Advertisement

“ಗೌರಿ’ಹೆಸರಿನವಳಾದ ನಾನು…

06:00 AM Sep 12, 2018 | |

ಹಿಂದಿನಿಂದಲೂ ಅನೇಕರು ತಮಗೆ ಹೆಣ್ಣು ಮಗು ಜನಿಸಿದರೆ ಮೀನಮೇಷ ಎಣಿಸದೇ “ಗೌರಿ’ ಅಂತ ನಾಮಕರಣ ಮಾಡಿಬಿಡುತ್ತಾರೆ. ಕೊಟ್ಟಿಗೆಯಲ್ಲಿ ಕರು ಹುಟ್ಟಿದರೂ ಅದಕ್ಕೂ ಇಡುವ ಹೆಸರು ಗೌರಿ. ಈ ಹೆಸರಿನ ಹಿಂದಿನ ಗುಟ್ಟೇನು?

Advertisement

ಯಾರಾದರೂ “ಗೌರಿ’ ಎಂದು ಕರೆದಾಕ್ಷಣ ನಮ್ಮೆಲ್ಲರ ಕಂಗಳು ನಿರೀಕ್ಷಿಸುವುದು ಸೀರೆಯನ್ನೋ, ಲಂಗ ದಾವಣಿಯನ್ನೋ ಉಟ್ಟ ಹಸನ್ಮುಖೀ ಹೆಣ್ಮಗಳನ್ನು. ಗೌರಿ ಎನ್ನುವ ಹೆಸರಿನಲ್ಲೇ ಮಾತೃಛಾಯೆಯಿದೆ ಅಂತ ಅನ್ನಿಸುತ್ತದೆ. ಅದೇಕೋ ಗೌರಿ ಎಂಬ ಹೆಸರನ್ನು ಕೇಳಿದ ಕೂಡಲೇ ಹೃದಯ ಚುರುಗುಟ್ಟುತ್ತದೆ. ನಮ್ಮ ಸಿನಿಮಾಗಳಲ್ಲೇ ಇರಬಹುದು, ಧಾರಾವಾಹಿಗಳಲ್ಲೇ ಇರಬಹುದು, ಗೌರಿ ಎನ್ನುವ ಹೆಸರಿನವರು ಅಮಾಯಕತೆ, ದೈವಿಕತೆಯೇ ಮೈವೆತ್ತಂತಿರುತ್ತಾರೆ. ಆ ಪಾತ್ರಗಳು ತನಗೆ ಬಂದ ಕಷ್ಟವೆಲ್ಲವನ್ನೂ ನುಂಗಿಕೊಂಡು ಸಹಿಸಿಕೊಳ್ಳುತ್ತಿರುತ್ತವೆ. ಅವರ ಬದುಕಿನ ಕತೆಗಳು ಅಂತಿಮವಾಗಿ ಸುಖಾಂತ್ಯ ಕಾಣುತ್ತವೆ ಎನ್ನುವುದೊಂದು ಸಮಾಧಾನಕರ ಸಂಗತಿ.  

  ಗೌರಿ ಎಂದರೆ ಗೌರವರ್ಣದ ಸುಂದರಿ, ಸೌಮ್ಯವದನೆ; ಆಕೆ ಇ¨ªೆಡೆ ಸರ್ವ ಸಂಪತ್ತು, ಶಕ್ತಿ, ಫ‌ಲವತ್ತತೆ, ಸಮೃದ್ಧಿ ನೆಲೆಸಿರುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂದಲೇ ಹಿಂದಿನಿಂದಲೂ ಮನೆಗಳಲ್ಲಿ ಹೆಣ್ಣು ಮಗು ಜನಿಸಿದರೆ ಮೀನಮೇಷ ಎಣಿಸದೇ ಗೌರಿ, ಉಮಾ, ಪಾರ್ವತಿ, ಗಿರಿಜಾ, ಶಿವಕ್ಕ, ಶಂಕ್ರಮ್ಮ ಅಂತ ನಾಮಕರಣ ಮಾಡಿಬಿಡುತ್ತಾರೆ. ಹೀಗೆ ಶಕ್ತಿದೇವಿಯ ನಾಮಾಂಕಿತ ಮಕ್ಕಳು ಚೆನ್ನಾಗಿ ಬೆಳೆದು ತಮ್ಮದೇ ಪ್ರಭಾವಲಯವನ್ನು ರೂಪಿಸಿಕೊಂಡರಂತೂ ತವರು ಮನೆ ಮತ್ತು ಗಂಡನಮನೆ ಎರಡರಲ್ಲೂ ಹೇಳತೀರದ ಖುಷಿ. 

  ಹಿಮವಂತ (ಪರ್ವತರಾಜ) ಮತ್ತು ಮೈನಾದೇವಿಯರ ಮಗಳಾದ ಗೌರಿದೇವಿಯು ಗಣಪತಿಯ ತಾಯಿಯಾಗಿ, ಮಹಾಶಿವನ ವಲ್ಲಭೆಯಾಗಿ, ಜಗತ್ತಿನ ಜನಮನದ ತುಂಬಾ ಶಕ್ತಿದೇವಿಯಾಗಿ ಅಲಂಕೃತವಾದವಳು ನಮ್ಮ ಇಡೀ ಬದುಕನ್ನು ಆವರಿಸಿದ ಬಗೆಯೇ ಸೋಜಿಗ. ಆಕೆ ಸೌಮ್ಯವದನೆಯಾಗಿ, ಶಿವನ ತೊಡೆಯ ಮೇಲೆ ಕುಳಿತ ಪಾರ್ವತಿಯಾಗಿಯೂ ಕಾಣುತ್ತಾಳೆ. 

  ನಮ್ಮಲ್ಲಿ ಹಸುಗಳಿಗೂ ಗೌರಿ ಎಂದು ಹೆಸರಿಡಲಾಗುತ್ತದೆ. ಅಷ್ಟೇಅಲ್ಲದೆ, ಆಕಳುಗಳು ಯಾವುದೇ ಕಂಟಕ ಇಲ್ಲದೇ ಬದುಕುವ ಕಡೆಗಳಲ್ಲಿ ಸಮೃದ್ಧ ಮಳೆ, ಬೆಳೆ ಆಗುವುದು ಎಂಬ ನಂಬಿಕೆ ಇತ್ತು. ಹಸು ಸಾಕಿದವರ ಮು¨ªಾದ ಮಗಳೂ ಹೌದು; ಮನೆಯನ್ನು ಸಮೃದ್ಧವಾಗಿಸುವ ತಾಯಿಯೂ ಹೌದು. ವೇದಗಳ ಕಾಲದಲ್ಲಿ ಜನರ ಸಂಪತ್ತು, ಸಿರಿವಂತಿಕೆಯನ್ನು ಅವರು ಹೊಂದಿದ್ದ ಆಕಳುಗಳ ಸಂಖ್ಯೆಯ ಆಧಾರದ ಮೇಲೆ ಅಳೆಯುತ್ತಿದ್ದರು. ಹೆಚ್ಚು ಆಕಳುಗಳನ್ನು ಹೊಂದಿದವರನ್ನು ಹೆಚ್ಚು ಶ್ರೀಮಂತರೆಂದು ಪರಿಗಣಿಸಲಾಗುತ್ತಿತ್ತು. ಹಾಗೇ ಸಂಪತ್ತಿನ ರೂಪವಾದ ಗೋಮಂದೆಯಲ್ಲಿ ಒಂದಾದರೂ ಗೌರಿ ಹೆಸರಿನ ಆಕಳು ಇದ್ದೇ ಇರುತ್ತಿತ್ತು. ಗಂಗೆ ಬಾರೆ ಗೌರಿ ಬಾರೆ ತುಂಗಭದ್ರ ತಾಯಿ ಬಾರೆ.. ಎಂಬ ನುಡಿಯನ್ನೊಳಗೊಂಡ ಗೋವಿನ ಹಾಡಿನ ಮೂಲಕವೂ ಹಸುಗಳಿಗೆ ಗೌರಿ ಎಂಬ ಹೆಸರಿಡುವ ಪ್ರೀತಿ ಎಷ್ಟು ಅಗಾಧ ಎಂಬುದು ಕಂಡು ಬರುತ್ತದೆ. ಈಗಲೂ ಹಸು ಕರುಗಳಿರುವ ಮನೆಗಳಲ್ಲಿ ಗೌರಿ ಹೆಸರಿನ ಆಕಳು ಒಂದಾದರೂ ಇದ್ದೇ ಇರುತ್ತದೆ. ಅಷ್ಟರಮಟ್ಟಿಗೆ ಸಂಪತ್‌ಪ್ರದಾಯಿನಿ, ಮಂಗಳಕಾರಿಣಿ, ಶುಭದಾಯಿನಿ, ಶಕ್ತಿಪ್ರದಾಯಿನಿ ಗೌರಿದೇವಿ ಎಂಬ ಹೆಸರು ನಮ್ಮ ಬದುಕಿನೊಂದಿಗೆ ಹೆಣೆದುಕೊಂಡಿದೆ.

Advertisement

 ಸಾವಿತ್ರಿ ಹಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next