Advertisement

ರಾಹುಲ್‌ ‘ನಮೋ’ಕಿಡಿ

09:50 AM Mar 26, 2018 | Karthik A |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ‘ನಮೋ’ ಎಂಬ ಅಧಿಕೃತ ಮೊಬೈಲ್‌ ಆ್ಯಪ್‌ನಲ್ಲಿ ಸದಸ್ಯರಾಗಿರುವ ಎಲ್ಲರ ಮಾಹಿತಿಯನ್ನು ಖುದ್ದು ನರೇಂದ್ರ ಮೋದಿಯವರೇ ವಿವಿಧ ಕಂಪೆನಿಗಳಿಗೆ ಸರಬರಾಜು ಮಾಡುತ್ತಿದ್ದಾರೆಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಬಿಜೆಪಿಯೂ ಇದಕ್ಕೆ ತಿರುಗೇಟು ನೀಡಿದೆ. 

Advertisement

ಮಾಧ್ಯಮವೊಂದರಲ್ಲಿ ನಮೋ ಆ್ಯಪ್‌ ಸದಸ್ಯರ ಮಾಹಿತಿ ಸೋರಿಕೆಯಾಗಿದೆ ಎಂಬ ವರದಿ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ರಾಹುಲ್‌, “ಹಾಯ್‌, ನಾನು ನರೇಂದ್ರ ಮೋದಿ. ಭಾರತದ ಪ್ರಧಾನಿ. ನನ್ನ ಅಧಿಕೃತ ಆ್ಯಪ್‌ನೊಂದಿಗೆ ನೀವು ನೋಂದಣಿ ಮಾಡಿಕೊಂಡರೆ ನಾನು ನಿಮ್ಮ ಮಾಹಿತಿಯನ್ನು ಅಮೆರಿಕದಲ್ಲಿರುವ ನನ್ನ ಸ್ನೇಹಿತರ ಕಂಪೆನಿಗಳಿಗೆ ಕೊಡುತ್ತೇನೆ” ಎಂದಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ, ರಾಹುಲ್‌ ಗಾಂಧಿಗೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ತಂತ್ರಜ್ಞಾನದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next