Advertisement

ಭಾರತ- ಪಾಕ್‌ ಸ್ನೇಹಿತರನ್ನಾಗಿ ನೋಡುವುದೇ ನನ್ನ ಕನಸು: ಮಲಾಲಾ

09:53 PM Feb 28, 2021 | Team Udayavani |

ನವದೆಹಲಿ: “ಗಡಿ, ವಿಭಜನೆಗಳೆಂಬ ಹಳೇ ತಣ್ತೀಶಾಸ್ತ್ರ ಇನ್ಮುಂದೆ ಪ್ರಯೋಜನಕ್ಕೆ ಬಾರದು. ಭಾರತ- ಪಾಕ್‌ ಜನತೆ ಶಾಂತಿಯಿಂದ ಜೀವಿಸುವುದನ್ನು ಬಯಸುತ್ತಿದ್ದಾರೆ. ಇವೆರಡೂ ರಾಷ್ಟ್ರದ ಜನ ಉತ್ತಮ ಸ್ನೇಹಿತರಾಗಿರುವುದನ್ನು ನೋಡುವುದೇ ನನ್ನ ಕನಸು’ ಎಂದು ನೋಬೆಲ್‌ ಪುರಸ್ಕೃತೆ, ಪಾಕ್‌ನ ಶಾಂತಿ ಹೋರಾಟಗಾರ್ತಿ ಮಲಾಲಾ ಯೂಸಫಾಯಿ ಹೇಳಿದ್ದಾರೆ.

Advertisement

ಜೈಪುರ ಸಾಹಿತ್ಯೋತ್ಸವದ ವರ್ಚುವಲ್‌ ಗೋಷ್ಠಿಯಲ್ಲಿ ಅವರು, “ಭಾರತ- ಪಾಕ್‌ ಗೆಳೆಯರಾದಾಗ ಮಾತ್ರವೇ ನಾವು ಪರಸ್ಪರ ಉಭಯ ರಾಷ್ಟ್ರಗಳಿಗೆ ಭೇಟಿ ನೀಡಲು ಸಾಧ್ಯ. ನೀವು ಪಾಕಿಸ್ತಾನಿ ನಾಟಕವನ್ನೂ, ನಾವು ಬಾಲಿವುಡ್‌ ಸಿನಿಮಾಗಳನ್ನೂ ನೋಡಬಹುದು. ಒಟ್ಟಿಗೆ ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸಬಹುದು’ ಎಂದು ಆಶಿಸಿದರು.

“ನೀವು ಇಂಡಿಯನ್‌ ಆಗಿ, ನಾವು ಪಾಕಿಸ್ತಾನಿಗಳಾಗಿ ತುಂಬಾ ಚೆನ್ನಾಗಿದ್ದೇವೆ. ಆದಾಗ್ಯೂ ನಮ್ಮ ನಡುವೆ ದ್ವೇಷ ಬಿತ್ತುತ್ತಿರುವುದು ಯಾರು ಮತ್ತು ಏಕೆ?’ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಮಾರ್ಚ್ 1ರಿಂದ ಎರಡನೇ ಹಂತದ ಲಸಿಕಾ ಅಭಿಯಾನ : 9 ಗಂಟೆಯಿಂದ ನೋಂದಣಿ ಪ್ರಾರಂಭ

ಭಾರತ- ಪಾಕ್‌ ಇನ್ನೂ “ಹತ್ತಿ’ರ!
ಭಾರತ- ಪಾಕ್‌ ನಡುವೆ ಕದನ ವಿರಾಮ ಬಳಿಕ ದ್ವಿಪಕ್ಷೀಯ ಸಂಬಂಧದಲ್ಲಿ ಕಂಡುಕೇಳರಿಯದ ಬದಲಾವಣೆಗಳಾಗುತ್ತಿವೆ. ಭಾರತದಿಂದ ಪಾಕಿಸ್ತಾನ ಹತ್ತಿ, ನೂಲನ್ನು ಆಮದು ಮಾಡಿಕೊಳ್ಳುವುದಾಗಿ ಹೇಳಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Advertisement

ಪ್ರಧಾನಿಯ ಆರ್ಥಿಕ ಸಲಹೆಗಾರ ಅಬ್ದುಲ್‌ ರಝಾಕ್‌ ಇದನ್ನು ಬಹಿರಂಗಪಡಿಸಿದ್ದು, ಮುಂದಿನ ವಾರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next