Advertisement

ಜನವರಿ 31 ಕ್ಕೆ ಮೈ ನೇಮ್‌ ಈಸ್‌ ರಾಜಾ

10:04 AM Jan 04, 2020 | mahesh |

ಕನ್ನಡದಲ್ಲಿ “ಮೈ ನೇಮ್‌ ಈಸ್‌ ರಾಜಾ’ ಚಿತ್ರ ಬರುತ್ತಿರುವುದು ಗೊತ್ತೇ ಇದೆ. ಆ ಚಿತ್ರ ಇದೀಗ ಬಿಡುಗಡೆಗೂ ಸಜ್ಜಾಗಿದ್ದು, ಜನವರಿ 31 ರಂದು ರಾಜ್ಯಾದ್ಯಂತ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರ ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಕೊಟ್ಟಿದೆ. ಕಾರಣ, ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳು ಸೇರಿದಂತೆ ಲಿಪ್‌ಲಾಕ್‌ ಸನ್ನಿವೇಶ­ಗಳಿರು­ವುದರಿಂದ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಪಡೆದಿದೆ. ಚಿತ್ರತಂಡ ಕೂಡ ಕಥೆಗೆ ಪೂರಕವಾಗಿರುವಂತಹ ಸನ್ನಿವೇಶಗಳನ್ನೇ ಇಡಲಾಗಿದೆ ಎಂಬ ಸ್ಪಷ್ಟನೆ ಬಳಿಕವೂ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಸಿಕ್ಕಿದ್ದು, ಚಿತ್ರ ಬಿಡುಗಡೆಗೆ ತಯಾರು ಮಾಡಿಕೊಳ್ಳುತ್ತಿದೆ ಚಿತ್ರತಂಡ.

Advertisement

ಅಂದಹಾಗೆ, ಈ ಹಿಂದೆ “ಸಂಚಾರಿ’ ಹಾಗು “ಜಟಾಯು’ ಚಿತ್ರಗಳನ್ನು ಕೊಟ್ಟಿದ್ದ ರಾಜ್‌ ಸೂರ್ಯನ್‌ ಅವರಿಗೆ ಇದು ಮೂರನೇ ಸಿನಿಮಾ. ಚಿತ್ರದ ಬಗ್ಗೆ ಹೇಳುವ ರಾಜ್‌ ಸೂರ್ಯನ್‌, ಇದು ಭಿನ್ನವಾದ ಕಥೆ ಹೊಂದಿರುವ ಸಿನಿಮಾ. ರೊಮ್ಯಾಂಟಿಕ್‌ ಕಥೆ ಹೊಂದಿದ್ದರಿಂದ ಆ ಅಂಶಗಳೊಂದಿಗೆ ಲಿಪ್‌ಲಾಕ್‌ ದೃಶ್ಯಗಳೂ ಇವೆ. ಇವೆಲ್ಲವೂ ಕಥೆಗೆ ಪೂರಕವಾಗಿವೆ ಹೊರತು ವಿನಾಕಾರಣ ಇಲ್ಲ. ಸೆನ್ಸಾರ್‌ ಮಂಡಳಿ ಚಿತ್ರ ನೋಡಿ, “ಎ’ಪ್ರಮಾಣ ಪತ್ರ ನೀಡಿದೆ. ಒಂದು ಕಮರ್ಷಿಯಲ್‌ ಚಿತ್ರ ಇದಾಗಿದ್ದು, ಮನರಂಜನೆಗೆ ಹೆಚ್ಚು ಒತ್ತು ಕೊಡಲಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್‌ ಮಾಡಲು ತಯಾರು ಮಾಡಿಕೊಳ್ಳಲಾಗುತ್ತಿದೆ. ತೆಲುಗಿನಲ್ಲಿ “ನಾ ಪೇರು ರಾಜಾ’ ಎಂಬ ಹೆಸರಿನೊಂದಿಗೆ ರಿಲೀಸ್‌ ಆಗುತ್ತಿದೆ. ಕಥೆ ಬಗ್ಗೆ ಹೇಳುವುದಾದರೆ, ನಾಯಕನಿಗೆ ಇಲ್ಲಿ ಮೂರು ಶೇಡ್‌ ಇರಲಿದೆ. ಒಂದೊಂದು ಹಂತದಲ್ಲಿ ಒಂದೊಂದು ಫ್ಲ್ಯಾಶ್‌ಬ್ಯಾಕ್‌ ಇದೆ. ಎರಡು ಫ್ಲ್ಯಾಶ್‌ಬ್ಯಾಕ್‌ ಬಳಿಕ ವಾಸ್ತವ ಚಿತ್ರಣ ಬರಲಿದೆ. ಇಲ್ಲಿ ಕ್ಲೈಮ್ಯಾಕ್ಸ್‌ ಹೈಲೈಟ್‌ ಆಗಿದ್ದು, ಚಿತ್ರದುದ್ದಕ್ಕೂ ಸಾಕಷ್ಟು ತಿರುವುಗಳಿವೆ. ಸಿನಿಮಾ ಮುಗಿಯುವ ಹಂತಕ್ಕೆ ಬಂದಾಗಲಷ್ಟೇ ಸಿನಿಮಾದ ಕಥೆ ಅರ್ಥವಾಗುತ್ತದೆ’ ಎಂದು ವಿವರ ಕೊಡುತ್ತಾರೆ ರಾಜ್‌ ಸೂರ್ಯನ್‌.

Advertisement

Udayavani is now on Telegram. Click here to join our channel and stay updated with the latest news.

Next