ಕಲಬುರಗಿ: ಅಖೀಲ ಭಾರತ ಅಂಚೆ ನೌಕರರ ಸಂಘದ ಅಧ್ಯಕ್ಷ ಡಿ.ಜಿ. ಹೊನಗುಂಟಿ ನೇತೃತ್ವದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಭಾವಚಿತ್ರವಿರುವ ಮೈಸ್ಟಾಂಪ್ ನ್ನು ಪೀಠಾಧಿಪತಿಗಳಿಗೆ ಅಖೀಲ ಭಾರತ ಅಂಚೆ ನೌಕರರ ಸಂಘದ ಸದಸ್ಯರು ಅರ್ಪಿಸಿದರು.
ನಗರದ ಶರಣಬಸವೇಶ್ವರ ಮಹಾದಾಸೋಹ ಮಹಾಮನೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಹಾಗೂ ಮಾತೋಶ್ರೀ ಡಾ| ದಾಕ್ಷಾಯಿಣಿ ಅವ್ವಾ ಅವರಿಗೆ ಸಮರ್ಪಿಸಿದರು.
ನೌಕರರ ಸಂಘದ ಸಹಾಯಕ ಕಾರ್ಯದರ್ಶಿ ರಾಘವೇಂದ್ರ ರೆಡ್ಡಿ ಮಾತನಾಡಿ, ಚಿರಂಜೀವಿ ದೊಡ್ಡಪ್ಪ ಅಪ್ಪ ಮತ್ತು ಮೈಸೂರು ಅರಮನೆ ಭಾವಚಿತ್ರವಿರುವ ಮೈಸ್ಟಾಂಪ್ ಬಿಡುಗಡೆ ಮತ್ತು ಪ್ರಸ್ತುತಪಡಿಸುವ ಕ್ರಮವನ್ನು ನೌಕರರು ಶ್ಲಾಘನೆಯ ಸಂಕೇತವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಶರಣಬಸವೇಶ್ವರ ಸಂಸ್ಥಾನ ಮತ್ತು ಪೂಜ್ಯ ಡಾ|ಶರಣಬಸವಪ್ಪ ಅಪ್ಪ ಅವರು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆ ಗುರುತಿಸಿ ಮತ್ತು ಹಿಂದುಳಿದ ಪ್ರದೇಶದ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಹಾಯ ಮಾಡಿದ್ದಾರೆ ಎಂದು ಶ್ಲಾಘಿ ಸಿದರು.
ಪೂಜ್ಯ ಡಾ| ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ|ದಾಕ್ಷಾಯಿಣಿ ಅವ್ವಾ ಅವರು ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಮೈ ಸ್ಟಾಂಪ್ ಹೊರತರುತ್ತಿರುವ ನೌಕರರ ಸಂಘದ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ| ಉಮಾ ಬಸವರಾಜ ದೇಶಮುಖ, ಅಂಚೆ ನೌಕರರ ಸಂಘದ ಮುಖಂಡ ಬಿ. ಈಶ್ವರಪ್ಪ, ಕಾರ್ಯದರ್ಶಿ ಭೀಮಶಾ ಉಡಗಿ, ಚಂದ್ರಕಾಂತ ಹೆಡೆ, ಮೆಹಬೂಬ ಸಾಬ್, ಅನಿಲಕುಮಾರ, ಬಸವರಾಜ ಗೌತಮ, ಐ.ಡಿ.ಪಾಟೀಲ, ಶಿವಾಜಿ ಮೋರೆ, ರಾಮಪ್ಪ, ಲಕ್ಷ್ಮೀಕಾಂತ ಕುಲಕರ್ಣಿ, ಮಂಜುನಾಥ ಗೋಧಿಗೌಡರ್, ವಿನಾಯಕ ಮುಂತಾದವರಿದ್ದರು.