹಾಗೂ ಇನ್ನಿತರ ಮೂಲಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗದ ಬಗ್ಗೆ ಸಾಕಷ್ಟು ದೂರುಗಳಿವೆ. ಈ ಹಿನ್ನೆಲೆಯಲ್ಲಿ ಪಾಲಿಕೆಗೆ ಹೆಚ್ಚಿನ ಆದಾಯ ಸಂಗ್ರಹವಾಗುವಂತೆ ಮಾಡಲು ಪ್ರಸಕ್ತ ಬಜೆಟ್‌ನಲ್ಲಿ ಕ್ರಮವಹಿಸಲಾಗಿದ್ದು, ಅದರಂತೆ ಆಸ್ತಿತೆರಿಗೆ ಪಾವತಿ ಪಾರಂಗಳ ಪರಿಶೀಲನೆ, ಆಸ್ತಿಗಳ ಅಳತೆ ಮಾಡಿ ಪರಿಶೀಲಿಸುವುದು

ಹಾಗೂ ಕಡಿಮೆ ತೆರಿಗೆ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಿ ಸಪರ್ಮಕ ತೆರಿಗೆ ಸಂಗ್ರಹಕ್ಕೆ ಕ್ರಮವಹಿಸಲು ಚಿಂತಿಸಲಾಗಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅಕ್ರಮ ನೀರಿನ ಸಂಪರ್ಕಗಳನ್ನು ಸಕ್ರಮಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಇದರಿಂದ ನೀರಿನ ಶುಲ್ಕಪಾವತಿಸದೆ ಬಳಸುವ ಪ್ರಮಾಣವನ್ನು ತಗ್ಗಿಸುವ ಜತೆಗೆ ನೀರಿನ ಶುಲ್ಕ ವಸೂಲಾತಿಯನ್ನು ಹೆಚ್ಚಿಸಿ,

ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡುವ ಸಾಮಾನ್ಯ ಕಾರ್ಯಾಧಾರಿತ ಅನುದಾನ ಹಾಗೂ ರಾಜ್ಯ ಸರ್ಕಾರದ ಪೋ›ತ್ಸಾಹಕ ಅನುದಾನ ಹೆಚ್ಚಾಗಿ ಪಡೆಯಬಹುದಾಗಿದೆ. ಇದಲ್ಲದೆ ಪಾಲಿಕೆ ವ್ಯಾಪ್ತಿಯ ಎಲ್ಲಾ ಕಂದಾಯ ಬಡಾವಣೆಗಳಿಂದ ಸಂಗ್ರಹವಾಗಬೇಕಾದ ಆಸ್ತಿತೆರಿಗೆ, ಉದ್ದಿಮೆ ಪರವಾನಗಿ ಮತ್ತು ನೀರಿನ ಶುಲ್ಕಗಳ ಕಡ್ಡಾಯ ವಸೂಲಿಗೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಬಜೆಟ್‌ ಸಭೆಯಲ್ಲಿ ಉಪ ಮೇಯರ್‌ ಎಂ.ಇಂದಿರಾ, ಪಾಲಿಕೆ ಆಯುಕ್ತ ಜಿ. ಜಗದೀಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next