ಹೊಸಪೇಟೆ: “ಜಿಂದಾಲ್ ಕಾರ್ಖಾನೆಗೆ ಭೂಮಿ ಪರಭಾರೆಗೆ ನನ್ನ ವಿರೋಧವಿದ್ದು, ಪಕ್ಷಾತೀತವಾಗಿ ಹೋರಾಟ ನಡೆಸಲು ನಾನು ಸಿದ್ಧನಿದ್ದೇನೆ’ ಎಂದು ಶಾಸಕ ಆನಂದಸಿಂಗ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೋರಾಟದ ನೇತೃತ್ವ ವಹಿಸಿಕೊಳ್ಳಲು ತಾವು ಮುಂದಾಗಿರುವುದಾಗಿ ತಿಳಿಸಿದರು.
“ಜಿಂದಾಲ್‌ಗೆ ಭೂಮಿ ನೀಡಲು ಸರ್ಕಾರ ಒಪ್ಪಿಗೆ ನೀಡಿ ರಬ ಹುದು. ಆದರೆ, ಯಾವುದೇ ಕಾರ ಣಕ್ಕೂ ನಾನು ಒಪ್ಪಲ್ಲ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಬಹುದು. ಜಿಂದಾಲ್‌ರೊಂದಿಗೆ ಮಾತನಾಡಲು ಸಾಧ್ಯವಿಲ್ಲ. ಜಿಂದಾಲ್‌ನ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆ ಸಿ, ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಲಾಗುವುದು’ ಎಂದರು.
ಜಿಂದಾಲ್ ಸಂಸ್ಥೆ ಜತೆ ಅಧಿಕಾರಿಗಳು ಶಾಮೀಲಾಗಿದ್ದು, ಅರಣ್ಯ, ಸೆಕ್ರೆಟರಿ ಅಧಿಕಾರಿಗಳು ನಿವೃತ್ತಿ ನಂತರ ಜಿಂದಾಲ್‌ಗೆ ಸೇರಿಕೊಳ್ಳುತ್ತಾರೆ. ಇವರೆಲ್ಲ ಸರ್ಕಾರದ ಪ್ರಸ್ತಾವನೆಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ. ತುಂಗ ಭದ್ರಾ ಜಲಾಶಯದಲ್ಲಿ ನೀರಿಲ್ಲದಿದ್ದರೂ, ಸುತ್ತಮುತ್ತಲ ಕಾರ್ಖಾನೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಸ್ಟ್ ಇಂಡಿಯಾ ಕಂಪನಿಯಂತೆ ಜಿಂದಾಲ್ ಸಂಸ್ಥೆ ಜಿಲ್ಲೆಯಲ್ಲಿ ದೌರ್ಜನ್ಯ ನಡೆಸುತ್ತಿದೆ. ಜಿಂದಾಲ್ ಹೆಸರೇಳಿಕೊಂಡು ಅಮಾಯಕ ರೈತರು, ಗ್ರಾಮಸ್ಥರ ವಿರುದ್ಧ ದಬ್ಟಾಳಿಕೆ ನಡೆಸಲಾಗುತ್ತಿದೆ. ಬೇಕಿದ್ದರೆ ಕಾರ್ಖಾನೆಗೆ ಭೂಮಿಯನ್ನು ಲೀಸ್‌ಗೆ ಕೊಡಿ. ಆದರೆ, ಭೂಮಿ ಮಾರಾಟ ಮಾಡಬೇಡಿ ಎಂದು ಒತ್ತಾಯಿಸಿದರು.