Advertisement

ಮೈಸೂರು :ಆಕರ್ಷಕ ಕಲಾಕೃತಿಗಳನ್ನು ಒಳಗೊಂಡ 3 ಆನೆದಂತ ವಶ

03:59 PM Dec 25, 2020 | Adarsha |

ಮೈಸೂರು: ಆನೆ ದಂತದಲ್ಲಿ ಕಲಾಕೃತಿ ಕೆತ್ತನೆ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ.

Advertisement

ನಾಯ್ಡು ನಗರದ ನಿವಾಸಿಗಳಾದ ಮನೋಹರ್ (40), ಸುಮಂತ್ (26) ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಶಿವದಾಸ್ (55) ಬಂಧಿತರು. ಆರೋಪಿಗಳಿಂದ ಕಲಾಕೃತಿಗಳನ್ನು ಒಳಗೊಂಡಿರುವ ಎರಡು ಬೃಹತ್ ಹಾಗೂ ಒಂದು ಸಣ್ಣ ಆನೆ ದಂತ ಮತ್ತು ಕೃತ್ಯಕ್ಕೆ ಬಳಕೆ ಮಾಡಿದ ಆಲ್ಟೋ ಕಾರ್, ಬೈಕ್‌  ವಶಕ್ಕೆ ಪಡೆಯಲಾಗಿದೆ. ವಿಗ್ರಹ ರೀತಿ ಇರುವ ಕೆತ್ತನೆಯ ಆನೆ ದಂತವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ನೆನಪಿನ ಶಕ್ತಿಯ ಮೂಲಕ ದಾಖಲೆ ಬರೆದ ತಾನೀಶ್‌

ಎರಡು ಬೃಹತ್ ದಂತಗಳಲ್ಲಿ ವಿವಿಧ ವಿಗ್ರಹ ರೀತಿ ಆಕರ್ಷಕ ಕಲಾಕೃತಿಗಳನ್ನು ಕೆತ್ತಲಾಗಿದ್ದು, ಮತ್ತೊಂದು ಸಣ್ಣ ದಂತದಲ್ಲಿ ಕೊಳಲು ನುಡಿಸುತ್ತಿರುವ ಕೃಷ್ಣನ ಕಲಾಕೃತಿಯನ್ನು ಕೆತ್ತನೆ ಮಾಡಲಾಗಿದೆ. ಎರಡೂ ದಂತಗಳು ಒಂದೂವರೆ ಅಡಿ ಎತ್ತರವಾಗಿದ್ದು, ಮತ್ತೊಂದು ದಂತ ಒಂದು ಅಡಿ ಎತ್ತರವಿದೆ. ದಂತದ ಕೆತ್ತನೆ ಅತ್ಯಂತ ಆಕರ್ಷಕವಾಗಿದೆ. ನುರಿತ ಕಲಾವಿದರೆ ಈ ಕೆತ್ತನೆಯನ್ನು ಮಾಡಿದ್ದಾರೆ ಎಂಬ ಖಚಿತ ಮಾಹಿತಿಯಿದ್ದು, ಕಲಾವಿದರ ಶೋಧಕ್ಕೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಲೆ ಬೀಸಿದ್ದಾರೆ. ಇದು ಅತ್ಯಂತ ಹಳೆಯದಾದ ಆನೆ ದಂತವಾಗಿದ್ದು, ಹಲವಾರು ವರ್ಷಗಳಿಂದ ಮನೆಯಲ್ಲಿಯೇ ಇತ್ತು ಎಂದು ಆರೋಪಿಗಳು ಪ್ರಾಥಮಿಕ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

Advertisement

ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್‌ಎಫ್ ಎಸ್.ವಿವೇಕ್, ಡಿಆರ್‌ಎಫ್‌ಒ ಗಳಾದ ಸುಂದರ್, ಪ್ರಮೋದ್, ಲಕ್ಷ್ಮೀಶ್, ಸ್ನೇಹ, ಮೇಘನ, ನಾಗರಾಜ್, ಸಿಬ್ಬಂದಿ ಚೆನ್ನಬಸಪ್ಪ, ಮಹಂತೇಶ್, ಶರಣಪ್ಪ, ಗೋವಿಂದು, ವಿರೂಪಾಕ್ಷ, ರವಿಕುಮಾರ್, ರವಿನಂದನ್ ಚಾಲಕರಾದ ಪುಟ್ಟಸ್ವಾಮಿ, ಮಧು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next