Advertisement

ನನ್ನ ಟ್ವೀಟರ್‌ ಹ್ಯಾಕ್‌ ಆಗಿದೆ : ವಿವಾದಾತ್ಮಕ ಟ್ವೀಟ್‌ ಬಳಿಕ ಸಚಿವ ಹೆಗಡೆ

09:34 AM May 18, 2019 | Team Udayavani |

ಬೆಂಗಳೂರು: ನಾಥುರಾಮ್‌ ಗೋಡ್ಸೆ ಪರ ಬರೆದಿದ್ದ ಟ್ವೀಟ್‌ವೊಂದು ಭಾರೀ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ನನ್ನ ಟ್ವೀಟರ್‌ ಖಾತೆ ವಾರದಲ್ಲಿ 2 ಬಾರಿ ಹ್ಯಾಕ್‌ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.

Advertisement

ಶುಕ್ರವಾರ ಟ್ವೀಟ್‌ಗಳನ್ನು ಮಾಡಿರುವ ಸಚಿವ ಹೆಗಡೆ ನನ್ನ ಖಾತೆ ವಾರದಲ್ಲಿ 2 ಬಾರಿ ಹ್ಯಾಕ್‌ ಆಗಿತ್ತು. ನನ್ನ ಖಾತೆಯಿಂದ ಮಾಡಲಾದ ಟ್ವೀಟ್‌ಗಳನ್ನು ಅಳಿಸಿಹಾಕಲಾಗಿದೆ. ನನ್ನ ಖಾತೆಯಿಂದ ಆದ ಪೋಸ್ಟ್‌ಗಳಿಗಾಗಿ ವಿಷಾದ ವ್ಯಕ್ತ ಪಡಿಸುತ್ತೇನೆ ಎಂದು ಬರೆದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ನನ್ನ ಟ್ವೀಟರ್‌ ಖಾತೆ ನಿನ್ನೆ ಹ್ಯಾಕ್‌ ಆಗಿತ್ತು. ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಗಾಂಧೀಜಿ ಅವರ ಕೊಲೆ ವಿಚಾರದಲ್ಲಿ ಯಾವುದೇ ಸಹಾನುಭೂತಿ ಇಲ್ಲ. ನಮಗೆಲ್ಲರಿಗೂ ದೇಶಕ್ಕಾಗಿ ಗಾಂಧೀಜಿ ಅವರು ನೀಡಿರುವ ಕೊಡುಗೆಗಳ ಬಗ್ಗೆ ಹೆಮ್ಮೆ ಇದೆ ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next