Advertisement
ಜೆಡಿಎಸ್ ಶಾಸಕರಾದ ಜಿ.ಟಿ.ದೇವೇ ಗೌಡ, ಸಾ.ರಾ.ಮಹೇಶ್ ಬಣದ ನಡುವೆಜಿದ್ದಾಜಿದ್ದಿಯ ಹೋರಾಟಕ್ಕೆ ಸಾಕ್ಷಿಯಾಗಿದ್ದ ಚುನಾವಣೆಯಲ್ಲಿ ತಮ್ಮ ಬಣದಲ್ಲಿ ಗುರು ತಿಸಿ ಕೊಂಡಿದ್ದವರಲ್ಲಿ 12 ಮಂದಿಗೆಲ್ಲಿಸಿಕೊಳ್ಳುವ ಮೂಲಕ ಮಾಜಿ ಸಿಎಂಕುಮಾರಸ್ವಾಮಿಗೆ ತಮ್ಮ ಸಾಮರ್ಥ್ಯವನ್ನುತೋರಿಸುವ ಮೂಲಕ ಭಾರೀ ಮುಖಭಂಗಕ್ಕೀಡಾಗುವಂತೆ ಮಾಡಿದ್ದಾರೆ.
Related Articles
Advertisement
ಸಿದ್ದು ರಿವೇಂಜ್ ಫಲಿಸಿತಾ? :
ಕಾಂಗ್ರೆಸ್‌ನ ಒಂದು ಬಣದ ಸಹಕಾರದೊಂದಿಗೆ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಮೇಯರ್ ಗದ್ದುಗೆ ಹಿಡಿಯುವ ಮೂಲಕ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿಗೆ ಟಕ್ಕರ್ ನೀಡಿದ್ದ ಕುಮಾರಸ್ವಾಮಿ, ಮೈಮುಲ್ ನಿರ್ದೇಶಕರಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೈಮುಲ್‌ನಲ್ಲಿ ಜಿಟಿಡಿ ಶಕ್ತಿ ಕುಂದಿಸಲು ಸರ್ವಪ್ರಯತ್ನಮಾಡಿದ್ದರು. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮ ಯ್ಯ ಜೆಡಿಎಸ್ ಜೊತೆ ಕಾಂಗ್ರೆಸ್ ಯಾವುದೇ ಮೈತ್ರಿ ಇಲ್ಲ ಎಂದುಹೇಳಿಕೆ ನೀಡಿದ್ದರು. ಅಲ್ಲದೇ ಪರೋಕ್ಷವಾಗಿ ಜಿಟಿಡಿ ಬಣಕ್ಕೆ ಬಂಬಲ ನೀಡುವ ಮೂಲಕ ಪಾಲಿಕೆ ಮೇಯ ರ್ ಚುನಾವಣೆಯಲ್ಲಿ ತಮ್ಮನ್ನು ಅವಮಾನಿಸಿದ್ದ ಎಚ್‌ಡಿಕೆಗೆ ಪ್ರತಿಯಾಗಿ ಅವರದೇ ಪಕ್ಷದ ಶಾಸಕನಿಂದ ಮುಖಭಂಗಕ್ಕೀಡಾಗುವಂತೆ ಮಾಡಿರಿವೆಂಜ್ ತೀರಿಸಿಕೊಂಡಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿಕೇಳಿಬರುತ್ತಿದೆ. ಒಟ್ಟಾರೆ ತಮ್ಮದೇ ಪಕ್ಷದ ಇಬ್ಬರು ಶಾಸಕರ ವಿರುದ್ಧ ಚುನಾವಣಾಅಖಾಡಕ್ಕಿಳಿದು ಸಾರಾ ಮಹೇಶ್‌ರನ್ನು ಜಿಲ್ಲೆಯಲ್ಲಿ ಪ್ರಬಲರನ್ನಾಗಿ ಮಾಡಲು ಹೊರಟಿದ್ದ ಎಚ್‌ಡಿಕೆಗೆ ಅವರದ್ದೇ ದಾಟಿಯಲ್ಲಿ ಜಿಟಿಡಿ ಪ್ರತ್ಯುತ್ತರ ನೀಡಿ ಜಿಲ್ಲೆಯಲ್ಲಿ ತಮಗಿರುವ ವರ್ಚಸ್ಸನ್ನು ಸಾಬೀತುಪಡಿಸಿದ್ದಾರೆ.
ಒಳಜಗಳ ಬೀದಿಗೆ :
ಜಿಲ್ಲೆಯಲ್ಲಿ ಕಳೆದೆರೆಡು ವರ್ಷಗಳಿಂದ ಜಿಟಿಡಿ-ಸಾರಾ ನಡುವೆ ನಡೆಯುತ್ತಿದ್ದಮುಸುಕಿನ ಗುದ್ದಾಟ ಮೈಮುಲ್‌ಚುನಾವಣೆ ಮೂಲಕ ಬೀದಿಗೆ ಬಂದಿದೆ.ಎಚ್‌ಡಿಕೆ ಆಪ್ತ ಬಣದಲ್ಲಿಗುರುತಿಸಿಕೊಂಡಿದ್ದ ಸಾರಾ, ಜಿಲ್ಲೆಯಲ್ಲಿಪಕ್ಷದ ನಿಯಂತ್ರಣವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲುಮುಂದಾಗಿದ್ದರು. ಇದಕ್ಕಾಗಿ ಜಿಟಿಡಿಯನ್ನುಕಡೆಗಣಿಸಿ, ಸಭೆ, ಸಮಾರಂಭನಡೆಸಿದ್ದರು. ಇದಕ್ಕೆ ಎಚ್‌ಡಿಕೆಬೆಂಬಲವೂ ಇದ್ದ ಕಾರಣ ಜಿಟಿಡಿ ಪಕ್ಷದಎಲ್ಲ ಚಟುವಟಿಕೆಗಳಿಂದ ದೂರಉಳಿದಿದ್ದರು. ಈ ಮಧ್ಯೆ ಮೈಮುಲ್ ಚುನಾವಣೆಗೆ ಪಿರಿಯಾಪಟ್ಟಣ ಶಾಸಕಕೆ. ಮಹದೇವ್ ತಮ್ಮ ಪುತ್ರರನ್ನುಕಣಕ್ಕಿಳಿಸಿದ್ದರು. ತಮ್ಮ ಶಾಸಕನ ಪುತ್ರನಿಗೆಬೆಂಬಲ ನೀಡದೆ ಕಾಂಗ್ರೆಸ್ ಬೆಂಬಲಿತಅಭ್ಯರ್ಥಿಗೆ ಎಚ್‌ಡಿಕೆ ಮತ್ತು ಸಾರಾಬೆಂಬಲ ನೀಡಿದ್ದರು. ಈ ನಡೆಯಿಂದಮಹದೇವ್ ಅಸಮಾಧಾನಗೊಂಡು ಜಿಟಿಡಿ ಬಣದಲ್ಲಿಗುರುತಿಸಿಕೊಂಡಿದ್ದಾರೆ. ಒಟ್ಟಾರೆಮೈಮುಲ್ ಚುನಾವಣೆಯಿಂದ ಜಿಲ್ಲೆಯಲ್ಲಿ ಜೆಡಿಎಸ್ ಒಡೆದ ಮನೆಯಂತಾಗಿದೆ.