Advertisement
ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಕುಂಬ್ಳೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಗಾಯಾಳಾಗಿಯೇ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಅವರಂತಹವರಿಗೆ ಸವಾಲು ಹಾಕಲು ನಿರ್ಧರಿಸಿದ ಕ್ಷಣಗಳನ್ನು ಭಾರತದ ಸ್ಪಿನ್ ದಿಗ್ಗಜ ನೆನಪಿಸಿಕೊಂಡರು. 4 ರನ್ ಗಳಿಸಿದ್ದ ಲಾರಾ ಅವರನ್ನು ಕುಂಬ್ಳೆ ಎಲ್ ಬಿಡಬ್ಲ್ಯೂ ಮೂಲಕ ಔಟ್ ಮಾಡಿದ್ದರು. ಅದು ಪಂದ್ಯದಲ್ಲಿ ಅವರು ಪಡೆದ ಏಕೈಕ ವಿಕೆಟ್ ಆಗಿತ್ತು.
Related Articles
Advertisement
ಶಸ್ತ್ರಚಿಕಿತ್ಸೆಗಾಗಿ ಮರುದಿನ ಬೆಂಗಳೂರಿಗೆ ಹಿಂತಿರುಗಬೇಕಿತ್ತು, ಆ ಸಮಯದಲ್ಲಿ ನಾನು ಕನಿಷ್ಠ ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ ಎಂಬ ಆಲೋಚನೆಯೊಂದಿಗೆ ಮನೆಗೆ ಹೋಗಬಹುದು ಎಂದು ಹೇಳಿದ್ದೆ ಅಂದರು.
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕುಂಬ್ಳೆ ಅವರು ಮರ್ವಿನ್ ದಿಲ್ಲನ್ ಶಾರ್ಟ್ ಬಾಲ್ ಗೆ ಗೊಂಡು ರಕ್ತವನ್ನು ಉಗುಳಿದರು ಆದರೆ ಎರಡು ದಶಕಗಳ ಹಿಂದೆ ಆ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಇನ್ನೂ 20 ನಿಮಿಷಗಳ ಕಾಲ ಬ್ಯಾಟ್ ಮಾಡಿದ್ದರು.
ಸ್ಮರಣೀಯ ವೃತ್ತಿಜೀವನದಲ್ಲಿ ಅವರು ಬೌಲಿಂಗ್ ಮಾಡಿದ ಕಠಿಣ ಬ್ಯಾಟ್ಸ್ ಮ್ಯಾನ್ ಗಳ ಬಗ್ಗೆ ಕೇಳಿದಾಗ, ಅವರು ಲಾರಾ, ಸಯೀದ್ ಅನ್ವರ್, ಕಾಲಿಸ್ ಮತ್ತು ಅರವಿಂದ ಡಿ ಸಿಲ್ವಾ ಅವರ ಹೆಸರು ಹೇಳಿದರು.
ಕುಂಬ್ಳೆ ಗಾಯಾಳಾಗಿ ಆಡಿದ ಪಂದ್ಯದಲ್ಲಿ ಭಾರತ 513/9 ಡಿಕ್ಲೆರ್ ಮಾಡಿಕೊಂಡಿತ್ತು, ವೆಸ್ಟ್ ಇಂಡೀಸ್ 629/9 ಡಿಕ್ಲೆರ್ ಮಾಡಿಕೊಂಡಿತ್ತು. ಪಂದ್ಯ ಡ್ರಾ ಆಗಿತ್ತು.
ಜುಲೈ 12 ರಿಂದ ಪ್ರಾರಂಭವಾಗುವ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪೈಪೋಟಿ ನಡೆಸಲಿದ್ದು, ಎರಡು ತಂಡಗಳು ಕೆಂಪು-ಚೆಂಡಿನ ಕ್ರಿಕೆಟ್‌ನಲ್ಲಿ ಎರಡು ಪಂದ್ಯಗಳ ಸರಣಿ ಆಡಲಿವೆ.