Advertisement
ಆ ದಿನಗಳಲ್ಲಿ ಪದವಿ ತರಗತಿಗಳೆಂದರೆ ಯಾವುದೇ ರೀತಿಯ ಪಾಠ ಪುಸ್ತಕಗಳಿರುವುದಿಲ್ಲ, ಅಧ್ಯಾಪಕರು ಬಂದು ಒಂದು ಗಂಟೆ ಲೆಕ್ಚರ್‌ಕೊಟ್ಟು ಹೋಗುತ್ತಾರೆ… ಎಂಬಿತ್ಯಾದಿ ಅಂತೆ-ಕಂತೆಗಳನ್ನು ನಮ್ಮ ಅಕ್ಕ-ಅಣ್ಣಂದಿರು ಹೇಳುತ್ತಿದ್ದರು. ಇದನ್ನೇ ನಂಬಿ ನಾನೂ ಕಾಲೇಜಿಗೆ ಹೊರಟಿದ್ದೆ. ಆದರೆ ತರಗತಿಯಲ್ಲಿ ಕುಳಿತಮೇಲೆಯೇ ನನಗೆ ಅಸಲಿಯತ್ತಿನ ಅರಿವಾಗಿದ್ದು.
Related Articles
Advertisement
ಇಂತಹ ಕೆಲ ಸವಿನೆನಪುಗಳೊಂದಿಗೆ ನಾನು ಸ್ನಾತಕೋತ್ತರ ಶಿಕ್ಷಣ ಮುಗಿಸಿ, ಪಿ.ಹೆಚ್.ಡಿ. ಶಿಕ್ಷಣಕ್ಕೆಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸೇರಿದಾಗ ಕೋರ್ಸ್‌ವರ್ಕ್‌ನಲ್ಲಿ ನನ್ನ ಸಹಪಾಠಿಯಾಗಿದ್ದುದು ಇದೇ ಭವ್ಯಾ ಮೇಡಂ. ಈ ಆರು ತಿಂಗಳಿನಲ್ಲಿ ನಾನು ಹಾಗೂ ಭವ್ಯಾ ಮೇಡಂ ಶಿಕ್ಷಕಿ-ವಿದ್ಯಾರ್ಥಿಗಿಂತ ಅಕ್ಕ-ತಂಗಿಯಂತಿದ್ದೆವು ಎಂದರೆ ಹೆಚ್ಚು ಸೂಕ್ತ.
ಇದಾಗಿ ನನ್ನ ವೃತ್ತಿ ಜೀವನದ ಭಾಗವಾಗಿ ನಾನು ಕಲಿತ ಕಾಲೇಜಿಗೇ ಉಪನ್ಯಾಸಕಿಯಾಗಿ ಬಂದಾಗ ನಮ್ಮ ಅಂದಿನ ಹೆಚ್‌ಓಡಿ ಇಂದೂ ನನ್ನೊಂಗಿದ್ದಾರೆ, ಅಂದಿಗಿಂತಲೂ ಅಧಿಕ ಆತ್ಮೀಯರಾಗಿದ್ದಾರೆ.
ಭವ್ಯಾ ಮೇಡಂ ನನ್ನ ಶಿಕ್ಷಕಿಯಾಗಿ, ಸಹಪಾಠಿಯಾಗಿ ಇಂದು ಸಹದ್ಯೋಗಿಯಾಗಿ ನನ್ನೊಂದಿಗಿದ್ದಾರೆ. ಕಳೆದ ಹನ್ನೊಂದು ವರ್ಷಗಳ ನಂಟು ಇಂದು ಜಾಸ್ತಿಯಾಗಿದೆ. ಅವರನ್ನು ಶಿಕ್ಷಕಿ ಎಂದಷ್ಟೇ ಹೇಳಿದರು ನಮ್ಮ ಬಾಂಧವ್ಯದ ವಿವರಣೆ ಅಪೂರ್ಣವಾದೀತು. ಅಂದು ಪಾಠ ಹೇಳಿಕೊಟ್ಟವರು ಇಂದು ಜೀವನದ ಪಥದಲ್ಲಿ ಸಾಗಲು ಸಹಕಾರಿಯಾಗಿದ್ದಾರೆ. ಅವರು ಆತ್ಮೀಯತೆಯಿಂದ ಅಶೂ ಎಂದು ಕರೆದಾಗ ಆಗುವ ಅನುಭವವನ್ನು ವರ್ಣಿಸಲಾರೆ. ಊಟ ತಿಂಡಿಗಳೊಂದಿಗೆ ನೋವು ನಲಿವುಗಳನ್ನು ಹಂಚಿಕೊಳ್ಳುವಾಗ ಅಕ್ಕನಂತಿರುವ ಅವರು, ಸ್ನೇಹಿತೆಯಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ.
ಮೇಡಂ’ ಎಂದು ಮಕ್ಕಳು ಅವರನ್ನು ಹುಡುಕಿಕೊಂಡು ಬರುವಾಗ ಒಂದೊಮ್ಮೆ ನಾನೂ ಹಾಗೆಯೇ ಬರುತ್ತಿದ್ದುದು ನೆನಪಾಗುತ್ತದೆ.
ಮಾರ್ಗದರ್ಶಕಿ, ಅಕ್ಕ, ಸ್ನೇಹಿತೆ, ಸಹೋದ್ಯೋಗಿ ಹೀಗೆ ನನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಿರುವ ಭವ್ಯಾ ಮೇಡಂ ಇಂದಿಗೂ ನನ್ನ ಶಿಕ್ಷಕಿಯೇ; ನಾನು ಅವರ ವಿದ್ಯಾರ್ಥಿಯೇ. ಶೈಕ್ಷಣಿಕ ವಿಷಯಗಳ ಜತೆಗೆ ಜೀವನದ ಪಾಠವನ್ನೂ ಹೇಳಿಕೊಟ್ಟು, ಎಡವಿದಾದ ತಿದ್ದುವ, ಸಾಧಿಸಿದಾಗ ಪ್ರಶಂಸಿಸುವ ಅವರು ಅಂದಿಗೂ, ಇಂದಿಗೂ ಎಂದೆಂದಿಗೂ ನನ್ನ ನೆಚ್ಚಿನ ಶಿಕ್ಷಕಿ. ( ಭವ್ಯಾ ಮೇಡಂ.)
ಅಶ್ವಿನಿ ಅನುಶ್
ಸಂತ ಅಲೋಶಿಯಸ್ ಕಾಲೇಜು,
ಮಂಗಳೂರು