ಧಾರವಾಡ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಆಡಳಿತರೂಢ ಬಿಜೆಪಿ ಪಕ್ಷದಿಂದ ನನ್ನ ಹೆಸರು ಅಂತಿಮಗೊಂಡಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಭಾಪತಿ ಸ್ಥಾನದ ಅಭ್ಯರ್ಥಿಯಾದ ಬಗ್ಗೆ ಬಿಜೆಪಿ ಮುಖಂಡರಾದ ರವಿಕುಮಾರ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಶೀಘ್ರ ಅಧಿಕೃತ ಅಭ್ಯರ್ಥಿಯಾಗಿಯೂ ಪ್ರಕಟಣೆ ಹೊರ ಬೀಳಲಿದೆ.
ಈ ಸಿಹಿ ಸುದ್ದಿ ನೀಡಿದ ರವಿಕುಮಾರ ಅವರಿಗೆ ಧನ್ಯವಾದ ತಿಳಿಸಿದ್ದೇನೆ. ಉತ್ತರ ಕರ್ನಾಟಕದ ನಮ್ಮ ಸಮಸ್ಯೆಗಳಿಗೆ ಪ್ರತಿಫಲ ಬೇಕಷ್ಟೇ. ಹೀಗಾಗಿ ಬೆಳಗಾವಿ ಚಳಿಗಾಲ ಅ ಧಿವೇಶನ ವೇಳೆ ಧರಣಿ ನಡೆಸದಂತೆ ಈ ಹಿಂದೆಯೂ ಅನೇಕ ಸಲ ಮನವಿ ಮಾಡಿದ್ದೇನೆ.
ಹಿಂದೆ ನಾನು ಉತ್ತರ ಕರ್ನಾಟಕದ ಕುರಿತು ಚರ್ಚಿಸಲು ಎರಡು ದಿನ ಮೀಸಲಿಟ್ಟಿದ್ದೆ. ನಮ್ಮದು ಸಮಗ್ರ ಕರ್ನಾಟಕದ ನಿಲುವು. ಆದಾಗ್ಯೂ ಕೂಡ ಉತ್ತರದ ಸಮಸ್ಯೆಗಳಿಗೆ ಸರ್ಕಾರ, ಸದಸ್ಯರು ಸ್ಪಂದಿಸಲಿ. ಭಾರತ ಜಾತ್ಯತೀತ ರಾಷ್ಟ್ರ.
ಮೀಸಲಾತಿಗೆ ಹೋರಾಟ ಮಾಡುವುದು ಅವರ ಹಕ್ಕು. ಪಂಚಮಸಾಲಿ 2ಎ ಮೀಸಲಾತಿಯೂ ಇದಕ್ಕೆ ಹೊರತಾಗಿಲ್ಲ. ಮಾಡುವ ಹೋರಾಟ ಶಾಂತಿಯುತವಾಗಿ ನಡೆಯಬೇಕು ಮತ್ತು ಯಾರಿಗೂ ನೋವಾಗದಂತೆ ಇರಬೇಕು ಎಂದರು.