ಎಂದು ಆಕ್ಷೇಪಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚುನಾವಣೆ ಬಳಿಕ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದು. ಆದರೆ ಚುನಾವಣೆ ಮಾತ್ರ ತಮ್ಮ ನಾಯಕತ್ವದಲ್ಲೇ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು. “ಮುಂದಿನ ವರ್ಷದ ಮೈಸೂರು ದಸರಾ ನಮ್ಮ ಸರ್ಕಾರದಿಂದಲೇ ನಡೆಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇದನ್ನು ಸಾಧಿಸಿ ತೋರಿಸುತ್ತೇವೆ’ ಎಂದರು. ದೇಶದಲ್ಲಿ ಬೆಂಕಿ ಹಚ್ಚುವುದು ಆರೆಸ್ಸೆಸ್‌ಗೆ ಕರಗತವಾಗಿದೆ.
Advertisement
ನಾವು ಸಾಮರಸ್ಯ ಸೃಷ್ಟಿ ಮಾಡುತ್ತಿದ್ದೇವೆ ಎನ್ನುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರ ಬೆಂಕಿ ರಾಮಯ್ಯ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.