ಜೈಪುರ: ಸಮಾಜಸೇವೆಗೆ, ಸುಧಾರಣೆಗೆ, ಧಾನ-ಧರ್ಮಕ್ಕೆ ಪತಿ ನಾರಾಯಣ ಮೂರ್ತಿ ಅವರ ಇನ್ಫೋಸಿಸ್ ಸಂಸ್ಥೆ ಸಾಕಷ್ಟು ಬಲ ನೀಡಿದೆ. ಆದರೆ, ಬರವಣಿಗೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತಾವೇ ಹಕ್ಕುದಾರಳು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಹೇಳಿದ್ದಾರೆ.
ಜೈಪುರ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೂರ್ತಿ ಅವರ ಸಹಾಯದಿಂದಲೇ ಜನಸಾಮಾನ್ಯರಿಗೆ ಸಹಾಯ ಹಸ್ತ ಚಾಚಲು ಸಾಧ್ಯವಾಗಿದೆ. ಇನ್ಫೋಸಿಸ್ ಹಾಗೂ ಸಂಸ್ಥೆಯ ಆಸ್ತಿ ನಾನು ಮಾಡುತ್ತಿರುವ ಕಾರ್ಯಗಳಿಗೆ ಉತ್ತೇಜನ ನೀಡಿ, ಜನರೊಂದಿಗೆ ನನ್ನನ್ನು ಬೆಸೆಯುತ್ತಿದೆ. ಆದರೆ, ಸಾಹಿತ್ಯ ನನ್ನನ್ನು ಈ ವೇದಿಕೆಯಲ್ಲಿ ನಿಲ್ಲುವಂತೆ ಮಾಡಿದೆ ಎಂದರು.
“ಒಬ್ಬ ಶಿಕ್ಷಕಿಯಾಗಿ 45 ನಿಮಿಷ ನನಗೆ ತರಗತಿಯಲ್ಲಿ ಇರುವವರನ್ನು ಹಿಡಿದಿಟ್ಟುಕೊಳ್ಳುವುದು ನನಗೆ ಗೊತ್ತು. ಆ ಅನುಭವ, ಕಥೆ ಹೆಣೆಯುವ ಶೈಲಿ ಇಂದಿಗೆ ನನ್ನನ್ನು ಸಾಹಿತ್ಯ ಕರ್ಮಿಯನ್ನಾಗಿಸಿ, ಓದುಗರನ್ನು ಸೃಷ್ಟಿಸಿಕೊಟ್ಟಿದೆ. ಸಾಹಿತ್ಯ ನನ್ನ ಸ್ವಂತದ್ದು’ ಎಂದರು.