Advertisement

ಎಬಿಡಿಯ ನೆಚ್ಚಿನ ಟಿ20 ಕ್ರಿಕೆಟಿಗ ಯಾರು?

11:48 PM Mar 06, 2023 | Team Udayavani |

ಮುಂಬಯಿ: “360 ಡಿಗ್ರಿ’ ಬ್ಯಾಟರ್‌, ಆರ್‌ಸಿಬಿಯ ಮಾಜಿ ಬಿಗ್‌ ಹಿಟ್ಟರ್‌ ಎಬಿ ಡಿ ವಿಲಿಯರ್ ತಮ್ಮ ನೆಚ್ಚಿನ ಟಿ20 ಕ್ರಿಕೆಟಿಗನನ್ನು ಹೆಸರಿಸಿದ್ದಾರೆ.

Advertisement

ಆದರೆ ಇದು ಆರ್‌ಸಿಬಿಯಲ್ಲಿ ಅವರ ಜತೆಗಾರರಾಗಿದ್ದ ಕ್ರಿಸ್‌ ಗೇಲ್‌ ಅಥವಾ ವಿರಾಟ್‌ ಕೊಹ್ಲಿ ಅಲ್ಲ. ಹಾಗಾದರೆ ಮತ್ತೆ ಯಾರು?

“ಸೂಪರ್‌ ನ್ಪೋರ್ಟ್‌’ ಜತೆ ಮಾತಾಡುತ್ತಿದ್ದ ಎಬಿಡಿ, ಪರಿಪೂರ್ಣ ಆಲ್‌ರೌಂಡರ್‌ ರಶೀದ್‌ ಖಾನ್‌ ಅವರೇ ತನ್ನ ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರ ಎಂಬುದಾಗಿ ಹೇಳಿದ್ದಾರೆ.

“ರಶೀದ್‌ ಖಾನ್‌ ಕೇವಲ ಲೆಗ್‌ಸ್ಪಿನ್‌ ಬೌಲಿಂಗ್‌ ಮೂಲಕವಷ್ಟೇ ಅಲ್ಲ, ಪರಿಣಾಮಕಾರಿ ಬ್ಯಾಟಿಂಗ್‌ ಮೂಲಕವೂ ತಂಡದ ನೆರವಿಗೆ ನಿಲ್ಲಬಲ್ಲರು. ಅಷ್ಟೇ ಅಲ್ಲ, ಅವರು ಅತ್ಯುತ್ತಮ ಫೀಲ್ಡರ್‌ ಕೂಡ ಹೌದು. ಕ್ರಿಕೆಟಿನ ಈ ಮೂರೂ ವಿಭಾಗಗಳಲ್ಲಿ ರಶೀದ್‌ ವಿಶೇಷ ನೈಪುಣ್ಯ ಸಾಧಿಸಿದ್ದಾರೆ. ಅವರು ಅತ್ಯುತ್ತಮ ಟಿ20 ಆಟಗಾರರಲ್ಲಿ ಒಬ್ಬರಲ್ಲ, ಅತ್ಯುತ್ತಮ ಆಟಗಾರನೇ ಆಗಿದ್ದಾರೆ’ ಎಂಬುದಾಗಿ ಎಬಿಡಿ ಅಫ್ಘಾನ್‌ ಆಟಗಾರನನ್ನು ಪ್ರಶಂಸಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next