Advertisement

ನನ್ನ ಸಾಧನೆ ಪ್ರಜಾಪ್ರಭುತ್ವದ ವಿಸ್ಮಯ

04:17 PM Jan 25, 2018 | Team Udayavani |

ಹಾಸನ: ರಾಜಕಾರಣ, ಸಾಹಿತ್ಯ ಕ್ಷೇತ್ರದಲ್ಲಿ ನನ್ನ ಸಾಧನೆ ಪ್ರಜಾಪ್ರಭುತ್ವದ ವಿಸ್ಮಯ. ವಿಶಾಲ ಹೃದಯವಂತರು
ದೇಶದಲ್ಲಿದ್ದಾರೆಂಬುದಕ್ಕೆ ನನಗೆ ಸಿಕ್ಕ ಅವಕಾಶ, ಪ್ರೋತ್ಸಾಹವೇ ಸಾಕ್ಷಿ ಎಂದು ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಕವಿ ಎಂ.ವೀರಪ್ಪ ಮೊಯ್ಲಿ ನುಡಿದರು.

Advertisement

ಶ್ರೀಕ್ಷೇತ್ರ ಶ್ರವಣಬೆಳಗೊಳದ ಗೊಮ್ಮಟ ನಗರದ ಸಭಾಮಂಟಪದಲ್ಲಿ ಬುಧವಾರ ನಡೆದ ತಮ್ಮ “ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಮಹಾಕಾವ್ಯದ ಲೋಕಾರ್ಪಣೆ ನಂತರ ಮಾತನಾಡಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಮುಖ್ಯಮಂತ್ರಿ ಹುದ್ದೆಗೇರುವವರೆಗೆ, ಸಂಪರ್ಕ, ಸಂಬಂಧವೇ ಇಲ್ಲದ, ನನ್ನ ಸಮುದಾಯದಲ್ಲಿ ನಾನೊಬ್ಬನೇ ಶಾಸಕನಾಗಿದ್ದರೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದನಾಗಿ ಕೇಂದ್ರ ಸರ್ಕಾರದಲ್ಲಿ ನಾಲ್ಕೈದು ಖಾತೆಯ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿತು. 4 ಕಾದಂಬರಿ, 3 ನಾಟಕ, 3 ಮಹಾಕಾವ್ಯ ರಚನೆಯ ಮೂಲಕ ಸಾರಸ್ವತ ಲೋಕದಲ್ಲಿ ಮಾಡಿದ ಸಾಧನೆ ಧರ್ಮಸ್ಥಳದ ಡಾ.ವೀರೇಂದ್ರಹೆಗ್ಗಡೆ, ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರ ಅನುಗ್ರಹದಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಆತ್ಮಚರಿತ್ರೆ ಬರೆಯಲ್ಲ: ಇಷ್ಟೆಲ್ಲಾ ಸಾಹಿತ್ಯ ಕೃಷಿ, ರಾಜಕೀಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರ್ತಿಸಿರುವ ಕೆಲವರು ಆತ್ಮಚರಿತ್ರೆ ಬರೆಯ ಬೇಕೆಂದು ಸಲಹೆ ನೀಡಿದ್ದಾರೆ. ಆದರೆ ನನ್ನ ಆತ್ಮಚರಿತ್ರೆ ಬರೆಯುವುದಿಲ್ಲ. ನನ್ನ ಬದುಕೇ ಆತ್ಮಚರಿತ್ರೆ, ನಾನು ಬರೆದ ಕಾವ್ಯ, ಕಾದಂಬರಿಗಳೇ ಆತ್ಮಚರಿತ್ರೆ. ಜೈನಕಾಶಿಯೆಂದೇ ಕರೆಯವ ಮೂಡಬಿದಿರೆಯವನಾದ ನನ್ನ ಬಾಲ್ಯದಿಂದಲೂ ಶ್ರೀ ಬಾಹುಬಲಿಸ್ವಾಮಿ ನನ್ನ ಆಶಯದಲ್ಲಿ ನೆಲೆ ನಿಂತಿದ್ದಾನೆ.
 
ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ಬಾಹುಬಲಿ ನೆಲೆ ನಿಲ್ಲಬೇಕಾದರೆ ಚಾವುಂಡರಾಯನ ತಾಯಿಯ ಕನಸಿನಲ್ಲಿ
ಕಾಡಿದಂತೆ ನನ್ನನ್ನೂ ಬಾಹುಬಲಿ ಕಾಡಿದ್ದರಿಂದಲೇ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯ ರಚನೆ ನನ್ನಿಂದ ಸಾಧ್ಯವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮಾತನಾಡಿ, ಎಂ.ವೀರಪ್ಪಮೊಯ್ಲಿಯವರ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯ ಅಭೂತಪೂರ್ವ ಕೃತಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next