Advertisement

ಮೈಸೂರು: 51 ಮಂದಿಗೆ ಸೋಂಕು

05:21 AM Jul 02, 2020 | Lakshmi GovindaRaj |

ಮೈಸೂರು: ಜಿಲ್ಲೆಯಲ್ಲಿ ಮೊದಲ ಬಾರಿಗೆ 51 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 321ಕ್ಕೇರಿದೆ. ಈವರೆಗೂ ಜಿಲ್ಲೆಯಲ್ಲಿ ಪ್ರತಿದಿನ ಹೊಸ ಪ್ರಕರಣ ದಾಖಲಾದರೂ 30ರ ಗಡಿ ದಾಟಿರಲಿಲ್ಲ. ಆದರೆ ಬುಧವಾರ ಒಂದೇ ದಿನ 51 ಮಂದಿಗೆ ಪಾಸಿಟಿವ್‌ ಆಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ. 13 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 191ಕ್ಕೇರಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ  ಸಂಖ್ಯೆ 127ಕ್ಕೆ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸೋಂಕಿನ ಪ್ರಕರಣಗಳಿಂದಾಗಿ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

Advertisement

21 ಕೆಎಸ್‌ಆರ್‌ಪಿ ಸಿಬ್ಬಂದಿ: ಬುಧವಾರ ದಾಖಲಾದ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 20, ಬೆಂಗಳೂರಿನ ಪ್ರವಾಸದ ಹಿನ್ನೆಲೆ ಹೊಂದಿರುವ 21 ಕೆಎಸ್‌ಆರ್‌ಪಿ ಪೊಲೀಸ್‌ ಸಿಬ್ಬಂದಿ, ಅಂತಾರಾಜ್ಯ ಪ್ರವಾಸದ ಹಿನ್ನೆಲೆ ಹೊಂದಿರುವ  ಓರ್ವ, ಅಂತರಜಿಲ್ಲಾ ಪ್ರವಾಸ ಮಾಡಿದ್ದ ಮೂವರು ಹಾಗೂ 6  ಐಎಲ್‌ಐ ಪ್ರಕರಣಗಳಾಗಿವೆ. ಸೋಂಕಿತರಲ್ಲಿ ಕೆಎಎಸ್‌ ಅಧಿಕಾರಿಯ ಮಗಳು ಹಾಗೂ 2 ವರ್ಷದ ಮಗುವೂ ಸೇರಿದೆ.

ಸೋಂಕಿತರೆಲ್ಲರೂ ಕ್ವಾರಂಟೈನ್‌ನಲ್ಲಿದ್ದರು. ಹೀಗಾಗಿ  ಹೆಚ್ಚಿನ ಆತಂಕ ಪಡುವ ಅಗತ್ಯ ಇಲ್ಲ. ಎನ್‌.ಆರ್‌.ಮೊಹಲ್ಲಾದ ಕೆಸರೆಯ ಕೆಇಬಿ ವಸತಿಗೃಹ, ಪಿರಿಯಾಪಟ್ಟಣದ ಜ್ಯೋತಿನಗರದಲ್ಲಿ 2, ವಿಶ್ವೇಶ್ವರನಗರ ತಪೋವನ ಅಪಾರ್ಟ್‌ಮೆಂಟ್‌ನಲ್ಲಿ 6, ಯಾದವಗಿರಿ 1ನೇ ಮುಖ್ಯ ರಸ್ತೆ,  ಕ್ರಿಶ್ಚಿಯನ್‌ ಕಾಲನಿ ಎರಡನೇ ಹಂತ, ರಜನಿ ನಗರ್‌, ಕುವೆಂಪುನಗರ 1ನೇ ಕ್ರಾಸ್‌, ರಾಜೀವ್‌ನಗರದ ಎಂಎಂಸಿ ಪದವಿಪೂರ್ವ ಪುರುಷರ ಹಾಸ್ಟೆಲ್‌ನಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಕೋವಿಡ್‌ ಆಸ್ಪತ್ರೆಗೆ ದಾಖಲು: ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ 3, ಚಾಮಲಾಪುರದಹುಂಡಿಯಲ್ಲಿ 5, ದೇವರಸನಹಳ್ಳಿ 1, ದೇವಿನಕೇರಿ ಗ್ರಾಮದಲ್ಲಿ 1 ಹುಣಸೂರಿನ ದಳಲಕೊಪ್ಪಲು, ಕೆ.ಆರ್‌.ನಗರದ ಸಾಲಿಗ್ರಾಮ ಮತ್ತು  ವಾಸು ಲೇಔಟ್‌ ಹಾಗೂ ಮೈಸೂರಿನ ರಾಮಕೃಷ್ಣನಗರದಲ್ಲಿ ತಲಾ ಒಂದು ಪಾಸಿಟಿವ್‌ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದಿಂದ ವಾಪಸ್ಸಾಗಿದ್ದ ಹೆಬ್ಟಾಳದ ಬಸವನಗುಡಿಯ ವ್ಯಕ್ತಿಗೂ ಸೋಂಕು ತಗುಲಿದೆ. ಸೋಂಕಿತರೆಲ್ಲರನ್ನೂ  ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ 12622 ಮಂದಿಯನ್ನು ಕ್ವಾರಂಟೈನ್‌ ಮಾಡಿದ್ದು, 9603 ಮಂದಿ ಕ್ವಾರಂಟೈನ್‌ ಅವಧಿ ಮುಗಿಸಿದ್ದಾರೆ. 2772 ಮಂದಿ 14 ದಿನಗಳ ಕ್ವಾರಂಟೈನ್‌ ನಲ್ಲಿದ್ದರೆ, 120  ಮಂದಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿದ್ದಾರೆ. 127 ಸಕ್ರಿಯ ಪ್ರಕರಣಗಳಲ್ಲಿ 126 ಸೋಂಕಿತರು ಕೋವಿಡ್‌ ಆಸ್ಪತ್ರೆಯಲ್ಲಿ, ಓರ್ವ ಸೋಂಕಿತ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 20531 ಸ್ಯಾಂಪಲ್‌ ಗಳನ್ನು ಪರೀಕ್ಷೆ  ಮಾಡಿದ್ದು, 20210 ನೆಗೆಟಿವ್‌ ಬಂದಿದೆ. 321 ಪಾಸಿಟೀವ್‌ ಆಗಿದ್ದು, 191 ಮಂದಿ ಗುಣಮುಖರಾಗಿದ್ದಾರೆ. ಮೂವರು ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next