ನಿನ್ನನ್ನು ನೆನಪಿಸಿಕೊಳ್ಳುತ್ತಾ, ಅಮವಾಸ್ಯೆ ರಾತ್ರಿಯಲ್ಲೂ ಚಂದ್ರ ಬರ್ತಾನೆ ಅಂತ ಕಾಯ್ತಾ ಇರೋ ಹುಚ್ಚಿ ಕಣೊ ನಾನು.
ಹಾಯ್ ಹ್ಯಾಂಡ್ಸಂ…
ನಿನಗೆ ಇಪ್ಪತ್ತಾಗ್ಲಿ, ಎಪ್ಪತ್ತಾಗ್ಲಿ, ತೊಂಬತ್ತೇ ಆಗಿಬಿಡ್ಲಿ… ಆಗ ಕೂಡ ನೀನು ನನಗೆ ಯಾವಾಗಲೂ ಹೊಸದಾಗಿಯೇ ಕಾಣಿಸ್ತೀಯಾ ಕಣೊ… ನಿನ್ನ ಆಗಮನ, ನಿರ್ಗಮನ ವಿಧಿ ಲಿಖೀತ.ಆದರೆ ನನ್ನಲ್ಲಿರುವ ನೀನು ಮತ್ತು ನಿನ್ನ ನೆನಪುಗಳು ಶಾಶ್ವತ. ಯಾರೋ ಕೊಟ್ಟ ನೋವನ್ನು ಎರಡು ದಿನದಲ್ಲಿ ಮರೆಯಬಹುದು. ಆದರೆ ನಾವು ಯಾರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೋ ಅವರು ಕೊಟ್ಟ ನೋವನ್ನಾಗಲಿ, ಖುಷಿಯನ್ನಾಗಲಿ ಜೀವನ ಪೂರ್ತಿ ಮರೆಯೋಕಾಗಲ್ವಂತೆ. ನಾನು ನಿನ್ನನ್ನು ತುಂಬಾ ಪ್ರೀತಿಸ್ತೀನಿ ಅಲ್ವ, ಸೋ ನೀನು ಕೊಡೋ ಪ್ರತಿಯೊಂದು ನೋವು, ನಲಿವನ್ನು ಜೀವನ ಪೂರ್ತಿ ಮರೆಯೋಕಾಗಲ್ಲ ಗೆಳೆಯ. ಹೃದಯದಲ್ಲಿ ನೀನಿದ್ದರೆ ಮರೆಯಬಹುದಿತ್ತೇನೊ, ಆದರೆ ಹೃದಯಾನೇ ನೀನಾದರೆ ಹೇಗೆ ತಾನೆ ಮರೆಯಲಿ? ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ ಅಂದರೆ ಹೃದಯಾನೆ ಕಣೊ ಪೆದ್ದು. ಯಾಕೆ ಗೊತ್ತಾ? ಅದನ್ನು ಯಾರೂ ನೋಡೋಕಾಗಲ್ಲ, ಮುಟ್ಟೋಕಾಗಲ್ಲ!
ನೋಡಿದ ಮುಖಗಳು ಕಣ್ಮುಂದೆ ಬರದೆ ಇರಬಹುದು. ಆದರೆ, ಜೊತೆಯಾಗಿ ಕಳೆದ ನೆನಪುಗಳು ಮಾತ್ರ ಮನಸ್ಸನ್ನು ಬಿಟ್ಟು ಯಾವತ್ತೂ ಹೋಗುವುದಿಲ್ಲ. ಸಾವಿರ ಕನಸು ಸಾಲಾಗಿ ಬಂದರೂ ಮಾಸಿ ಹೋಗದು ನಿನ್ನ ನೆನಪು. ನನ್ನಿಂದ ಕಣ್ಮರೆಯಾಗಿ ನೀನು ದೂರವಿದ್ದರೂ ಮರೆತು ಬಾಳದು ಈ ಮುಗ್ಧ ಮನಸ್ಸು. ನೆನಪಿರಲಿ, ಇದು ಈ ಪುಟ್ಟ ಹೃದಯದ ಪಿಸುಮಾತು. ಇರುಳೆv ಕಳೆದೋಯ್ತು ನಿನದೇ ಕನಸಲಿ, ಹಗಲೆಲ್ಲ ಕಳೆದೊಯ್ತು ಕನಸಿನ ನೆನಪಲಿ, ಮನಸ್ಸೆಲ್ಲೊ ಹೊರಟೋಯ್ತು ನಿನ ಸೇರುವ ನೆಪದಲಿ…
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೋ ನೀನೇ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು? ಕೂಗಿ ಕೂಗಿ ನನ್ನೆದೆ ನೀನೆ ಬೇಕು ಅನ್ನುತಿದೆ. ನಿನ್ನ ನೋಡಲು ತುಂಬಾ ಆಸೆ. ಆದರೆ ಕಣ್ಣಂಚಿನಿಂದ ತುಂಬಾ ದೂರವಿರುವೆ ನೀನು. ಅಷ್ಟಕ್ಕೇ ಸುಮ್ನಾಗ್ತಿàನಾ ನಾನು? ಅದು ಹೇಗೋ ಜಾಗ ಮಾಡ್ಕೊಂಡು ನಿನ್ನ ಮನಸ್ಸಿಗೆ ಲಗ್ಗೆ ಹಾಕಲು ದಾರಿ ಹುಡುಕ್ತಾ ಇರ್ತೇನೆ. ನಿತ್ಯ ನಿರಂತರ ನಿನ್ನ ನೆನಪು ಎದೆಯಲಿ, ಮರೆತರೂ ಮತ್ತೆ ಬರುವೆ ಮಳೆಬಿಲ್ಲಂತೆ ನನ್ನ ಮನದಲಿ. ನಿನ್ನನ್ನು ನೆನಪಿಸಿಕೊಳ್ಳುತ್ತಾ, ಅಮವಾಸ್ಯೆ ರಾತ್ರಿಯಲ್ಲೂ ಚಂದ್ರ ಬರ್ತಾನೆ ಅಂತ ಕಾಯ್ತಾ ಇರೋ ಹುಚ್ಚಿ ಕಣೊ ನಾನು. ಈಗ, ಸಂಕಟಗಳ ಮಧ್ಯೆಯೇ ಬದುಕ್ತಾ ಇದೀನಿ ನಾನು. ಸಮಾಧಾನ ಮಾಡುವ ನೆಪದಲ್ಲಾದ್ರೂ ಒಂದ್ಸಲ ದೇವ್ರು ಪ್ರತ್ಯಕ್ಷವಾದಂತೆ ನನ್ನೆದುರು ನಿಲ್ತಿàಯಾ?
ಇಂತಿ ನಿನ್ನ ಹೃದಯವಾಸಿ
ಉಮ್ಮೆ ಅಸ್ಮ ಕೆ.ಎಸ್