“ಅಭಿವ್ಯಕ್ತ’ ತಂಡದಿಂದ, “ನನ್ನ ಕಥೆ’ ಎಂಬ ಏಕವ್ಯಕ್ತಿ, ಏಕಾಂಕ ನಾಟಕ ಪ್ರದರ್ಶನಗೊಳ್ಳುತ್ತಿದೆ. ಎಪ್ಪತ್ತು ನಿಮಿಷಗಳ ಈ ನಾಟಕದಲ್ಲಿ ವರ್ಷಿಣಿ ಭಾರದ್ವಾಜ್ ಅವರು ಒಟ್ಟು ಎಂಟು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದು ಗರ್ಭದಲ್ಲಿ ಇರುವ ಮಗುವೊಂದು ಹುಟ್ಟಿ, ಬೆಳೆದು, ಗರ್ಭವತಿ ಆಗುವವರೆಗೂ ನಡೆಯುವ ಒಬ್ಬ ನಾರಿಯ ಪಯಣದ ಕಥೆ. ಜೀವನದ ವಿವಿಧ ಹಂತಗಳಲ್ಲಿ ವಿವಿಧ ಪ್ರಶ್ನೆಗಳಿಗೆ ಒಳಗಾಗಿ, ಉತ್ತರ ನೀಡ ಬಯಸದ ಪ್ರಶ್ನೆಗಳಿಗೆ ಉತ್ತರ ನೀಡಲು ಬದ್ಧವಾಗುವ ಕಥೆಯೇ ನನ್ನ ಕಥೆ. ನಾಟಕದ ರಚನೆ ಮತ್ತು ನಿರ್ದೇಶನ ಗುರುಪ್ರಸಾದ್ ಟಿ.ಎಸ್. ಅವರದ್ದು.
ಎಲ್ಲಿ?: ಪ್ರಭಾತ್ ಕಲಾಪೂರ್ಣಿಮ, ಎನ್.ಆರ್.ಕಾಲೊನಿ
ಯಾವಾಗ?: ಏ.7, ಭಾನುವಾರ ಸಂಜೆ 4.30 ಮತ್ತು 7.30
ಪ್ರವೇಶ ದರ: 100 ರೂ.