Advertisement
ದೇಶೀ ಸಂಸ್ಕೃತಿ ಎಂದ ಕೂಡಲೇ ನೆನಪಾಗುವುದು ಉಡುಗೆ-ತೊಡುಗೆ, ಸಂಪ್ರದಾಯ, ಆಚಾರ, ಆಚರಣೆಗಳು. ಅದರಲ್ಲೂ ನಾವು ಧರಿಸುವ ದಿರಿಸಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ. ಕಾಲಕ್ಕೆ ತಕ್ಕಂತೆ ಉಡುಗೆ-ತೊಡುಗೆಗಳು ಬದಲಾಗುತ್ತಿರುತ್ತವೆ. ಆದರೆ, ಕೆಲವೊಂದು ಉಡುಗೆಗಳು ಯಾವತ್ತೂ ಹಳೇ ಫ್ಯಾಷನ್ ಆಗುವುದೇ ಇಲ್ಲ. ಸೀರೆ, ಕುರ್ತಾ, ಸಲ್ವಾರ್ ಕಮೀಜ್‌ನಂಥ ಉಡುಪುಗಳು ಸಾಂಪ್ರದಾಯಿಕ ಉಡುಪುಗಳೆಂದು ಕರೆಸಿಕೊಂಡರೂ, ಈಗಲೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.
Related Articles
ಇತ್ತೀಚೆಗೆ, ಶಾಲಾ-ಕಾಲೇಜಿನ ಶಿಕ್ಷಕಿಯರಿಗೆ ಸಭ್ಯ ಉಡುಗೆ ತೊಡಲು ಸ್ವತಂತ್ರರು ಎಂಬ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಇದರನ್ವಯ, ಕೆಲ ಶಾಲೆಗಳಲ್ಲಿ ಸಾಂಪ್ರದಾಯಿಕ ಶೈಲಿಯ ಚೂಡಿದಾರ್ ಹಾಗೂ ಕುರ್ತಾ ಧರಿಸುವುದನ್ನು ಕಾಣಬಹುದು. ನೌಕರಸ್ಥರಿಗೆ ಇದೊಂದು ವರದಾನವೇ ಆಗಿದೆ. ಆರಾಮದಾಯಕ ಅಲ್ಲದೆ, ಆಗಾಗ ಸೆರಗು, ನೆರಿಗೆ ಸರಿಪಡಿಸುವ ಸಂಕಷ್ಟದಿಂದ ಹೆಣ್ಣುಮಕ್ಕಳು ಪಾರಾಗಿದ್ದಾರೆಂದು ಹೇಳಬಹುದು. ಒಂದೆಡೆ ಬೆಳಗ್ಗಿನ ಧಾವಂತದಲ್ಲಿ ಮಕ್ಕಳನ್ನೂ ರೆಡಿ ಮಾಡಿ, ತಾವೂ ತಯಾರಾಗಿ ಹೊರಡುವುದರೊಳಗೆ ಸಮಯ ಮೀರಿ ಹೋಗುತ್ತದೆ. ಇನ್ನು ಸೀರೆ ಉಡಲು ಕನಿಷ್ಠಪಕ್ಷ ಅರ್ಧ ಗಂಟೆಯಾದರೂ ಬೇಕು. ಆದರೆ, ಚೂಡಿದಾರ್ ಧರಿಸಲು ಸರಳ, ಸುಲಭ. ಬಹಳ ಬೇಗ ರೆಡಿಯಾಗಿ, ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಸಾಧ್ಯವೆನ್ನುತ್ತಾರೆ ಶಿಕ್ಷಕಿಯರು.
Advertisement
ಗೃಹಿಣಿಯರಿಗೂ ಅಚ್ಚುಮೆಚ್ಚುದಪ್ಪಗಿರಲಿ, ತೆಳ್ಳಗಿರಲ ಎಲ್ಲರಿಗೂ ಒಪ್ಪುವ, ಒಗ್ಗುವ ಉಡುಪು ಇದಾಗಿದೆ. ಹೊರಗೆ ಹೋಗಬೇಕೆಂದಿದ್ದರೆ ಸ್ವತಂತ್ರವಾಗಿ, ಕಿರಿಕಿರಿ ಇಲ್ಲದೆ ಆರಾಮಾಗಿ ಓಡಾಡುವುದಕ್ಕೆ ಎಲ್ಲರಿಗೂ ಸರಿ ಹೊಂದುವುದಲ್ಲದೆ, ಒಂದೆರಡು ಲೆಗ್ಗಿನ್ಸ್ ತೆಗೆದುಕೊಂಡರೆ ಸಾಮಾನ್ಯವಾಗಿ ಎಲ್ಲಾ ಟಾಪ್‌ಗ್ಳಿಗೂ ಮ್ಯಾಚ್ ಆಗುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ. ಅವರವರ ವಯೋಮಾನಕ್ಕೆ ತಕ್ಕಂಥ ರೆಡಿಮೇಡ್ ಟಾಪ್ ಹಾಗೂ ಪ್ಯಾಂಟ್‌ಗಳು ಸುಲಭ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುವುದರಿಂದ ಎಲ್ಲರಿಗೂ ಅನುಕೂಲಕರ. ಒಟ್ಟಿನಲ್ಲಿ , ಸಾರ್ವಕಾಲಿಕ ಉಡುಪಾಗಿರುವ ಚೂಡಿದಾರ್ ಎಲ್ಲರಿಗೂ ಪ್ರಿಯವೇ. ಇದರ ವಿಸ್ತಾರ ಹೇಗಿದೆಯೆಂದರೆ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಮದುಮಗ ಹಾಗೂ ಯುವಕರು, ಗಂಡಸರು ಧರಿಸುವ ಕುರ್ತಾ, ಶೇರ್ವಾನಿ, ಜುಬ್ಟಾ , ಪೈಜಾಮಗಳು ಗ್ರ್ಯಾಂಡ್ ಲುಕ್ ನೀಡುವಲ್ಲಿ ತನ್ನ ಛಾಇಪನ್ನು ಎತ್ತಿ ಹಿಡಿದಿವೆ. ಇಂದಿರಾ ಪಿ.