ಮುಂಬೈ: ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ವಿಚಾರದಲ್ಲಿ ಮಾಜಿ ಕೋಚ್ ರವಿ ಶಾಸ್ತ್ರಿ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಡುವೆ ಮಾತಿನ ಏಟು ಎದಿರೇಟು ನಡೆಯುತ್ತಿದೆ.
ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಕುಲದೀಪ್ ಯಾದವ್ ಅವರು ಭಾರತದ ಪ್ರಮುಖ ಸ್ಪಿನ್ನರ್ ಆಗಿರುತ್ತಾರೆ ಎಂದು 2018-19ರಲ್ಲಿ ಕೋಚ್ ರವಿ ಶಾಸ್ತ್ರಿ ಹೇಳಿದ್ದರು. ಇತ್ತೀಚೆಗೆ ಈ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ರವಿ ಅಶ್ವಿನ್, “ಶಾಸ್ತ್ರಿ ಮಾತಿನಿಂದ ನಾನು ನಲುಗಿ ಹೋಗಿದ್ದೆ” ಎಂದಿದ್ದರು.
ಇದೀಗ ಅಶ್ವಿನ್ ಮಾತಿಗೆ ಪ್ರತಿಕ್ರಿಯೆ ನೀಡಿರುವ ರವಿ ಶಾಸ್ತ್ರಿ, “ಯಾರದೋ ಟೋಸ್ಟ್ ಗೆ ಬೆಣ್ಣೆ ಹಚ್ಚುವ ಕೆಲಸ ನನ್ನದಲ್ಲ. ಯಾವುದೇ ಅಜೆಂಡಾ ಇಲ್ಲದೆ ಸತ್ಯ ಹೇಳುವುದು ಮಾತ್ರ ನನ್ನ ಕೆಲಸ” ಎಂದಿದ್ದಾರೆ.
ಇದನ್ನೂ ಓದಿ:ಅಖಾಡದಲ್ಲಿ ‘ರೈಡರ್’: ನಿಖೀಲ್ ಕುಮಾರ್ ಹೈವೋಲ್ಟೇಜ್ ಸಿನಿಮಾ
“ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಆಡಿರಲಿಲ್ಲ, ಆದರೆ ಕುಲದೀಪ್ ಆಡಿದ್ದರು, ಅಲ್ಲದೆ ಐದು ವಿಕೆಟ್ ಕೂಡ ಪಡೆದಿದ್ದರು. ಹೀಗಾಗಿ ವಿದೇಶದಲ್ಲಿ ಬಹುಶಃ ಮೊದಲ ಅಥವಾ ಎರಡನೇ ಟೆಸ್ಟ್ ಪಂದ್ಯ ಆಡುತ್ತಿದ್ದ ಮತ್ತು ಉತ್ತಮ ಪ್ರದರ್ಶನ ನೀಡುತ್ತಿದ್ದ ಹುಡುಗನಿಗೆ ಅವಕಾಶ ನೀಡುವುದು ನ್ಯಾಯವಾಗಿತ್ತು” ಎಂದು ಮಾಜಿ ಕೋಚ್ ಹೇಳಿದ್ದಾರೆ.